ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ
ಬೈಲಹೊಂಗಲ: ತಾಲೂಕಿನ ರಾಯಣ್ಣನ ಸಂಗೊಳ್ಳಿ ಗ್ರಾಮದ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಹಿರೇಮಠದಲ್ಲಿ ಡಿ.11ರಂದು ಬೆಳಗ್ಗೆ 11.30ಕ್ಕೆ ಸಿದ್ಧಲಿಂಗೇಶ್ವರ ಜಾತ್ರೋತ್ಸವ ಹಾಗೂ ಸಿದ್ಧಲಿಂಗ ಶಿವಾಚಾರ್ಯರ 21ನೇ ಪುಣ್ಯಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮಾರಂಭ ಮಠಾಧೀಶ ಗುರುಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಲಿದೆ. ಹೂಲಿಯ ಸಾಂಬಯ್ಯನವರಮಠದ ಉಮೇಶ್ವರ ಶಿವಾಚಾರ್ಯರ ಸಾನ್ನಿಧ್ಯ ವಹಿಸಲಿದ್ದಾರೆ. ಕಬ್ಬೂರಿನ ರೇವಣಸಿದ್ಧೇಶ್ವರ ಶಿವಾಚಾರ್ಯರು, ರಾಯನಾಳದ ಅಭಿನವ ರೇವಣಸಿದ್ಧೇಶ್ವರ ಸ್ವಾಮೀಜಿ, ಏಣಗಿಯ ಬಂಗಾರಜ್ಜನ ಮಠದ ವಿರೂಪಾಯ್ಯ ಸ್ವಾಮೀಜಿ, ಬೆಳಗಾವಿಯ ನಿಶ್ಚಲ ಸ್ವರೂಪ ಸ್ವಾಮೀಜಿ, ಕಾದರವಳ್ಳಿಯ ಜಗದೀಶ ಅಜ್ಜನವರು ಆಗಮಿಸಲಿದ್ದಾರೆ. ಶಾಸಕ ಮಹಾಂತೇಶ ಕೌಜಲಗಿ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯ ಶಂಕರ ಮಾಡಲಗಿ, ಜಿಪಂ ಎಇಇ ಮಹೇಶ ಹೂಲಿ, ಗುತ್ತಿಗೆದಾರರ ಸಂದ ಜಿಲ್ಲಾ ಉಪಾಧ್ಯ ಮಂಜುನಾಥ ಹಿರೇಮಠ, ವೈದ್ಯ ಬಸವರಾಜ ಹಿರೇಮಠ ಉಪಸ್ಥಿತರಿರಲಿದ್ದಾರೆ. ಬೆಳಗ್ಗೆ ಭಜನೆ, ಶ್ರೀಗಳ ಗದ್ದುಗೆಗೆ ವಿಶೇಷಪೂಜೆ, ಪ್ರಾರ್ಥನೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ರುದ್ರಹೋಮ, ಮುತೆದೆಯರಿಂದ ಕುಂಭ ಮೆರವಣಿಗೆ, ಪಲ್ಲಕ್ಕಿ ಉತ್ಸವ, ಮಧ್ಯಾಹ್ನ 1 ಗಂಟೆಗೆ ಅನ್ನಪ್ರಸಾದ ಹಾಗೂ ಸಾಧಕರ ಸನ್ಮಾನ ನಡೆಯಲಿದೆ ಎಂದು ಹಿರೇಮಠದ ಪ್ರಕಟಣೆ ತಿಳಿಸಿದೆ.