Bengaluru Peenya flyover banned  
ರಾಜ್ಯ

ಬೆಂಗಳೂರು ವಾಹನ ಸವಾರರೇ ಗಮನಿಸಿ; ಆ.5ರವರೆಗೂ ಪೀಣ್ಯ ಫ್ಲೈ ಓವರ್​​ನಲ್ಲಿ ಸಂಚಾರ ಬಂದ್​​, ಪರ್ಯಾಯ ಮಾರ್ಗವೇನು?..Peenya flyover banned

ಪ್ರಮುಖ ಮುಖ್ಯಾಂಶಗಳು

  • ಪೀಣ್ಯ ಮೇಲ್ಸೇತುವೆ ಮೇಲೆ ಡಾಂಬರೀಕರಣ ಕಾರ್ಯ, ವಾಹನ ಸಂಚಾರ ತಾತ್ಕಾಲಿಕ ಬಂದ್​
  • ಆಗ್ಸ್ಟ್​ 5ರವರೆಗೆ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ಯಾವುದೇ ವಾಹನ ಸಂಚರಿಸುವಂತಿಲ್ಲ
  • ವೀಕೆಂಡ್​ನಲ್ಲಿ ಮಧ್ಯರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಯಾವುದೇ ರೀತಿಯ ವಾಹನ ಸಂಚರಿಸುವಂತಿಲ್ಲ
Bengaluru Peenya flyover banned: ಪೀಣ್ಯ ಎಲಿವೇಟೆಡ್​​​ ಮೇಲ್ಸೇತುವೆ(ಶಿವಕುಮಾರ ಸ್ವಾಮೀಜಿ ಫ್ಲೈಓವರ್​​) ಮೇಲೆ  ಡಾಂಬರೀಕರಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆ, ಆಗ್ಸ್ಟ್​ 5ರವರೆಗೆ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆವರೆಗೆ ಎಲ್ಲರೀತಿಯ ವಾಹನ ಸಂಚಾರಕ್ಕೂ ನಿರ್ಬಂಧವಿಧಿಸಿ, ಪರ್ಯಾಯ ಮಾರ್ಗ ಅನುಸರಿಸಲು ಸೂಚನೆ ನೀಡಲಾಗಿದೆ. 
ವೀಕೆಂಡ್​ನಲ್ಲಿ  ದೂರದ ಊರುಗಳಿಗೆ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ  ಮಧ್ಯರಾತ್ರಿ 12ರಿಂದ ಬೆಳಿಗ್ಗೆ 5ರವರೆಗೆ ಪೀಣ್ಯ ಫ್ಲೈಓವರ್​ ಮುಖೇನ ಬೆಂಗಳೂರಿಗೆ ಬರುವ ವಾಹನಗಳಿಗೆ ನಿಷೇದಿಸದೆ. ಕೆನ್ನಮೆಟಲ್​​​ ಫ್ಯಾಕ್ಟರಿಯಿಂದ, ಎಸ್‌ಆರ್‌ಎಸ್ ವರೆಗೆ ಈ ನಿರ್ಬಂಧ ಅನ್ವಯಿಸಲಿದೆ.

ಟ್ರಾಫಿಕ್​ ಹೆಚ್ಚಳ ಸಾಧ್ಯತೆ

ಪೀಣ್ಯ ಫ್ಲೈ ಓವರ್​ 21 ಜಿಲ್ಲೆಗೆ ಹಾಗೂ ಹಲವಾರು ರಾಜ್ಯಕ್ಕೆ ಸಂಪರ್ಕಿಸುತ್ತದೆ. ಫ್ಲೈಓವರ್​ ಮೇಲೆ ವಾಹನ ಸಂಚಾರ ನಿರ್ಬಂಧ ಹೇರಿರುವ ಕಾರಣ,  ಎಚ್ ಕ್ರಾಸ್ ಜಂಕ್ಷನ್, ಚೊಕ್ಕಸಂದ್ರ ಜಂಕ್ಷನ್, ಎಸ್‌ಎಂ ಸರ್ಕಲ್, ಪಿಎಸ್ ಜಂಕ್ಷನ್ ಮತ್ತು ಎಸ್‌ಆರ್‌ಎಸ್ ಜಂಕ್ಷನ್‌ಗಳಲ್ಲಿ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಯಾಣದ ಗುಣಮಟ್ಟವನ್ನು ಸುಧಾರಿಸಲು, ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರಸ್ತೆಯ ಬಾಳಿಕೆಯನ್ನು ವಿಸ್ತರಿಸಲು ಆಸ್ಫಾಲ್ಟ್ ರೀಸರ್ಫೇಸಿಂಗ್ ಕೆಲಸವನ್ನು ಕೈಗೊಳ್ಳುತ್ತಿಕೊಳ್ಳಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ(ಎನ್‌ಎಚ್‌ಐ) ಮನವಿ ಮಾಡಿಕೊಂಡಿದೆ. 

ವಾಹನ ಸವಾರರು ಈ ಮಾರ್ಗ ಬಳಕೆ ಮಾಡಬಹುದು

ನೆಲಮಂಗಲದಿಂದ ನಗರದತ್ತ ಬರುವ ವಾಹನಗಳು ಕೆನ್ನಮೆಟಲ್  ಫ್ಯಾಕ್ಟರಿ ಬಳಿಯ ಮೇಲ್ಸೇತುವೆಯಿಂದ ಕೆಳಗೆ ಇಳಿದು, 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಮತ್ತು ಗೊರಗುಂಟೆಪಾಳ್ಯದ ಮೂಲಕ ಸಂಚರಿಸಬಹುದು ಎಂದು ಪೀಣ್ಯ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. 
ಸಂಚಾರ ಸುಗಮವಾಗಿ ಮತ್ತು ಸುರಕ್ಷಿತವಾಗಿ ಸಾಗಲು ಬ್ಯಾರಿಕೇಡ್‌ಗಳು, ಪ್ರತಿಫಲಿತ ಸೂಚನಾ ಫಲಕಗಳು ಬ್ಲಿಂಕರ್‌ಗಳು, ಟ್ರಾಫಿಕ್ ಮಾರ್ಷಲ್‌ಗಳು ಮತ್ತು ಇತರ ಸುರಕ್ಷತಾ ವ್ಯವಸ್ಥೆಗಳನ್ನು ಒಳಗೊಂಡಂತೆ ಸೂಕ್ತ ಸಂಚಾರ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.