ಕಮಲಾಪುರ ತಾಲೂಕಿನ ಕುರಿಕೋಟಾ ಪಿಕೆಪಿಎಸ್ನಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಖರೀದಿಗೆ ಮಂಗಳವಾರ ಚಾಲನೆ ನೀಡಲಾಯಿತು. ಸರಡಗಿ ಶ್ರೀ ರೇವಣಸಿದ್ದ ಶಿವಾಚಾರ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯ ವೈಜಿನಾಥ ತಡಕಲ್, ಪಿಕೆಪಿಎಸ್ ಅಧ್ಯ ಗಣೇಶ ಚಿಕನಾಗಾಂವ, ರಮೇಶ ಸಾಹು ಇತರರಿದ್ದರು
- ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜಿನಾಥ ತಡಕಲ್ ಮನವಿ
- ಕುರಿಕೋಟದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ
ಕಮಲಾಪುರ: ನೋಂದಣಿ ಮಾಡಿಸಿರುವ ರೈತರು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪಿಕೆಪಿಎಸ್)ದಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಮಾರಾಟ ಮಾಡಿ ಮೂಲಕ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜಿನಾಥ ತಡಕಲ್ ಹೇಳಿದರು.
ಕುರಿಕೋಟಾ ಪಿಕೆಪಿಎಸ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ತೊಗರಿ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ವಿಂಟಾಲ್ಗೆ 8000 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಎಕರೆಗೆ ನಾಲ್ಕು ಕ್ವಿಂಟಾಲ್ ಅಥವಾ ಒಬ್ಬ ರೈತ 25 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಮಾರಾಟ ಮಾಡಬಹುದು ಎಂದರು.
ಸರಡಗಿ-ಕುರಿಕೋಟಾ ಶ್ರೀ ರೇವಣಸಿದ್ದ ಶಿವಾಚಾರ್ಯ, ಪಿಕೆಪಿಎಸ್ ಅಧ್ಯಕ್ಷ ಗಣೇಶ ಚಿಕನಾಗಾಂವ, ರಮೇಶ ಸಾಹು, ಅಜರ್ ಪಟೇಲ್, ಶರಣಬಸಪ್ಪ ಡೋಣಿ, ಹೀರಾಬಾಯಿ ಸುಗೂರ, ಸುಭಾಷ ಕಲ್ಲೂರ, ಮಲ್ಲೆಶಿ ಪೂಜಾರಿ, ಅಭಿಲಾಶ ಮದಿನಕರ್, ಮಲ್ಲೆಶಿ ಪೂಜಾರಿ, ಶರಣಬಸಪ್ಪ ಚಿಕಗಾಗಾಂವ, ಲೋಹಿತ ಹುಡಗಿ, ಸಂಘದ ಕಾರ್ಯದರ್ಶಿ ಮಡಿವಾಳಪ್ಪ ಗೌಡಪಗೋಳ ಇತರರಿದ್ದರು.
"
ಅಗತ್ಯ ಪ್ರಚಾರ ಮತ್ತು ಜಾಗೃತಿ ಕೊರತೆಯಿಂದ ಸಾಕಷ್ಟು ರೈತರು ನೋಂದಣಿ ಮಾಡಿಸಿಲ್ಲ. ಸರ್ಕಾರ ನೋಂದಣಿಗೆ ಇನ್ನಷ್ಟು ಕಾಲಾವಕಾಶ ನೀಡಿದರೆ ರೈತಾಪಿ ವರ್ಗಕ್ಕೆ ಅನಕೂಲವಾಗಲಿದೆ.
— > ಶ್ರೀ ರೇವಣಸಿದ್ದ ಶಿವಾಚಾರ್ಯ ಸರಡಗಿ&ಕುರಿಕೋಟಾ