ವಿವಿಧ ಬೇಡಿಕೆ ಈಡೇರಿಸಲು ಪಟ್ಟು demands 
ರಾಜ್ಯ

ವಿವಿಧ ಬೇಡಿಕೆ ಈಡೇರಿಸಲು ಪಟ್ಟು demands

ಶ್ರೀನಿವಾಸಪುರ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಕೃಷಿ ಪರಿಕರ ಮಾರಾಟಗಾರರ ಸಂಘದಿಂದ ತಾಲೂಕು ಕಚೇರಿಯ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ, ಕಂದಾಯ ನಿರೀಕ್ಷಕ ಮಂಜುನಾಥ್​ ಹಾಗೂ ಕೃಷಿ ಇಲಾಖೆಯು ಸಹಾಯಕ ನಿರ್ದೇಶಕ ಮಹೇಶ್​ಬಾಬು ಅವರಿಗೆ ಮನವಿ ಸಲ್ಲಿಸಲಾಯಿತು. demands
ಸಂಘದ ಅಧ್ಯಕ್ಷ ಎನ್​.ಚಂದ್ರಶೇಖರ ಮಾತನಾಡಿ, ಮಾರಾಟಗಾರರು ಡಿಎಪಿ ಗೊಬ್ಬರ ಪಡೆಯಬೇಕಾದರೆ, ಅದರೊಂದಿಗೆ ಯೂರಿಯಾ ಇತರೆ ಕಾಂಪ್ಲೆಕ್ಸ್​ ಗೊಬ್ಬರಗಳನ್ನು ಕಡ್ಡಾಯವಾಗಿ ಖರೀದಿಸಬೇಕು ಎಂಬ ನಿಯಮ ಹಿಂಪಡೆಯಬೇಕು. ಜತೆಗೆ ರಸಗೊಬ್ಬರ ಸರಕು ಸಾಗಣೆ ವೆಚ್ಚವನ್ನು ಉತ್ಪಾದಕ ಕಂಪನಿಗಳೇ ಹೊರಬೇಕು. ರಸಗೊಬ್ಬರ ಖರೀದಿಗೆ ರೈತರ ಗುರುತು ಸಂಖ್ಯೆ ಪಡೆಯಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಕೃಷಿ ಪರಿಕರಗಳ ಮಾದರಿ ಕಳಪೆಮಟ್ಟದ್ದು ಎಂದು ಕಂಡು ಬಂದಲ್ಲಿ ಉತ್ಪಾದಕರಗಳನ್ನ ಹೊಣೆಗಾರರನ್ನಾಗಿ ಮಾಡಬೇಕು. ಡೀಲರ್​ಗಳನ್ನ ಸಾಕ್ಷಿಯನ್ನಾಗಿ ಮಾಡಬೇಕು. ಎಲ್ಲ ರಾಸಾಯನಿಕ ಗೊಬ್ಬರದ ಮಾರಾಟದ ಮೇಲೆ ಡೀಲರ್​ಗಳು ಲಾಭಾಂಶ ಶೇ.8 ನೀಡಬೇಕು. ಬಿತ್ತನೆ ಬೀಜದ ಸಾಥಿ ಪೋರ್ಟಲ್​ ಅನ್ನು ಮಾರಾಟ ಸ್ನೇಹಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಕಾರ್ಯದರ್ಶಿ ಕೆ.ಆರ್​ ಮಂಜುನಾಥ್​ರೆಡ್ಡಿ, ಖಜಾಂಚಿ ರಾಜೇಶ್​, ಸಹ ಕಾರ್ಯದರ್ಶಿ ಗಂಗಾಧರ, ನಿರ್ದೇಶಕರಾದ ಎನ್​.ಎಸ್​.ವೆಂಕಟರವಣ, ಎನ್​.ಶ್ರೀನಿವಾಸ, ಜಿ.ವಿ.ಮಂಜುನಾಥರೆಡ್ಡಿ, ಚೌಡರೆಡ್ಡಿ, ಚಂದ್ರಶೇಖರ್​, ಪ್ರಕಾಶ್​, ಬಾಬುರೆಡ್ಡಿ, ಗೋಪಾಲಕೃಷ್ಣ, ಶ್ರೀನಾಥ ರೆಡ್ಡಿ, ಕೇತಗಾನಹಳ್ಳಿ ಬೈರೆಡ್ಡಿ ಇದ್ದರು.