ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಸರ್ಕಾರಿ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬೀದರ್ ವಿವಿ ಉಪಕುಲಪತಿ ಡಾ.ಕೆ.ಸಿ.ವೀರಣ್ಣ ಅವರನ್ನು ಸೋಮವಾರ ಸನ್ಮಾನಿಸಲಾಯಿತು. ಬಸವರಾಜ ಭತಮುರ್ಗೆ, ವಿಜಯಕುಮಾರ ಪಾಟೀಲ್, ಶ್ರೀದೇವಿ ಬಿ., ಡಾ.ಎಚ್.ಮಂಜುನಾಥ ಇತರರಿದ್ದರು.
- ಉಪಕುಲಪತಿ ಡಾ.ಕೆ.ಸಿ.ವೀರಣ್ಣ ಹೇಳಿಕೆ
- ಮಹಾಗಾಂವ್ನಲ್ಲಿ ರಾಷ್ಟ್ರೀಯ ಕಾರ್ಯಾಗಾರ
ಕಮಲಾಪುರ: ತಾಂತ್ರಿಕ ಯುಗಕ್ಕೆ ತಕ್ಕಂತೆ ಅಗತ್ಯ ತರಬೇತಿ ನೀಡಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಕೆಲಸ ಮಹಾವಿದ್ಯಾಲಯಗಳಿಂದ ಆಗಬೇಕಿದೆ ಎಂದು ಬೀದರ್ ಪಶುವೈದ್ಯಕಿಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಕೆ.ಸಿ.ವೀರಣ್ಣ ಸಲಹೆ ನೀಡಿದರು.
ಮಹಾಗಾಂವ್ ಕ್ರಾಸ್ ಸರ್ಕಾರಿ ಹೈನು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ 18ನೇ ಸಂಸ್ಥಾಪನಾ ದಿನ ಮತ್ತು ರಾಷ್ಟ್ರೀಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಜೆಆರ್ಎ್ ಪರೀಕ್ಷೆಯಲ್ಲಿ ಟಾಪ್ 4ರಲ್ಲಿ ಪಾಸಾಗಿದ್ದು ಶ್ಲಾಘನೀಯ ಎಂದರು.
ಬೀದರ್ ವಿವಿ ಬೋರ್ಡ್ ಸದಸ್ಯ ಬಸವರಾಜ ಭತಮುರ್ಗೆ ಮಾತನಾಡಿ, ಅಮೂಲ್ ಜತೆ ಇಂದು ಕೆಎಂಎಫ್ ತೀವ್ರ ಸ್ಪರ್ಧೆ ನೀಡುತ್ತಿದೆ ಎಂದರೆ ಅದಕ್ಕೆ ನಮ್ಮ ಶಿಕ್ಷಣವೇ ಮುಖ್ಯ ಕಾರಣ. ಮಹಾಗಾಂವ್ ಮಹಾವಿದ್ಯಾಲಯಕ್ಕೆ ಕಾನ್ಫರೆನ್ಸ ಹಾಲ್, ಕ್ರೀಡಾಂಗಣ, ಪಿಸಿ ಸೆಂಟರ್ ಒದಗಿಸುವಂತೆ ಮನವಿ ಸಲ್ಲಿಸಿದ್ದು, ಬೋರ್ಡ್ ಸದಸ್ಯರ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪ್ರಮುಖರಾದ ವಿಜಯಕುಮಾರ ಪಾಟೀಲ್, ಶ್ರೀದೇವಿ ಬಿ., ಡಾ.ಎಚ್.ಮಂಜುನಾಥ, ಡಾ.ಬಿ.ವಿ.ಶಿವಪ್ರಕಾಶ, ಡಾ.ಎಸ್.ಆರ್.ಸೋಮಶೇಖರ, ಡಾ.ದಿಲೀಪಕುಮಾರ, ಡಾ.ಎಚ್.ಅರುಣಕುಮಾರ, ಡಾ.ಎಂ.ಕೆ.ತಂಡ್ಲೆ, ಡಾ.ಸಚೀಂದ್ರ ಬಾಬು, ಡಾ.ಶ್ರೀಕಾಂತ ಕುಲಕರ್ಣಿ, ಡಾ.ದೇವರಾಜು, ಪೊ.ಬಸವಭಾರತಿ ಗಾದ್ಗಿಕರ್, ಡಾ.ಶಶಿಕುಮಾರ್ ಇತರರಿದ್ದರು.
ಹಳೆಯ ವಿದ್ಯಾರ್ಥಿಗಳ ಸಂದ ಅಧ್ಯ ಡಾ.ಆದರ್ಶ ಕಲ್ಲಾ ಪ್ರಾಸ್ತಾವಿಕ ಮಾತನಾಡಿದರು. ಅಯಕುಮಾರ ಸ್ವಾಗತಿಸಿದರು. ಮಧುಸೂದನ್ ಹಾಗೂ ಪ್ರಿಯಾಂಕಾ ಕಲ್ಯಾಣ್ ನಿರೂಪಣೆ ಮಾಡಿದರು.
ಕಕ ಭಾಗದಲ್ಲಿ ಬರ ಆವರಿಸಿದದ್ದು, ಅನ್ನದಾತ ಸಂಕಷ್ಟದಲ್ಲಿದ್ದಾನೆ. ವಿದ್ಯಾರ್ಥಿಗಳು ಗ್ರಾಮಗಳಿಗೆ ತೆರಳಿ ಜಲ ಸಂರಕ್ಷಣೆ ಕುರಿತು ಜಾಗೃತಿ ಕೈಗೊಳ್ಳಬೇಕು. ಬಡವರ ಆರ್ಥಿಕ ಸ್ಥತಿ ಸುಭದ್ರಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
— > ಡಾ.ಕೆ.ಸಿ.ವೀರಣ್ಣ, ಉಪ ಕುಲಪತಿ, ಬೀದರ್ ಪಶು ವಿವಿ