ಬೆಂಗಳೂರು: ವಿಳಂಬ ಮತ್ತು ಲಂಚಾವತಾರ ತಡೆಗೆ ಸರ್ಕಾರ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಮಂಜೂರಾತಿಗೆ 15 ದಿನ ಕಾಲಮಿತಿ ನಿಗದಿಪಡಿಸಿದೆ.
ಕರ್ನಾಟಕ ಮಹಾನಗರ ಪಾಲಿಕೆಗಳ ಮತ್ತು ಪೌರಸಭೆಗಳ ಅಧಿನಿಯಮದಡಿ ನಗರ ಸ್ಥಳೀಯ ಸಂಸ್ಥೆ, ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾರ ಅಥವಾ ವಾಣಿಜ್ಯ ಚಟುವಟಿಕೆ ನಡೆಸಲು ಪರವಾನಗಿ ಪಡೆಯುವುದು ಕಡ್ಡಾಯ. ಹಿಂದೆಲ್ಲಾ ಉದ್ದಿಮೆದಾರರು ಹೊಸ ಪರವಾನಗಿ ಕೋರಿ ಸಲ್ಲಿಸುವ ಅರ್ಜಿ ವಿಲೇ ಮಾಡಲು ಬಹುತೇಕ ಅಧಿಕಾರಿಗಳು 30 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಇದರಿಂದಾಗಿ ಲಂಚಬಾಕ ಅಧಿಕಾರಿಗಳಿಂದ ನಿಗದಿ ಸಮಯದಲ್ಲಿ ಅರ್ಜಿ ವಿಲೇವಾಗದ ಕಾರಣ ಶುಲ್ಕ ರೂಪದಲ್ಲಿ ಸರ್ಕಾರಕ್ಕೆ ಬರಬೇಕಿದ್ದ ಕೋಟ್ಯಂತರ ರೂ.ಆದಾಯ ನಷ್ಟವಾಗುತ್ತಿತ್ತು. ಹೀಗಾಗಿ, ಈ ಮೇಲಿನ ಸಮಸ್ಯೆಗಳನ್ನು ಈಡೇರಿಸಲು ನಗರಾಭಿವೃದ್ಧಿ ಇಲಾಖೆ, ನಿಗದಿತ ಸಮಯದಲ್ಲಿ ಉದ್ದಿಮೆದಾರರಿಗೆ ವಾಣಿಜ್ಯ, ಉದ್ದಿಮೆ ಪರವಾನಗಿ ನೀಡಲು ಸಕಾಲ ಅಡಿ ತಂದಿದೆ. ವ್ಯಾಪಾರ ತಂತ್ರಾಂಶದಲ್ಲಿ ಏಕ ರೀತಿಯ ಕಾರ್ಯ ವಿಧಾನ ಅನುಸರಿಸಿ ಗರಿಷ್ಠ 15 ದಿನದೊಳಗೆ ಅರ್ಜಿ ವಿಲೇವಾರಿ ಮಾಡಿ ಪರವಾನಗಿ ನೀಡುವಂತೆ ಈಗಾಗಲೇ ಇಲಾಖೆ, ಪಾಲಿಕೆಗಳಿಗೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಉದ್ದಿಮೆ ಶುಲ್ಕ ನಿಗದಿಪಡಿಸಿ ಬೇಡಿಕೆ ಅನುಸಾರವಾಗಿ ವಸೂಲಿ ಮಾಡಲು ಅಧಿಕಾರಿಗಳಿಗೆ ಅವಕಾಶ ಕೊಡಲಾಗಿದೆ.
ಕ್ಯಾಂಟೀನ್, ರೆಸ್ಟೋರೆಂಟ್, ಪಿಜಿ, ಹಾಸ್ಟೆಲ್, ಮದ್ಯದಂಗಡಿ, ಎಣ್ಣೆ ಉತ್ಪಾದನೆ ಮತ್ತು ಸಂಸ್ಕರಣೆ, ನರ್ಸಿಂಗ್ ಹೋಂ, ಆಸ್ಪತ್ರೆ, ಕ್ಲಿನಿಕ್, ಕಾಂಡಿಮೆಂಟ್ಸ್, ಪೆಟ್ರೋಲ್ ಬಂಕ್, ಸೂಪರ್ ಮಾರ್ಕೆಟ್, ಮಾಲ್, ಕಿರಾಣಿ ಅಂಗಡಿಗಳು, ಡಯಾಗ್ನೋಸ್ಟಿಕ್ ಸೆಂಟರ್, ಮದುವೆ ಹಾಲ್, ಸಭಾಂಗಣ, ಬೇಕರಿ, ವಿವಿಧ ಸಾಮಗ್ರಿಗಳ ಅಂಗಡಿ, ಪಾನಿಪುರಿ ಚಾಟ್ಸ್, ಮೆಸ್, ಕಾಫಿ, ಟೀ ಸ್ಟಾಲ್ ಮತ್ತು ಚಿತ್ರಮಂದಿರ ಸೇರಿ ಯಾವುದೇ ರೀತಿಯ ವ್ಯಾಪಾರ ನಡೆಸಲು ಪರವಾನಗಿ ಪಡೆಯಬೇಕು.
ಪರವಾನಗಿ ಪಡೆಯಲು ಮಾಲೀಕರ ಒಪ್ಪಿಗೆ ಅಥವಾ ಬಾಡಿಗೆ ಪತ್ರ, ವಿದ್ಯುತ್ ಬಿಲ್ ಅಥವಾ ಖಾತೆದಾರರ ಹೆಸರು ನಮೂದಿಸಿದ ತೆರಿಗೆ ಪಾವತಿ ರಶೀದಿ, ಆಧಾರ್ ಕಾರ್ಡ್, ಸ್ಥಳದ ಭೂ ಸ್ವಾಮ್ಯ ಪ್ರಮಾಣ, ನೆರೆಹೊರೆಯ ನಿವಾಸಿಗಳ ಒಪ್ಪಿಗೆ ಪತ್ರ ಬೇಕು. ಅಗ್ನಿಶಾಮಕ ಇಲಾಖೆ ಅನುಮೋದನೆ ಪತ್ರ, ವ್ಯಾಪಾರದ ಸ್ಥಳದ ಛಾಯಚಿತ್ರ ದಾಖಲೆ ಕಡ್ಡಾಯವಾಗಿ ಸಲ್ಲಿಸಬೇಕು. ವ್ಯಾಪಾರ ನೋಂದಣಿ ಮತ್ತು ಆಹಾರ ಸಂಬಂಧಿತ ಉದ್ಯಮಕ್ಕೆ ಎ್ಎಸ್‌ಎಸ್‌ಎಐ ಪರವಾನಗಿ ಸಲ್ಲಿಸಲಾಗುತ್ತದೆ. ಅದರಂತೆ, ವ್ಯಾಪಾರ ಆರಂಭಿಸಲು ಪರವಾನಗಿ ಕೋರಿ ಆನ್‌ಲೈನ್ ಅಥವಾ ಆ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಪರಿಶೀಲಿಸುತ್ತಾರೆ.ಈ ಸಂದರ್ಭದಲ್ಲಿ ಲೋಪದೋಷ ಕಂಡುಬಂದರೆ ಅವುಗಳನ್ನು ಸರಿಪಡಿಸುವಂತೆ ಅರ್ಜಿದಾರರಿಗೆ ಸೂಚಿಸಲಾಗುತ್ತದೆ. ಬಳಿಕ, ವ್ಯಾಪಾರ ನಡೆಸುವ ಕಟ್ಟಡ ಸ್ಥಳವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ 2 ವಾರದೊಗೆ ಪರವಾನಗಿ ನೀಡಲಿದ್ದಾರೆ. ಹೋಟೆಲ್, ಕ್ಲಿನಿಕ್,ರಾಸಾಯನಿಕ ಮಾರಾಟ ಸಂಬಂಧಿಸಿತ ಉದ್ಯಮಕ್ಕೆ ವಿಶೇಷ ಪರವಾನಗಿ ಪಡೆಯಬೇಕು.
ವ್ಯಾಪಾರ ಪ್ರಕಾರ ಶುಲ್ಕ ನಿಗದಿ
ಪರವಾನಗಿ ಶುಲ್ಕ ವ್ಯಾಪಾರದ ಪ್ರಕಾರ ಮತ್ತು ಗಾತ್ರದ ಮೇಲೆ ಅವಲಂಬಿತವಾಗುತ್ತದೆ. ಸಣ್ಣ ಅಂಗಡಿ ಶುಲ್ಕ ಸಾವಿರ ರೂ.ಇದ್ದರೆ, ಹೋಟೆಲ್, ರೆಸ್ಟೋರೆಂಟ್ ಶುಲ್ಕ 10 ಸಾವಿರ ರೂ.ನಿಂದ ನಿಂದ ಆರಂಭವಾಗುತ್ತದೆ. ಬಿಬಿಎಂಪಿ ನೀಡುವ ಪರವಾನಗಿ ಒಂದು ವರ್ಷ ಅವಧಿ ಇರುತ್ತದೆ. ಜನವರಿ 1ರಿಂದ ಮಾ.31ರ ಅವಧಿಯೊಳಗೆ ನವೀಕರಣ ಮಾಡದೆ ಇದ್ದಲ್ಲಿ ಪರವಾನಗಿ ಅಮಾನ್ಯಗೊಳ್ಳುತ್ತದೆ. ಅರ್ಜಿ ಅನುಮೋದನೆ ನಂತರ ಪಾವತಿ ರಶೀದಿಯೊಂದಿಗೆ ವ್ಯಾಪಾರ ಪರವಾನಗಿ ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪರವಾನಗಿ ಇಲ್ಲದೆ ವ್ಯಾಪಾರ ನಡೆಸಿದರೆ ದಂಡ ಹಾಕಬಹುದು ಅಥವಾ ಅಂಗಡಿ ಜಪ್ತಿ ಮಾಡಲಾಗುತ್ತದೆ. ಬದಲಾವಣೆ (ವ್ಯಾಪಾರದ ಹೆಸರು, ಸ್ಥಳ, ಸ್ವರೂಪ) ಆಗಿದ್ದರೆ ಪರವಾನಗಿಯನ್ನು ಕಡ್ಡಾಯವಾಗಿ ನವೀಕರಣ ಮಾಡಿಸಿಕೊಳ್ಳಬೇಕು.
ರಾಜ್ಯದಲ್ಲಿ 2022-23ರಿಂದ 2025-26ರ ಜುಲೈವರೆಗೆ 163 ಕೋಟಿ ರೂ.ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಿಸಲಾಗಿದೆ. ಈ ಶುಲ್ಕದ ಹಣವನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳೇ ಬಳಕೆ ಮಾಡಲಾಗುತ್ತಿದೆ. ಉದ್ದಿಮೆ ಪರವಾನಗಿ ಶುಲ್ಕವನ್ನು ಏಕೀಕರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ.
ವರ್ಷವಾರು ಶುಲ್ಕ ಸಂಗ್ರಹ ವಿವರ( ಕೋಟಿ ರೂ.ಗಳಲ್ಲಿ)
2022-23 2023-24 2024-25 2025-26ರ ಜುಲೈ ಅಂತ್ಯಕ್ಕೆ