- ಕಡ್ಡಾಯ ವರ್ಗಾವಣೆ ಹಾಗೂ ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆಗಳನ್ನು ಮೇ ಮತ್ತು ಜುಲೈನೊಳಗೆ ಕೈಗೊಳ್ಳುವಂತೆ ತಿಳಿಸಲಾಗಿದೆ.
- ವಿಶೇಷ ಪ್ರಕರಣಗಳಿಗೆ ಅನ್ವಯಿಸುವ ಬೋಧಕರು ಅಗತ್ಯ ದಾಖಲೆಗಳೊಂದಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿಯಲ್ಲಿ ವರ್ಗಾವಣೆಗೆ ಅರ್ಜಿ
- 2024ರ ವರ್ಗಾವಣೆಯಲ್ಲಿ ಭಾಗವಹಿಸಿದ ಎಲ್ಲ 436 ಬೋಧಕರಿಗೆ ಮುಂಬರುವ ವರ್ಗಾವಣೆಗಳಲ್ಲಿ ಭಾಗಹಿಸಲು ಅವಕಾಶ
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಬೋಧಕರ ವರ್ಗಾವಣೆ ಕೌನ್ಸೆಲಿಂಗ್ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಕಡ್ಡಾಯ ವರ್ಗಾವಣೆ ಹಾಗೂ ವಿಶೇಷ ಪ್ರಕರಣಗಳ ಕೋರಿಕೆ ವರ್ಗಾವಣೆಗಳನ್ನು ಮೇ ಮತ್ತು ಜುಲೈನೊಳಗೆ ಕೈಗೊಳ್ಳುವಂತೆ ತಿಳಿಸಲಾಗಿದೆ. ವಿಶೇಷ ಪ್ರಕರಣಗಳಿಗೆ ಅನ್ವಯಿಸುವ ಬೋಧಕರು ಅಗತ್ಯ ದಾಖಲೆಗಳೊಂದಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿಯಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಬಹುದು.
ವಿಶೇಷ ವರ್ಗಾವಣೆಗೆ ಅವಕಾಶ:
ನ್ಯಾಯಾಲಯದ ಆದೇಶದಂತೆ 2024ರ ವರ್ಗಾವಣೆಯಲ್ಲಿ ಭಾಗವಹಿಸಿದ ಎಲ್ಲ 436 ಬೋಧಕರಿಗೆ ಮುಂಬರುವ ವರ್ಗಾವಣೆಗಳಲ್ಲಿ ಭಾಗಹಿಸಲು ಅವಕಾಶ ನೀಡಲಾಗಿದೆ. ಇದರಲ್ಲಿ 199 ಮಂದಿ ವರ್ಗಾವಣೆಯಲ್ಲಿ ಭಾಗವಹಿಸಲು ಇಚ್ಛಿಸಿದ್ದಾರೆ ಎಂದು ತಿಳಿಸಿದೆ.
ತಾತ್ಕಾಲಿಕ ವೇಳಾಪಟ್ಟಿ
ಮೇ 11 ಬೋಧಕರ ವರ್ಗಾವಣೆ ಪ್ರಕಟಣೆ
ಮೇ 29 ವರ್ಗಾವಣೆಗೆ ಒಳಪಡಲಿರುವ ಬೋಧಕರ ವಲಯವಾರು ಮತ್ತು ವರ್ಗಾವಾರು ತಾತ್ಕಾಲಿಕ ಪಟ್ಟಿ ಪ್ರಕಟ
ಜೂನ್ 5 ವಿನಾಯಿತಿ ಕೋರಿ ಅರ್ಜಿ ಸಲ್ಲಿಸಲು ಅವಕಾಶ
ಜೂನ್ 16 ತಾತ್ಕಾಲಿಕ ಆದ್ಯತಾ ಪಟ್ಟಿ ಪ್ರಕಟ
ಜೂ.19 ಆದ್ಯತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಜೂ.20 ಅಂತಿಮ ಆದ್ಯತಾ ಪಟ್ಟಿ ಪ್ರಕಟ, ಕೌನ್ಸೆಲಿಂಗ್ ಹುದ್ದೆಗಳ ಪ್ರಕಟಣೆ