ಔರಾದ್​ನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿಯಲ್ಲಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಗುರುಬಸವ ಪಟ್ಟದ್ದೇವರು, ಶಾಸಕ ಪ್ರಭು ಚವ್ಹಾಣ್​ ಇತರರಿದ್ದರು. 
ರಾಜ್ಯ

ಶಿಕ್ಷಣದೊಂದಿಗೆ ಸಂಸ್ಕಾರ ಕೊಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಪ್ರಭು ಚವ್ಹಾಣ್​ ಕರೆ
  • ಔರಾದ್​ನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಔರಾದ್​: ವಿದ್ಯಾರ್ಥಿಗಳಿಗೆ ಪಠ್ಯ ಶಿಣದ ಜತೆ ಸಂಸ್ಕಾರ ನೀಡಬೇಕು. ಪಾಲಕರು, ಗುರು&ಹಿರಿಯರಿಗೆ ಗೌರವ ನೀಡಬೇಕು ಎಂದು ಶಾಸಕ ಪ್ರಭು ಚವ್ಹಾಣ್​ ಹೇಳಿದರು.
ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿ ಪರೀೆಗಳಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ಔರಾದ್​ ಮತ್ತು ಕಮಲನಗರ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಶಿಕರ ಮಾರ್ಗದರ್ಶನ ಪಾಲಿಸಬೇಕು. ಶಿಣದೊಂದಿಗೆ ಕ್ರೀಡೆ ಮತ್ತು ಸಾಂಸತಿಕ ಚಟುವಟಿಕೆಗಳಲ್ಲೂ ಸಕ್ರಿಯ ಭಾಗವಹಿಸಿ ಸರ್ವತೋಮುಖ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಮ್ಮ ೇತ್ರದ ಮಕ್ಕಳು ಡಿಸಿ, ಎಸಿ, ತಹಸೀಲ್ದಾರ್​, ವೆದ್ಯರು, ಇಂಜಿನಿಯರ್​ ಸೇರಿ ಉನ್ನತ ಅಧಿಕಾರಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಎಲ್ಲಿಯಾದರೂ ಹೋದಾಗ ನಾನು ಔರಾದ್​ ೇತ್ರದವನು ಎಂದು ಹೆಮ್ಮೆಯಿಂದ ಹೇಳುವಂತಹ ಸಾಧನೆ ಮಾಡಬೇಕು. ನನಗೆ ಅದಕ್ಕಿಂತ ದೊಡ್ಡ ಸೌಭಾಗ್ಯ ಮತ್ತೊಂದಿಲ್ಲ ಎಂದರು.
ಎಲ್ಲ ೇತ್ರಗಳ ಅಭಿವದ್ಧಿಗೆ ಮುಖ್ಯವಾಗಿರುವ ಶಿಣದ ಪ್ರಗತಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದು, ಅದರಂತೆ ಎಲ್ಲ ಗ್ರಾಮಗಳಲ್ಲಿ ಶಾಲೆ, ಅಂಗನವಾಡಿ ಕೇಂದ್ರಗಳನ್ನು ತೆರೆದಿದ್ದೇನೆ. ಪಿಯುಸಿ, ಪದವಿ, ಐಟಿಐ, ಡಿಪ್ಲೊಮಾ ಕಾಲೇಜು ತಂದಿದ್ದು, ಬೇಡಿಕೆಗೆ ಅನುಗುಣ ಎಲ್ಲ ಕಡೆ ಮುರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್​ ಅಂಬೇಡ್ಕರ್​ ವಸತಿ ಶಾಲೆ ಹಾಗೂ, ವಸತಿ ನಿಲಯಗಳನ್ನು ನಿರ್ಮಿಸುತ್ತಿದ್ದೇನೆ ಎಂದು ತಿಳಿಸಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿದರು. ತಹಸೀಲ್ದಾರ್​ ಮಹೇಶ ಪಾಟೀಲ್​, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ್​, ಬಿಇಒ ವಾಗಂಬರ ಗಾಯಕವಾಡ, ೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ್​, ಮುಖಂಡರಾದ ವಸಂತ ಬಿರಾದಾರ್​, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ್​ ಮುಂಗನಾಳ, ಶಿವರಾಜ ಅಲ್ಮಾಜೆ, ಸಚಿನ್​ ರಾಠೋಡ್​, ರಾಮಶೆಟ್ಟಿ ಪನ್ನಾಳೆ, ಪ್ರತಿಕ್​ ಚವ್ಹಾಣ್​, ಅಧಿಕಾರಿಗಳಾದ ಸಂಜಯ ಮೇತ್ರೆ, ಶಾಲಿವಾನ ಉದಗೀರೆ, ಬಲಭೀಮ ಕುಲಕರ್ಣಿ, ರಾಜಕುಮಾರ ಹಲಮಂಡಗೆ, ನಯಿಮೊದ್ದೀನ್​, ಪ್ರವಿಣ ಕೋಳೆಕರ್​, ಬಾಲಾಜಿ ಅಮರವಾಡಿ, ಓಂಪ್ರಕಾಶ ದಡ್ಡೆ, ಗುರುನಾಥ ರಾಜಗೀರಾ ಇತರರಿದ್ದರು.
ಟಾಪರ್​ಗಳಿಗೆ ನಗದು ಬಹುಮಾನ
ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯುಸಿಯಲ್ಲಿ ತಾಲೂಕಿನ ಪ್ರಥಮ ಟಾಪರ್​ಗಳಿಗೆ 21 ಸಾವಿರ ರೂ., ದ್ವೀತಿಯ 11 ಸಾವಿರ ರೂ. ಹಾಗೂ ತತೀಯ ಟಾಪರ್​ಗೆ 7 ಸಾವಿರ ರೂ. ನಗದು ಬಹುಮಾನ ಮತ್ತು ಶೇ.80ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಡುಗೊರೆ ಜತೆಗೆ ಸಸಿ ನೀಡಿ ಸನ್ಮಾನಿಸುವ ಮೂಲಕ ಶಾಸಕ ಚವ್ಹಾಣ್​ ಸ್ಫೂರ್ತಿ ತುಂಬಿದರು. ವಿದ್ಯಾರ್ಥಿಗಳ ಸಾಧನೆಗೆ ಪ್ರೋತ್ಸಾಹ ನೀಡಿದ ಪಾಲಕರು ಮತ್ತು ಶಾಲೆ ಮುಖ್ಯಗುರುಗಳು ಹಾಗೂ ಶೇ.100 ಲಿತಾಂಶ ದಾಖಲಿಸಿದ ಶಾಲೆ ಮುಖ್ಯಗುರುಗಳಿಗೆ ವಿಶೇಷ ಸನ್ಮಾನ ಮಾಡಿದರು.
"

ಪ್ರಸಕ್ತ ವರ್ಷದ ಲಿತಾಂಶದಲ್ಲಿ ಔರಾದ್​ ತಾಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಪ್ರಥಮ ಬರಬೇಕು ಎಂಬುದು ನನ್ನ ಸಂಕಲ್ಪ. 100ಕ್ಕೆ ನೂರರಷ್ಟು ಲಿತಾಂಶ ತರಲು ಅಧಿಕಾರಿಗಳು ಮತ್ತು ಶಿಕರು ಪ್ರಯತ್ನಿಸಬೇಕು.

— > ಪ್ರಭು ಚವ್ಹಾಣ್​ ಶಾಸಕ
"

ಶಾಸಕ ಪ್ರಭು ಚವ್ಹಾಣ್​ ಅವರು ಎಸ್ಸೆಸ್ಸೆಲ್ಸಿ, ದ್ವೀತಿಯ ಪಿಯುಸಿಯಲ್ಲಿ ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ಅವರ ಪಾಲಕರು ಮತ್ತು ಶಾಲೆ ಮುಖ್ಯಗುರುಗಳನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ.

— > ಶ್ರೀ ಗುರುಬಸವ ಪಟ್ಟದ್ದೇವರು ಭಾಲ್ಕಿ ಹಿರೇಮಠ ಸಂಸ್ಥಾನ