ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದರೆಡ್ಡಿ
ಆನೇಕಲ್ : ಹುಸ್ಕೂರು ಬಳಿ ವಿಧಾನ ಪರಿಷತ್ ಮಾಜಿ ಸದಸ್ಯ ದಯಾನಂದರೆಡ್ಡಿ ಅವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಮೂವರು ದುಷ್ಕರ್ಮಿಗಳನ್ನು ಅತ್ತಿಬೆಲೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಪ್ರವಿಣ್ ಹಾಗೂ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಏನಿದು ಪ್ರಕರಣ?: ಜೂ.1ರ ತಡರಾತ್ರಿ ಗೋಲ್ಡ್ ಕಾಯಿನ್ ಕ್ಲಬ್ನಿಂದ ಮನೆಕಡೆಗೆ ದಯಾನಂದರೆಡ್ಡಿ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತರು ಕಾರು ಅಡ್ಡಗಟ್ಟಿ ಗ್ಟ್ಿ ಬಂದಿದೆ ಎಂದು ಕಾಟನ್ಬಾಕ್ಸ್ ತೋರಿಸಿದ್ದರು. ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿದ ದುಷ್ಕರ್ಮಿಗಳು ಗನ್ ತೋರಿಸಿ ಹೇಳಿದ ಕಡೆ ಕಾರು ಚಲಾಯಿಸಬೇಕೆಂದು ಚಾಲಕನಿಗೆ ಬೆದರಿಕೆ ಹಾಕಿದ್ದರು. ಅತ್ತಿಬೆಲೆ ಕರ್ನಾಟಕ ಹೌಸಿಂಗ್ ಬೋರ್ಡ್ ಬಡಾವಣೆ ಬಳಿ ಕರೆದೊಯ್ದು ಹತ್ಯೆಗೆ 10 ಕೋಟಿ ಸುಪಾರಿ ಕೊಟ್ಟಿದ್ದಾರೆ ಎಂದು ಕುತ್ತಿಗೆಗೆ ಗನ್ ಇಟ್ಟು ಬೆದರಿಸಿದ್ದರು. ಮೊದಲು 3 ಕೋಟಿ ರೂ.ಹಣಕ್ಕೆ ಬೇಡಿಕೆಯಿಟ್ಟು, ಅಂತಿಮವಾಗಿ 2 ಕೋಟಿ ರೂ.ನೀಡಿದರೆ ಜೀವಂತವಾಗಿ ಬಿಡುವುದಾಗಿ ತಿಳಿಸಿದ್ದರು. ಈಗ ಹಣ ಇಲ್ಲ, ಬೆಳಗ್ಗೆ ಬ್ಯಾಂಕ್ ಟೈಮ್ಗೆ ನೀಡುವುದಾಗಿ ದಯಾನಂದರೆಡ್ಡಿ ಕೇಳಿಕೊಂಡಿದ್ದರು. ಹಣ ಡ್ರಾ ಮಾಡಿದ ಬಳಿಕ ಕರೆ ಮಾಡುವಂತೆ ತಿಳಿಸಿ ಅಪಹರಣಕಾರರು ದಯಾನಂದರಡ್ಡಿ ಅವರನ್ನು ಬಿಟ್ಟು ಕಳುಹಿಸಿದ್ದರು.
ಪೋನ್ ನಂಬರ್ ನೀಡಿದ್ದರು: ಕಾರು ಮುಂದೆ ಸಾಗುತ್ತಿದ್ದಂತೆ ಮತ್ತೊಂದು ಕಾರಿನಲ್ಲಿ ಮತ್ತಿಬ್ಬರು ಅಪರಿಚಿತರು ಸೇರಿಕೊಂಡರು. ಅವರು ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾತನಾಡುತ್ತಿದ್ದರು. ಅವರಲ್ಲಿ ಒಬ್ಬ ನಾನು ವಿದ್ಯಾರ್ಥಿಗಳನ್ನು ದತ್ತು ಪಡೆದುಕೊಂಡು ಸಮಾಜ ಸೇವೆ ಮಾಡುತ್ತಿರುತ್ತೇನೆ ಎಂದು ಹೇಳಿದ್ದ. ನಂತರ ಮಲಯಾಳಂ ಭಾಷೆಯಲ್ಲಿ ಮಾತನಾಡಿಕೊಂಡು ಯಾರಿಗೋ ಫೋನ್ ಮಾಡಿದರು. ಬೆಳಗ್ಗೆ 10 ಗಂಟೆಗೆ ಹಣ ಡ್ರಾ ಮಾಡಿ ತಕ್ಷಣ ಕರೆ ಮಾಡುವಂತೆ 9685162049 ನಂಬರ್ ನೀಡಿದರು ಎಂದು ದಯಾನಂದರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಹಣ ಕೊಡದಿದ್ದಕ್ಕೆ ಕಿಡ್ನಾಪ್ : ಕಳೆದ ನವೆಂಬರ್ನಲ್ಲಿ ದಯಾನಂದರೆಡ್ಡಿ ಕಾರು ಹಾಗೂ ಆರೋಪಿ ಪ್ರವಿಣ್ ಕಾರಿನ ನಡುವೆ ಅಪಘಾತವಾಗಿತ್ತು. ಈ ವೇಳೆ ಪರಿಹಾರವಾಗಿ 3 ಲಕ್ಷ ರೂ.ನೀಡುವಂತೆ ದಯಾನಂದ್ರೆಡ್ಡಿ ಆರೋಪಿಗೆ ತಾಕೀತು ಮಾಡಿದ್ದರು. ಮಾತುಕತೆ ಬಳಿಕ 1.20 ಲಕ್ಷ ರೂ.ಚೆಕ್ ಪಡೆದಿದ್ದರು. ಆದರೆ, ವಾರ ಕಳೆದರೂ ಚೆಕ್ ಪಾಸ್ ಅಗದಿದ್ದಾಗ ದಯಾನಂದರೆಡ್ಡಿ ಆರೋಪಿ ಪ್ರವಿಣ್ನನ್ನು ನಿಂದಿಸಿದ್ದರು. ಇದರಿಂದ ಸೇಡು ತೀರಿಸಿಕೊಳ್ಳಲು ಕೃತ್ಯ ಎಸಗಿದ್ದಾಗಿ ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ ಎನ್ನಲಾಗಿದೆ.