Traffic ನೆಲಮಂಗಲದ ಮುಖ್ಯರಸ್ತೆಯಲ್ಲಿ ಹೊಸ ಬಟ್ಟೆ ಅಂಗಡಿ ತೆರೆದು ದರ ರಿಯಾಯಿತಿ ಜತೆಗೆ ಆರಂಭಿಕ ಕೊಡುಗೆ ನೀಡಿದ್ದರಿಂದ ಅಂಗಡಿ ಮುಂದೆ ಗ್ರಾಹಕರ ಸಂಚಾರ ಸಿಕ್ಕು ಉಂಟಾಗಿತ್ತು.
- ನೆಲಮಂಗಲದಲ್ಲಿ ಸಂಚಾರ ಸಿಕ್ಕು
- ಅಂಗಡಿಯನ್ನೇ ಮುಚ್ಚಿಸಿದ ಪೊಲೀಸರು!
ನೆಲಮಂಗಲ: ನಗರದ ಮುಖ್ಯರಸ್ತೆಯಲ್ಲಿ ಹೊಸ ಬಟ್ಟೆ ಅಂಗಡಿ ಉದ್ಘಾಟನೆ ಪ್ರಯುಕ್ತ ನೀಡಲಾದ ಭರ್ಜರಿ ರಿಯಾಯಿತಿ ಹಾಗೂ ಕೊಡುಗೆಗಳ ಪ್ರಚಾರವು ತೀವ್ರ ನೂಕುನುಗ್ಗಲು ಮತ್ತು ವಾಹನದಟ್ಟಣೆಗೆ ಕಾರಣವಾಯಿತು.
ತಾಲೂಕು ಕಚೇರಿ ಬಳಿ ಪಿಎಲ್ಡಿ ಬ್ಯಾಂಕ್ ಕಟ್ಟಡದಲ್ಲಿ ಹೊಸ ಬಟ್ಟೆ ಅಂಗಡಿ ಉದ್ಘಾಟನೆ ಅಂಗವಾಗಿ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದರಿಂದ, ವಿಷಯ ತಿಳಿದ ನೂರಾರು ಗ್ರಾಹಕರು ಒಮ್ಮೆಲೆ ಅಂಗಡಿ ಮುಂದೆ ಜಮಾಯಿಸಿದ್ದರು. ಅಂಗಡಿ ಬಾಗಿಲು ತೆರೆಯುತ್ತಿದ್ದಂತೆ ಒಳಗೆ ಹೋಗಲು ಮುಗಿಬಿದ್ದಿದ್ದರಿಂದ ಪರಿಸ್ಥಿತಿ ನಿಯಂತ್ರಣ ತಪ್ಪಿತು.
ಮುಖ್ಯರಸ್ತೆಯಲ್ಲಿ ಸೃಷ್ಟಿಯಾಗಿದ್ದ ಸಂಚಾರ ಸಿಕ್ಕು ಹಾಗೂ ಗ್ರಾಹಕರ ನೂಕುನುಗ್ಗಲನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಪೊಲೀಸರು ಕೊನೆಗೆ ಬಟ್ಟೆ ಅಂಗಡಿಯ ಬಾಗಿಲನ್ನು ಮುಚ್ಚಿಸಿದರು. ಅಂಗಡಿ ಬಂದ್ ಆದರೂ ನಿರಾಶರಾಗದ ಗ್ರಾಹಕರು ಅಲ್ಲಿಂದ ಕದಲಲಿಲ್ಲ. ಪೊಲೀಸರು ಅಂಗಡಿ ಮುಚ್ಚಿರುವ ಮಾಹಿತಿ ನೀಡಿದ ಹೊರತಾಗಿಯೂ, ಗ್ರಾಹಕರು ನಗರಸಭಾ ಕಚೇರಿ ಮುಂಭಾಗದವರೆಗೂ ಸುದೀರ್ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು.
ಅಂಗಡಿ ಮಾಲೀಕರು ಗ್ರಾಹಕರನ್ನು ಸೆಳೆಯಲು ವಿಶಿಷ್ಟ ಕೊಡುಗೆಗಳನ್ನು ಪ್ರಕಟಿಸಿದ್ದರು. 1 ರೂ.ಗೆ ಶರ್ಟ್ ಹಾಗೂ ಸುಗಂಧ ದ್ರವ್ಯ (ಪಫ್ಯೂರ್ಮ್), 99 ರೂ.ಗೆ ಜೀನ್ಸ್ ಪ್ಯಾಂಟ್, 199 ರೂ.ಗೆ ಪ್ಯಾಂಟ್&ಶರ್ಟ್ ಸೇರಿ ಭಾರಿ ರಿಯಾಯಿತಿ ೂಷಿಸಲಾಗಿತ್ತು. ಈ ಆಫರ್ ಆಕರ್ಷಣೆಗೆ ಒಳಗಾದ ಯುವಕ&ಯುವತಿಯರುTraffic ಸೇರಿ ನೂರಾರು ಜನ ಬಟ್ಟೆ ಖರೀದಿಸಲು ಮುಗಿಬಿದ್ದರು.
ಒಮ್ಮೆಲೆ ಜನ ಸೇರಿದ್ದರಿಂದ ನಗರದ ಮುಖ್ಯರಸ್ತೆಯಲ್ಲಿ ಸಂಪೂರ್ಣ ವಾಹನದಟ್ಟಣೆ ಉಂಟಾಯಿತು.
ಪರಿಸ್ಥಿತಿ ಹತೋಟಿಗೆ ತರಲು ಅಂಗಡಿಯ ಮುಂಭಾಗದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಜನರನ್ನು ನಿಯಂತ್ರಿಸಬೇಕಾಯಿತು. ಇತ್ತ ಪೊಲೀಸ್ ಠಾಣೆ ಮುಂಭಾಗದ ವೃತ್ತದಿಂದ ನಗರದ ಕಡೆಗೆ ಬರುವ ವಾಹನಗಳನ್ನು ಕುಣಿಗಲ್ ವೃತ್ತದ ಕಡೆಗೆ ಡೈವರ್ಟ್ ಮಾಡಲಾಯಿತು. ಈ ಮಧ್ಯೆ, ಖಾಸಗಿ ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಿಂತು ವಾಹನಗಳನ್ನು ನಿಯಂತ್ರಿಸುತ್ತಿದ್ದ ದೃಶ್ಯವೂ ಕಂಡುಬಂತು. ಇಷ್ಟೆಲ್ಲಾ ಗೊಂದಲ ಸೃಷ್ಟಿಯಾದರೂ ಅಂಗಡಿ ಮಾಲೀಕರಾಗಲಿ ಅಥವಾ ಸಿಬ್ಬಂದಿಯಾಗಲಿ ಜನದಟ್ಟಣೆ ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಯಿತು.