Transfer people in the same area. 
ರಾಜ್ಯ

ಒಂದೇ ೇತ್ರದಲ್ಲಿದ್ದವರನ್ನು ವರ್ಗಾವಣೆ ಮಾಡಿ

ತುಮಕೂರು ಡೆಸ್ಕ್
ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ವ್ಯಾಪ್ತಿಯ ಸಾರ್ವಜನಿಕರ ಹಾಗೂ ರೈತರ ಕುಂದು&ಕೊರತೆ ಆಲಿಸುವ ನಿಟ್ಟಿನಲ್ಲಿ ಶಾಸಕ ಸಿ.ಬಿ.ಸುರೇಶ್​ ಬಾಬು 48ನೇ ವಾರದ ಜನಸಂಪರ್ಕ ಸಭೆಯನ್ನು ಶಿರಾ ತಾಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದರು.
ರೈತರ ಅವಾಲುಗಳನ್ನು ಆಲಿಸಿದ ಶಾಸಕರು, ಸ್ಥಳದಲ್ಲೆ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದರು. ಇನ್ನು ಕೆಲವು ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ವಾಟ್ಸ್​ಆ್ಯಪ್​ ಮುಖಾಂತರ ಪಿಡಿಎ್​ ರೂಪದಲ್ಲಿ ವರ್ಗಾವಣೆ ಮಾಡಿದ್ದು, ಮುಂದಿನ ಸಭೆಯಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು.
ನಂತರ ಮಾತನಾಡಿದ ಶಾಸಕರು, ಬಹಳಷ್ಟು ವರ್ಷಗಳಿಂದ ಒಂದೇ ಕಾರ್ಯೇತ್ರದಲ್ಲಿ ನಿಯುಕ್ತಿಗೊಂಡಿರುವ ಗ್ರಾಮ ಲೆಕ್ಕಾಧಿಕಾರಿಗಳನ್ನು ಬೇರಡೆಗೆ ವರ್ಗಾಯಿಸಬೇಕು, ಇದರಿಂದ ಭ್ರಷ್ಟಾಚಾರ ಕಡಿಮೆ ಆಗುತ್ತದೆ. ಹಾಗೂ ಕ್ರಿಯಾಶೀಲವಾಗಿ ಕೆಲಸ ಮಾಡಲು ಅನುಮಾಡಿಕೊಂಟ್ಟಂತಾಗುತ್ತದೆ ಎಂದರು.
ರಾಮಲಿಂಗಾಪುರದ ಗ್ರಾಮ ಲೆಕ್ಕಾಧಿಕಾರಿ ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಗರಂ ಆದ ತಹಸೀಲ್ದಾರ್​, ಶ್ರೀವಾಗಿ ಅರ್ಜಿಗಳ ವಿಲೇವಾರಿ ಮಾಡುವಂತೆ ಖಡಕ್​ ಎಚ್ಚರಿಕೆ ನೀಡಿದರು.
ಮಾದೇನಹಳ್ಳಿ ಸರ್ವೇ ನಂ. 9ರಲ್ಲಿ 36 ಕುಂಟೆ ಜಮೀನನ್ನು ಖಾತೆ ಮಾಡಿಕೊಳ್ಳಲು ಕೇಸ್​ ವರ್ಕರ್​ ವೀರೇಶ್​ 35,000 ಲಂಚ ಕೇಳುತ್ತಿದ್ದಾರೆ ಎಂದು ಸಾರ್ವಜನಿಕರು ಬಹಿರಂಗವಾಗಿ ತಹಸೀಲ್ದಾರ್​ ಹಾಗೂ ಶಾಸಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್​ ಭರವಸೆ ನೀಡಿದ ನಂತರ ಸಾರ್ವಜನಿಕರು ಸಮಾಧಾನಗೊಂಡರು.
ಬುಕ್ಕಾಪಟ್ಟಣ ಪ್ರಭಾರ ಕಂದಾಯ ಅಧಿಕಾರಿ ಪವನ್​, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ನಿರ್ದೇಶಕ ಮಂಜು ಪ್ರಸಾದ್​, ಮುಖಂಡರಾದ ಬಿ.ಆರ್​.ಮಂಜುನಾಥ್​, ಮಾದೇನಹಳ್ಳಿ ಲೋಕೇಶ್​, ಮುದ್ದು ಗಣೇಶ್​, ಲಕ್ಷಿ$್ಮನರಸಿಂಹಯ್ಯ, ಚಿಕ್ಕಣ್ಣ, ಕೆಂಗಣ್ಣ ಸೇರಿದಂತೆ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಇದ್ದರು.