ಅಥೆನ್ಸ್ನಲ್ಲಿ ಆಯೋಜಿಸಿದ್ದ ಧಾರ್ಮಿಕ ಪುನುರುತ್ಥಾನ ಜಾಗತಿಕ ಶೃಂಗ ಸಮ್ಮೇಳನದಲ್ಲಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಸುಗುಣೇಂದ್ರತಿರ್ಥ ಶ್ರೀಪಾದರು ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಮಾಂಜರಿ
ಹಿಂದೂಯೇತರರು ಹಿಂದೂ ಧರ್ಮವನ್ನು ಪ್ರವೇಶಿಸಬೇಕಾದರೆ ವೀರಶೈವ ಸಿದ್ಧಾಂತ ಪ್ರಮುಖ ಪ್ರವೇಶದ್ವಾರವಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ
ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅಥೆನ್ಸ್ನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಧಾರ್ಮಿಕ ಪುನುರುತ್ಥಾನ ಶಂಗಸಭೆಯಲ್ಲಿ "ಶೈವ ಒಂದು ಜಾಗತಿಕ ಪ್ರಜ್ಞೆ' ಕುರಿತು
ಹಿಂದೂ ಧರ್ಮವು ಹಲವಾರು ಸಿದ್ಧಾಂತ, ಸಂಪ್ರದಾಯಗಳ ಸಮೂಹ ಸಂಸತಿಯಾಗಿದ್ದು, ಜನ್ಮದಿಂದಲೇ ಆಯಾ ಸಂಪ್ರದಾಯ ಪ್ರವೇಶಿಸಲು ಅವಕಾಶವಿದೆ. ಆದರೆ, ವೀರಶೈವ ಸಿದ್ಧಾಂತವು ಲಿಂಗದೀೆ ಮೊದಲಾದ ಧರ್ಮ ಸಂಸ್ಕಾರಗಳನ್ನು ನೀಡುವಾಗ ಯಾವುದೇ ಭೇದವನ್ನು ನೋಡುವುದಿಲ್ಲ ಎಂದರು.
ಜಗತ್ತಿನ ತತ್ತ$್ವಜ್ಞಾನದ ತವರು ಎನಿಸಿಕೊಂಡಿರುವ ಗ್ರೀಸ್ ನೆಲದಲ್ಲಿ, ವಿಶ್ವಗುರು ಎನಿಸಿರುವ ಭಾರತೀಯ ತತ್ತ$್ವಜ್ಞಾನದ ಕುರಿತು ಚಿಂತನ&ಮಂಥನ ನಡೆಸುತ್ತಿರುವುದು ಅಪರೂಪದ ಸಂದರ್ಭ. ಭೌಗೋಳಿಕವಾಗಿ ಗ್ರೀಕ್ ಮತ್ತು ಭಾರತ ಬಹಳ ದೂರದ ದೇಶಗಳಾದರೂ ತತ್ತ$್ವಜ್ಞಾನದ ದೃಷ್ಟಿಯಿಂದ ಬಹಳಷ್ಟು ಹತ್ತಿರದಲ್ಲಿವೆ ಎಂದು ವಿವರಿಸಿದರು.
ಆದಿಶಕ್ತಿ ಕುರಿತು ಸಿನಿಮಾ ನಿರ್ಮಾಣ: ಶಿವನಿಂದ ಜೀವಿಗಳನ್ನು ಬೇರ್ಪಡಿಸಿದ ಶಕ್ತಿಯೇ ಕೊನೆಗೆ ಅವರನ್ನು ಶಿವನೊಂದಿಗೆ ಸೇರಿಸುವುದೇ ಶಕ್ತಿವಿಶಿಷ್ಟಾದ್ವೆ$$ೃತ ಎನಿಸಿಕೊಂಡಿದ್ದು, ಅಧ್ಯಾತ್ಮದಲ್ಲಿ ಶಿವನಷ್ಟೇ ಶಕ್ತಿಗೂ ಪ್ರಾಧಾನ್ಯತೆ ಇದೆ. ಇಂತಹ ಆದಿಶಕ್ತಿಯ ಮಹಿಮೆಯನ್ನು ವಿಶ್ವದಾದ್ಯಂತ ಸಾರಲು ಗ್ರೀಸ್ ಸರ್ಕಾರ 100 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವುದು ಅಭಿನಂದನಾರ್ಹ ಎಂದು ಶ್ರೀಶೆಲ ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಪುತ್ತಿಗೆ ಮಠದ ಸುಗುಣೇಂದ್ರತಿರ್ಥ ಶ್ರೀಪಾದರು, ತಿರುಚಿ ಕೈಲಾಸಾಶ್ರಮದ ಜಯೇಂದ್ರಪುರಿ ಸ್ವಾಮೀಜಿ, ಅರಧಾಮದ ಮಹಾಮಹೋಪಾಧ್ಯಾಯ ಭದ್ರೇಶನಾಥ ಸ್ವಾಮೀಜಿ, ಅಮೃತಸರದ ಸಹಜದೀಪ ಸಿಂಗ್ ಮಹಾರಾಜ್, ಬೌದ್ಧ ಸಂಪ್ರದಾಯದ ಖೇಮಚಾರ ಬಿಕ್ಕುಜಿ ಹಾಗೂ ಮತ್ತಿತರರ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.