ಆಲೂರು ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಮೂರು ವರ್ಷದ ಸಂಭ್ರಮ ಕಾರ್ಯಕ್ರಮಕ್ಕೆ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ದುದ್ದನಹಳ್ಳಿ ಮುನೇಗೌಡ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಸದಸ್ಯರಾದ ಬರೇಗೌಡ, ಕೋಡು ಗುರ್ಕಿ ರಮೇಶ್​, ಪಿಡಿಒಗಳಾದ ದಿಲೀಪ್​, ಪ್ರಕಾಶ್​ ಹಾಗ ಗ್ರಾಪಂ ಸಿಬ್ಬಂದಿ ಇದ್ದರು.  
ರಾಜ್ಯ

ಹರ್ಷ ತಂದಿದೆ ಮೂರು ವರ್ಷದ ಸಾಧನೆ / KUNDANA

ಕುಂದಾಣ : ಸರ್ಕಾರದ ಮೂರು ವರ್ಷಗಳ ಸಾಧನೆಯ ಸಂಭ್ರಮವನ್ನು ಜನಪರ ಹಾಗೂ ಪರಿಸರ ಸ್ನೇಹಿ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿರುವುದು ಹರ್ಷ ತಂದಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಸದಸ್ಯ ದುದ್ದನಹಳ್ಳಿ ಮುನೇಗೌಡ ಹೇಳಿದರು.
ದೇವನಹಳ್ಳಿ ತಾಲೂಕಿನಕಾರಹಳ್ಳಿ, ಆಲೂರು, ದುದ್ದನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಮೂರು ವರ್ಷದ ಸಂಭ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ಸರ್ಕಾರದ ಜನಪರ ಯೋಜನೆಗಳ ಯಶಸ್ಸಿನ ಸಂಭ್ರಮವನ್ನು ಹಸಿರೀಕರಣದೊಂದಿಗೆ ಜೋಡಿಸಿ, ರಾಜ್ಯದಲ್ಲಿ ಪರಿಸರ ಸಂರಣೆಗೆ ಒತ್ತು ನೀಡಲಾಗಿದೆ ಎಂದರು.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಪ್ರತಿ ಸದಸ್ಯರಿಗೆ ಹೆಚ್ಚುವರಿ ಉಚಿತ ಅಕ್ಕಿ ನೀಡುವುದಲ್ಲದೆ, ಮನೆಯ ಯಜಮಾನಿಯ ಬ್ಯಾಂಕ್​ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂ. ಗೃಹಲಕ್ಷಿ$್ಮ ಹಣ ವರ್ಗಾವಣೆ ಮಾಡಲಾಗುತ್ತಿದೆ. ಕೇಂದ್ರ ಎನ್​ಡಿಎ ಸರ್ಕಾರ ಜನಪರ ಕಾಳಜಿ ಯೋಜನೆ ಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದ್ದು, ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯೇ ಬಿಜೆಪಿ ಸರ್ಕಾರದ ನಿಜವಾದ ಸಾಧನೆಯಾಗಿದೆ ಎಂದರು.
ಗ್ರಾಮೀಣ ಭಾಗದ ಸರ್ಕಾರಿ ಜಾಗಗಳಲ್ಲಿ ನೆರಳೆ, ಮಾವು, ತೇಗ, ಹುಣಸೆ, ಹಲಸು, ತೆಂಗು ಒಳ ಗೊಂಡಂತೆ ಸುಮಾರು 150 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಪಾಲನೆ ಹೊಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ ಎಂದರು.