Three seriously injured in accident 
ರಾಜ್ಯ

ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ ಡೆಸ್ಕ್
ಚಿಂತಾಮಣಿ: ಚಾಪುರ ಗೇಟ್​ ಬಳಿ ಸೋಮವಾರ ಮಧ್ಯಾಹ್ನ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ನಗರದ ವಿನೋಬಾ ಕಾಲನಿ ವಾಸಿ 7ನೇ ತರಗತಿ ವಿದ್ಯಾರ್ಥಿ ಅಲ್ಲಾಬಕಾಶ್​(15), ಹರ್ಷ (16), ವೆಂಕಟಗಿರಿ ಕೋಟೆಯ ರಂಜಿತ್​ (16)ಗಾಯಗೊಂಡವರು.
ಮೂವರೂ ಬೈಕ್​ನಲ್ಲಿ ಚಾಪುರ ಸಮೀಪದ ಸಿಮ್ಮಿಂಗ್​ ಪೂಲ್​ಗೆ ಈಜಲು ಹೋಗುತ್ತಿದ್ದಾಗ ಬೈಕ್​ಗೆ ಕಾರು ಡಿಕ್ಕಿಯಾಗಿದೆ.
ಗಾಯಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ಕಳುಹಿಸಲಾಗಿದೆ. ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ.