ಬಸ್​ ನಿಲುಗಡೆಗೆ ಸಾರಿಗೆ ಸಂಸ್ಥೆ ಸ್ಪಂದನೆ bus stop 
ರಾಜ್ಯ

ಬಸ್​ ನಿಲುಗಡೆಗೆ ಸಾರಿಗೆ ಸಂಸ್ಥೆ ಸ್ಪಂದನೆ bus stop

ಮುಳಬಾಗಿಲು: ಅಮರಜ್ಯೋತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಸೇರಿದಂತೆ ಮುತ್ಯಾಲಪೇಟೆಯ ವಾಸುದೇವ ರೆಡ್ಡಿ ಲೇಔಟ್​, ಫುಲ್​ಚಂದ್​ ಬಡಾವಣೆ, ಮಂಜುನಾಥ ಕಾಲನಿ ನಿವಾಸಿಗಳ ಬೇಡಿಕೆಯಂತೆ ನಗರದ ವರದರಾಜ ಚಿತ್ರ ಮಂದಿರದ ಹತ್ತಿರ ಮತ್ತು ಜಯಮ್ಮ ಕೃಷ್ಣಪ್ಪ ಛತ್ರದ ಬಳಿ ಕೆಎಸ್​ಆರ್​ಟಿಸಿ ಬಸ್​ ನಿಲುಗಡೆ ಕೋರಿಕೆಗೆ ಸಾರಿಗೆ ಸಂಸ್ಥೆ ಸ್ಪಂದಿಸಿದೆ.bus stop
ವಾಸುದೇವರೆಡ್ಡಿ ಮತ್ತು ಅಮರ ಜ್ಯೋತಿ ಶಾಲೆಯ ಸುತ್ತಮುತ್ತಲಿನ ಬಡಾವಣೆಗಳ ಶ್ರೀ ನೇತಾಜಿ ಸುಭಾಷ್​ಚಂದ್ರ ಬೋಸ್​ ಸಂಘದ ಪದಾಧಿಕಾರಿಗಳ ಕೋರಿಕೆ ಮೇರೆಗೆ ಬಸ್​ ನಿಲುಗಡೆಗಾಗಿ ಬೋರ್ಡ್​ ಅಳವಡಿಕೆ ಮಾಡಲಾಗಿದೆ. ಸಾರಿಗೆ ಸಂಸ್ಥೆ ಪ್ರಯಾಣಿಕರು ಮತ್ತು ಸಾರ್ವಜನಿಕರ ಸೇವೆಗೆ ಕಾರ್ಯನಿರ್ವಹಿಸುತ್ತಿದೆ ಎಂದು ಘಟಕ ವ್ಯವಸ್ಥಾಪಕ ಅನ್ಸರ್​ ಪಾಷಾ ತಿಳಿಸಿದ್ದಾರೆ.
ನೇತಾಜಿ ಸುಭಾಷ್​ಚಂದ್ರ ಬೋಸ್​ ಸಂಘ ಸದಸ್ಯ ನಿವೃತ್ತ ಶಿಕ್ಷಕ ಬಿ.ಚಲಪತಿ, ಮಧ್ಯಾಹ್ನ ಬಿಸಿಊಟ ಯೋಜನೆಯ ಅಧಿಕಾರಿ ಪಿ.ವಾಸು, ನಿವೃತ್ತ ಆರಕ್ಷಕ ಅಧಿಕಾರಿ ನಂಜುಂಡಪ್ಪ, ನಿವೃತ್ತ ಶಿಕ್ಷಕರಾದ ಶ್ರೀನಿವಾಸ ಗೌಡ, ಪಲ್ಲವಿ, ನಿಚ್ಚನಗುಂಟೆ ರಮೇಶ್​ ಇದ್ದರು.