- ಹವಾಮಾನ ಇಲಾಖೆ ಮುನ್ಸೂಚನೆ
- ಯಲ್ಲೋ ಅರ್ಲಟ್ ಘೋಷಣೆ
ಯಾದಗಿರಿ: ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಇದ್ದು, ಯಲ್ಲೋ ಅರ್ಲಟ್ ೂಷಿಸಲಾಗಿದೆ. ಹೀಟ್ವೆವ್ (ಶಾಖದ ಹೊಡೆತ) ಹಾಗೂ ಹೀಟ್ ಸ್ಟ್ರೊಕ್ನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯರೂ ಆದ ಡಿಸಿ ಹರ್ಷಲ್ ಬೋಯರ್ ತಿಳಿಸಿದ್ದಾರೆ.
ವಿಶೇಷವಾಗಿ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಬಿಸಿಲಿನಲ್ಲಿ ಹೋಗಲೇಬಾರದು. ಬಾಯಾರಿಕೆ ಇಲ್ಲದಿದ್ದರೂ ಆಗಾಗ್ಗೆ ನೀರು ಕುಡಿಯುತ್ತಿರಬೇಕು. ಸಾಧ್ಯವಾದಷ್ಟು ಹಗುರ, ತಿಳಿ ಬಣ್ಣದ, ಸಡಿಲ ಅಥವಾ ರಂಧ್ರವಿರುವ ಹತ್ತಿ ಬಟ್ಟೆ ಧರಿಸಿ. ಬಿಸಿಲಿನಲ್ಲಿ ಹೋಗುವಾಗ ರಣಾತ್ಮಕ ಕನ್ನಡಕ, ಛತ್ರಿ, ಟೋಪಿ, ಬೂಟು ಅಥವಾ ಚಪ್ಪಲ್ ಬಳಸಬೇಕು. ಹೊರಗಿನ ತಾಪಮಾನ ಹೆಚ್ಚಿರುವಾಗ ಶ್ರಮದಾಯಕ ಚಟುವಟಿಕೆ ಮಾಡಕೂಡದು. ದೇಹ ರ್ನಿಜಲೀಕರಣಗೊಳಿಸುವ ಅಲ್ಕೋಹಾಲ್, ಚಹಾ, ಕಾಫಿ ಮತ್ತು ಕಾಬೋರ್ನೇಟೆಡ್ ತಂಪು ಪಾನೀಯ ಹಾಗೂ ಹೆಚ್ಚಿನ ಪ್ರೋಟಿನ್ಯುಕ್ತ ಮತ್ತು ಹಳೆಯ ಆಹಾರ ಸೇವಿಸಬೇಡಿ. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ. ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಣ ವೈದ್ಯರ ಭೇಟಿ ಮಾಡಬೇಕು. ಮನೆಯಲ್ಲಿ ತಯಾರಿಸಿದ ಲಸ್ಸಿ, ತೋರಣಿ (ಅಕ್ಕಿ ನೀರು), ನಿಂಬೆ ನೀರು, ಮಜ್ಜಿಗೆ ಇತ್ಯಾದಿ ಬಳಸಿದರೆ ದೇಹದ ಮರು&ಜಲೀಕರಣಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಮನೆಯನ್ನು ತಂಪಾಗಿರಿಸಲು ಪರದೆ, ಶಟರ್ ಅಥವಾ ಸನ್ಶೇಡ್ ಬಳಸಿ ಮತ್ತು ರಾತ್ರಿ ವೇಳೆ ಕಿಟಕಿಗಳನ್ನು ತೆರೆದಿಡಿ. ಫ್ಯಾನ್, ಒದ್ದೆ ಬಟ್ಟೆ ಬಳಕೆ ಜತೆ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ರೈತರು, ಕೃಷಿ ಕಾರ್ಮಿಕರು ಹೊಲದಲ್ಲಿ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಛತ್ರಿ ಬಳಸಿ ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆ ಬಳಸಬೇಕು. ಪ್ರಯಾಣಿಸುವಾಗ ನಿಮ್ಮೊಂದಿಗೆ ಸಾಕಷ್ಟು ನೀರು ಇಟ್ಟುಕೊಳ್ಳಿ. ಸಾಧಾರಣ ತಾಪಮಾನ ಮತ್ತು ಶಾಖ ಸಾಮಾನ್ಯ ಜನರಿಗೆ ಸಹಿಸಿಕೊಳ್ಳಬಲ್ಲದು. ಆದರೆ ದುರ್ಬಲರು ಮತ್ತು ಮಧ್ಯಮ ಆರೋಗ್ಯ ಕಾಳಜಿ ಇರುವವರು (ಉದಾ@ ಶಿಶು, ವೃದ್ಧರು, ದೀರ್ಕಾಲದ ಕಾಯಿಲೆ ಇರುವವರು) ಸಹಿಸಿಕೊಳ್ಳಲಾಗದ ಬಿಸಿಲಿನಲ್ಲಿ ತಲೆ ಹಾಗೂ ದೇಹವನ್ನು ಸೂರ್ಯನ ಕಿರಣಗಳಿಗೆ ಒಡ್ಡದಿರಿ. ಬಿಸಿಲಿನಿಂದ ಮನೆಗೆ ಬಂದ ತಣ ಕೂಡಲೇ ಅತಿ ತಂಪಾದ ನೀರು ಕುಡಿಯಬಾರದು ಅಥವಾ ಎಸಿ, ಕೂಲರ್ ಬಳಸುವುದು ಸೂಕ್ತವಲ್ಲವೆಂದು ಡಿಸಿ ಬೋಯರ್ ತಿಳಿಸಿದ್ದಾರೆ.
ಜಾನುವಾರುಗಳನ್ನು ಬೆಳಗ್ಗೆ-ಸಂಜೆ ಮೇಯಿಸಿ
ಜಾನುವಾರುಗಳನ್ನು ಬೆಳಗ್ಗೆ ಮತ್ತು ಸಂಜೆ ಮೇಯಿಸಲು ಬಿಡಬೇಕು. ದಿನಕ್ಕೆ ಎರಡ್ಮೂರು ಸಲ ಶುದ್ಧ ನೀರು ಕುಡಿಸಬೇಕು. ಮಧ್ಯಾಹ್ನದ ಸಮಯದಲ್ಲಿ ಕೊಟ್ಟಿಗೆ ಅಥವಾ ಗಿಡದ ನೆರಳಿನಲ್ಲಿ ಕಟ್ಟಬೇಕು. ರ್ನಿಜಲೀಕರಣಗೊಂಡ ಜಾನುವಾರುಗಳಿಗೆ ಉಪ್ಪು, ಅಡುಗೆ ಸೋಡಾ, ಬೆಲ್ಲ ಮತ್ತು ನಿಂಬೆಹಣ್ಣಿನ ರಸವನ್ನು ನೀರಿನಲ್ಲಿ ಮಿಶ್ರಣ ಮಾಡಿ ದಿನಕ್ಕೆ ಮೂರ್ನಾಲ್ಕು ಸಲ ಕುಡಿಸಬೇಕು. ಮುಂಜಾಗ್ರತೆಯಾಗಿ ಸಾಂಕ್ರಾಮಿಕ ರೋಗ ತಡೆಗೆ ಲಸಿಕೆ ಹಾಕಿಸಬೇಕು.
"
ರೈತರು ತಮ್ಮ ಜಮೀನಿನಲ್ಲಿರುವ ಮೇವನ್ನು ಯಾವ ಕಾರಣಕ್ಕೂ ಸುಟ್ಟು ಹಾಕದೆ ಬಣವೆ ಹಾಕಿ ಅಥವಾ ಸುರುಳಿ ಸುತ್ತಿಟ್ಟು ಸಂಗ್ರಹಿಸಿಡಬೇಕು. ಇದರಿಂದ ಭೂಮಿಯ ಫಲವತ್ತತೆ ಹಾಳಾಗದಂತೆ ತಡೆಯಬಹುದು. ಜತೆಗೆ ವಾಯುಮಾಲಿನ್ಯ ನಿಯಂತ್ರಣ ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ನೀಗಿಸಬಹುದು.
— > ಹರ್ಷಲ್ ಬೋಯರ್ ಡಿಸಿ ಯಾದಗಿರಿ