ಹೂವಿನಹಡಗಲಿ ತಾಲೂಕಿನ ಮೈಲಾರ ಬಸ್ ನಿಲ್ದಾಣ ಹಿಂಬದಿಯಲ್ಲಿ ಸಂಚಾರ ನಿಯಂತ್ರಕ ನೀಲಪ್ಪ ಅವರು ಗಿಡಗಳನ್ನು ಬೆಳೆಸಿರುವುದು.
ಹೂವಿನಹಡಗಲಿ: ಸುಕ್ಷೇತ್ರ ಮೈಲಾರ ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ನೀಲಪ್ಪ ಅವರು ಮೈಲಾರ ಮತ್ತು ಹೊಳಲು ಗ್ರಾಮದ ಬಸ್ ನಿಲ್ದಾಣದಲ್ಲಿ ಗಿಡಗಳನ್ನು ನೆಟ್ಟು ನಿತ್ಯ ಪೋಷಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.
ಮೈಲಾರ ಗ್ರಾಮದ ಬಸ್ ನಿಲ್ದಾಣ ಹಿಂಬದಿಯ ಸ್ಥಳದಲ್ಲಿ ಸ್ವಂತ ಖರ್ಚಿನಲ್ಲಿ ಸುಮಾರು 450ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ದಿನವೂ ನೀರು ಹಾಕಿ ಬೆಳೆಸಿದ್ದಾರೆ.
ಈ ಮೊದಲು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿದ್ದ ನೀಲಪ್ಪ ಅಲ್ಲಿನ ಪರಿಸರದಿಂದ ಪ್ರಭಾವಿತರಾಗಿ ೀ ಕಾರ್ಯ ಕೈಗೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೊಳಲು ಹಾಗೂ ಮೈಲಾರ ಬಸ್ ನಿಲ್ದಾಣದಲ್ಲಿ ಗಿಡ ಬೆಳೆಸಿದ್ದಾರೆ. ನೀಲಪ್ಪ ಅವರ ಪರಿಸರ ಕಾಳಜಿಗೆ ಪ್ರವಾಸಿಗರು ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"
ಬಯಲು ಸೀಮೆಯಲ್ಲಿ ಬೆಳೆದ ನನಗೆ ಕೊಡಗು ಜಿಲ್ಲೆಯಲ್ಲಿ ಉದ್ಯೋಗ ದೊರೆಯಿತು. ಕೊಡಗಿನ ಪರಿಸರ ನನ್ನ ಮೇಲೆ ಪ್ರಭಾವ ಬೀರಿತು. ಇದರಿಂದಾಗಿ ನಮ್ಮ ಸುತ್ತಲಿನ ಪರಿಸರ ಮರ-ಗಿಡಗಳಿಂದ ಕೂಡಿರಬೇಕು ಎಂದು ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದೇನೆ. ನೀಲಪ್ಪಸಂಚಾರ ನಿಯಂತ್ರಕ, ಮೈಲಾರ
— ನೀಲಪ್ಪ ಸಂಚಾರ ನಿಯಂತ್ರಕ, ಮೈಲಾರ