Three injured in accident
ಚಿಂತಾಮಣಿ& ಶ್ರೀನಿವಾಸಪುರ ರಸ್ತೆಯ ಹಂದಿಜೋಗಿಗಡ್ಡ ಗೇಟ್ ಬಳಿ ಶನಿವಾರ ರಾತ್ರಿ ಬೈಕ್& ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಯುವಕರು ಗಾಯಗೊಂಡಿದ್ದಾರೆ.
ಚಿಂತಾಮಣಿ ತಾಲೂಕಿನ ಪಾತಕೋಟೆ ಗ್ರಾಮದ ವಿಷ್ಣು, ನಾಗಸಂದ್ರಗಡ್ಡ ಗ್ರಾಮದ ವಿಜಯ್ ಮತ್ತು ವರುಣ್ ಗಾಯಗೊಂಡವರು.
ಗಾಯಗೊಂಡ ಬೈಕ್ ಸವಾರರು ಚಿಂತಾಮಣಿಯಿಂದ ಭೂರಗಮಾಕಲಹಳ್ಳಿಯ ಕಲ್ಯಾಣ ಮಂಟಪಕ್ಕೆ ತೆರಳುತ್ತಿದ್ದಾಗ ಶ್ರೀನಿವಾಸಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸಂಪೂರ್ಣ ಜಖಂಗೊಂಡಿದೆ. ಕಾರು ಮಾಲೀಕನನ್ನು ಗ್ರಾಮಾಂತರ ಠಾಣೆಯ ಪೊಲೀಸರು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗುಡಿಸಲವಾರಪಲ್ಲಿ ಗ್ರಾಮದ ಜಿ.ಎಸ್. ಸುದರ್ಶನ್ ಎಂಬುವರಿಗೆ ಸೇರಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಮೂವರ ಕೈ ಮತತುಕಾಲುಗಳಿಗೆ ತೀವ್ರ ಪೆಟ್ಟಾಗಿದ್ದು, ಆಂಬುಲೆನ್ಸ್ ಮೂಲಕ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರ ಹಾಗೂ ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.