ಶಹಾಬಾದ್​ ರೈಲು ನಿಲ್ದಾಣದಿಂದ ಬಸ್​ ನಿಲ್ದಾಣಕ್ಕೆ ಹೋಗುವ ಮುಖ್ಯರಸ್ತೆ ಕಿತ್ತು ಹೋಗಿ ಮಳೆ ನೀರು ಸಂಗ್ರಹವಾಗಿರುವುದು. 
ರಾಜ್ಯ

ತಗ್ಗು-ಗುಂಡಿ ರಸ್ತೆಯಲ್ಲಿ ಸಂಚಾರ ಹೈರಾಣ

ಪ್ರಮುಖ ಮುಖ್ಯಾಂಶಗಳು

  • ಶಹಾಬಾದ್​ ರೈಲು ನಿಲ್ದಾಣದಿಂದ ಬಸ್​ ನಿಲ್ದಾಣದವರೆಗಿನ ರೋಡ್​ ಹಾಳು
ಶಹಾಬಾದ್​: ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ನಗರ ಹಾಗೂ ನಗರಸಭೆ ದರ್ಜೆ ಹೊಂದಿಗೆ ಶಹಾಬಾದ್​ನಲ್ಲಿ ರಸ್ತೆಗಳು ಹಾಳಾಗಿದ್ದು, ಜನರು ಪ್ರಾಯಸ ಪಡುತ್ತಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ರೈಲು ನಿಲ್ದಾಣದಿಂದ ಬಸ್​ ನಿಲ್ದಾಣಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದು, ನಿತ್ಯವೂ ಜನರು ಹೈರಾಣ ಪಟ್ಟು ತಿರುಗಾಡುತ್ತಿದ್ದಾರೆ. ವೈಭವ ಲಾಡ್ಜ್​ನಿಂದ ಎಕ್ಸ್​ಲೆಂಟ್​ ಜೆರಾಕ್ಸ್​ ಅಂಗಡಿವರೆಗಿನ ರಸ್ತೆಯಂತೂ ಹೇಳತೀರದು. ವಾಹನ ಸವಾರರು ಸ್ಥಳಿಯ ಆಡಳಿತ ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಲೇ ಸಂಚಾರ ಮಾಡುತ್ತಿದ್ದಾರೆ.
ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ನೀರು ಸಂಗ್ರಹವಾಗಿ ತಗ್ಗು ಯಾವುದು ? ರಸ್ತೆ ಯಾವುದು ಎಂಬುದು ತಿಳಿಯದಂತಾಗಿದೆ. ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು ತಗ್ಗಿನಲ್ಲಿ ಬೈಕ್​ ಸಾಗಿಸಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ರಸ್ತೆ ಸರಿಪಡಿಸುವಂತೆ ನಗರಸಭೆಗೆ ಸ್ಥಳಿಯರು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಕನಿಷ್ಟ ತಗ್ಗುಗಳನ್ನು ಮುಚ್ಚುವ ಗೋಜಿಗೂ ಹೋಗಿಲ್ಲ.
ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹಾಳಾದ ರಸ್ತೆ ಸುಧಾರಣೆಗೆ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.