Tractor seized for illegal sand transportation
ಚೇಳೂರು: ಪಟ್ಟಣದ ಪಾಪಾಗ್ನಿ ನದಿ ಸಮೀಪದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಮರಳು ತುಂಬಿದ ಟ್ರಾಕ್ಟರ್ ಅನ್ನು ಚೇಳೂರು ಪೋಲಿಸರು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಪೊಲೀಸರು ಗಸ್ತು ತೀರಗುವ ಸಮಯದಲ್ಲಿ ಸಮೀಪದ ಆಂಧ್ರ ಗಡಿ ಭಾಗದ ನವಾಬ್ ಕೋಟೆ ಕಡೆಯಿಂದ ಚೇಳೂರು ಕಡೆಗೆ ಅಕ್ರಮ ಮರಳು ಸಾಗಾಟ ಮಾಡುತ್ತಿರುವಾಗ ಪಿಎಸ್ಐ ಹರೀಶ್ ಮತ್ತು ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದರು. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದು, ಟ್ರಾ$್ಯಕ್ಟರ್ಅನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಆಂಧ್ರದ ರಾಮಪುರಂ ಗ್ರಾಮದ ಶಿವಾರೆಡ್ಡಿ ವಾಹನ ಚಾಲಕ ಎಂದು ಗುರುತಿಸಲಾಗಿದೆ.ಚೇಳೂರು ಠಾಣೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘಿಸಿ ಮರಳುಗಾರಿಕೆಗೆ ಮುಂದಾದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್ಐ ಹರೀಶ್ ಎಚ್ಚರಿಸಿದರು.