Tractors lined up at the millet purchasing center
ತುರುವೇಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಆರಂಭವಾಗಿರುವ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡಲು ರೈತರು ಮುಗಿಬಿದ್ದಿದ್ದು, ದೆಬ್ಬೇಘಟ್ಟ ರಸ್ತೆ ಬದಿಯಲ್ಲಿ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಂತಿವೆ.
ತಾಲೂಕಿನಲ್ಲಿ 9800 ರೈತರಿಂದ ಸುಮಾರು 234965 ಕ್ವಿಂಟಾಲ್ ರಾಗಿ ನೀಡಲು ನೋಂದಣಿ ಮಾಡಲಾಗಿದೆ. ಈಗಾಗಲೇ ೆ.18 ರಿಂದ ರಾಗಿ ಖರೀದಿ ಪ್ರಾರಂಭವಾಗಿದ್ದು, ಸುಮಾರು 456 ರೈತರು ಸುಮಾರು 14487 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ. ರೈತರು ರಾಗಿ ತುಂಬಿದ ಟ್ರ್ಯಾಕ್ಸರ್ ತಂದು ರಸ್ತೆಯ ಬಲ ಬದಿಯಲ್ಲಿ ಸುಮಾರು ಅರ್ಧ ಕಿ.ಮೀ. ದೂರದವರೆಗೆ ಸರತಿ ಸಾಲಿನಲ್ಲಿ ನಿಲ್ಲಿಸಿ ಕಾಯುತ್ತಿದ್ದಾರೆ. ನೋಂದಣಿ ಮಾಡಿರುವ ರೈತರು ಖರೀದಿಗೆ ದಿನಾಂಕ ಹಾಗೂ ಸೀನಿಯಾರಿಟಿ ಮಾಡಿದ್ದರೂ ರೈತರು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಕಾಯುತ್ತಿದ್ದಾರೆ.
ನೋಟಿಸ್ ಬೋರ್ಡ್‌ನಲ್ಲಿ ದಿನಾಂಕ ನಿಗದಿ: ಪ್ರತಿ ದಿನ ಮೂರು ಕೌಂಟರ್‌ಗಳಿಂದ 60 ಟ್ರ್ಯಾಕ್ಟರ್ ನಂತೆ 2500 ಕ್ವಿಂಟಾಲ್ ರಾಗಿಯನ್ನು ಖರೀದಿಸಲಾಗುತ್ತದೆ. ನೋಂದಾಯಿತ ರೈತರು ದಿನಾಂಕ ನಿಗದಿಯಂತೆ ರಾಗಿ ತರುಲು ಮೂರು ದಿನಗಳ ಮುಂಚೆಯೇ ಖರೀದಿ ಕೇಂದ್ರದ ನೋಟಿಸ್ ಬೋರ್ಡ್‌ನಲ್ಲಿ ಹೆಸರು, ದಿನಾಂಕವನ್ನು ಹಾಕಲಾಗುತ್ತದೆ. ಅದರಂತೆಯೇ ರೈತರು ರಾಗಿಯನ್ನು ತರಬೇಕು. ಆದರೆ, ಕೆಲ ರೈತರು ದಿನಾಂಕವನ್ನು ನೀಡದಿದ್ದರೂ ಬಂದು ರಸ್ತೆ ಬದಿ ನಿಲ್ಲಿಸುತ್ತಾರೆ. ಇದರಿಂದ ಗೊಂದಲ ಸೃಷ್ಠಿಯಾಗಿದೆ. ದಿನಾಂಕವನ್ನು ನೀಡದ 40ಕ್ಕೂ ಹೆಚ್ಚು ಟ್ರ್ಯಾಕ್ಟರಗಳು ರಸ್ತೆ ಬದಿ ನಿಂತಿವೆ. ಇದರಿಂದ ಸರತಿ ಇರುವ ರೈತರು ರಾಗಿ ತರಲು ಕಷ್ಟವಾಗುಲಿದೆ ಎಂದು ಖರೀದಿ ಅಧಿಕಾರಿ ಚೇತನಾ ಮಾಹಿತಿ ನೀಡಿದರು.
ರಾಗಿ ಖರೀದಿ ಕೇಂದ್ರದಲ್ಲಿ ಸಿನಿಯಾರಿಟಿ ಮೂಲಕ ತೆಗೆದುಕೊಳ್ಳುತ್ತಿಲ್ಲ. ಕೆಲವರು ಸಿನಿಯಾರಿಟಿ ಇಲ್ಲದಿದ್ದರೂ ಅಕ್ರಮವಾಗಿ ರಾಗಿ ಬಿಡುತ್ತಿದ್ದಾರೆ. ಈಗಾದರೇ ಅರ್ಹ ರೈತರಿಗೆ ತೊಂದರೆಯಾಗಲಿದೆ. ಕೇವಲ ಮೂರು ಕೌಂಟರ್ ತೆರೆಯಲಾಗಿದೆ. ಹಾಗಾಗಿ ಖರೀದಿ ಪ್ರಕ್ರಿಯೆಯೂ ನಿಧಾನಗತಿಯಲ್ಲಿ ಸಾಗಿದೆ. ತಡವಾದಷ್ಟು ರೈತರು ಟ್ರ್ಯಾಕ್ಟರ್‌ನವರಿಗೆ ಹೆಚ್ಚಿನ ಬಾಡಿಗೆ ಹೊರೆ ಬೀಳಲಿದೆ. ಆದ್ದರಿಂದ ಇನ್ನೊಂದು ಕೌಂಟರ್ ತೆರೆಯಬೇಕು. - ಗಣೇಶ್, ರೈತ