ಬೈಲಹೊಂಗಲದ ತಹಸೀಲ್ದಾರ್​ ಕಾರ್ಯಾಲಯದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್​ ಎಚ್​.ಎನ್​.ಶಿರಹಟ್ಟಿ, ಬಾಹುರಾವ್​ ಕುಲಕರ್ಣಿ ಇತರರಿದ್ದರು. 
ರಾಜ್ಯ

ಮಾನವಕುಲಕ್ಕೆ ಶರಣರ ವಚನ ದಾರಿದೀಪ

ಬೈಲಹೊಂಗಲ: ಮಾನವಕುಲಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ವಚನ ದಾರಿದೀಪ ಎಂದು ತಹಸೀಲ್ದಾರ್​ ಎಚ್​.ಎನ್​.ಶಿರಹಟ್ಟಿ ಹೇಳಿದರು.
ಸಮೀಪದ ತಹಸೀಲ್ದಾರ್​ ಕಾರ್ಯಾಲಯದಲ್ಲಿ ತಾಲೂಕು ಆಡಳಿತ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಪೀಳಿಗೆ ಶರಣರ, ದಾಸರ ಜೀವನ ಆದರ್ಶವಾಗಿಟ್ಟುಕೊಂಡು ದೇಶದ ಪ್ರಗತಿಗೆ ಕೊಡುಗೆ ಸಲ್ಲಿಸಬೇಕಿದೆ ಎಂದರು.
ನಿಜಶರಣ ಅಂಬಿಗರ ಚೌಡಯ್ಯ ಸೊಸೈಟಿ ಅಧ್ಯ ಶಿವಾನಂದ ಕೋಲಕಾರ ಮಾತನಾಡಿ, ಅಂಬಿಗರ ಚೌಡಯ್ಯನವರು ಆಗಿನ ಕಾಲದಲ್ಲಿಯೇ ಮೂಢನಂಬಿಕೆ ವಿರೋಧಿಸಿ ತರ್ಕಬದ್ಧವಾದ ವಚನ ರಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಾಜದಲ್ಲಿನ ಕಂದಾಚಾರ ನಿವಾರಿಸಿ ವೈಚಾರಿಕತೆಯ ದೀಪ ಹಚ್ಚಲು ಹಾಗೂ ನವ ಸಮಾಜ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮೂಡಿಪಾಗಿಟ್ಟ ಮಹನೀಯರು ಎಂದರು. ಉಪ ತಹಸೀಲ್ದಾರ್​ ಬಾಹುರಾವ್​ ಕುಲಕರ್ಣಿ, ಶಿರಸ್ತೇದಾರ ರಾವೇಂದ್ರ ಪೂಜೇರಿ, ಜಿತೇಂದ್ರ ನಿಡೋಣಿ, ಸಿಬ್ಬಂದಿಗಳಾದ ಸುರೇಶ ಮಾಗಿ, ರಾಜಶೇಖರ ಪೂಜೇರಿ, ಅಭಿಷೇಕ ಕಾರಜೋಳ, ದೀಪಕ ಇತ್ತಿ, ನೀಲವ್ವ ಮಡಿವಾಳರ, ಸುಮಾ ಹಿರೇಮಠ, ಲಕ್ಷಿ$್ಮ ಕೂಗನವರ, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಬಾಜಿ, ಮಲ್ಲಪ್ಪ ಗೋಣಿ, ಬಸವರಾಜ ಜಂಬಗಿ, ಯಲ್ಲಪ್ಪ ತಿಮ್ಮಾಪುರ, ಮಹಾಂತೇಶ ಬಾಜಿ ಇತರರಿದ್ದರು.