ಮೂವರು ಮನೆಗಳ್ಳರ ಬಂಧನ burglars arrested 
ರಾಜ್ಯ

ಮೂವರು ಮನೆಗಳ್ಳರ ಬಂಧನ burglars arrested

ಕೋಲಾರ ಡೆಸ್ಕ್
ಬಂಗಾರಪೇಟೆ: ತಾಲೂಕಿನ ವಿವೇಕಾನಂದ ನಗರದ ಮನೆಯೊಂದರಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿ ಲಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.burglars arrested
ಮಾಲೂರು ತಾಲೂಕಿನ ಡಿ.ಕನಕರಾಜ್​(23), ಕೆಜಿಎಫ್​ನ ರಾರ್ಬಟ್​ಸನ್​ ಪೇಟೆಯ ಲೋಕೇಶ್​ (21) ಮತ್ತು ಆಂಡರ್ಸನ್​ ಪೇಟೆಯ ಜೇವಿಯರ್​ (22) ಬಂಧಿತರು. ಆರೋಪಿಗಳಿಂದ 45.5 ಗ್ರಾಂ ಬಂಗಾರ ಹಾಗೂ 1 ಕೆಜಿ 100 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಫೆ.12ರಿಂದ 17ರವರೆಗೆ ವಿವೇಕಾನಂದ ನಗರದ ನಿವಾಸಿ ಗೋವಿಂದಪ್ಪ ಅವರು ಊರಿಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿದ್ದರು. ಸುಮಾರು 45.5 ಗ್ರಾಂ ಬಂಗಾರ, 1.1 ಕೆಜಿ ಬೆಳ್ಳಿ ವಸ್ತುಗಳು ಹಾಗೂ 20 ಸಾವಿರ ರೂ. ನಗದನ್ನು ದೋಚಿದ್ದರು. ಈ ಬಗ್ಗೆ ಗೋವಿಂದಪ್ಪ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಂಗಾರಪೇಟೆ ಇನ್​ಸ್ಪೆಕ್ಟರ್​ ರವಿಕುಮಾರ್​ ನೇತೃತ್ವದ ವಿಶೇಷ ಅಪರಾಧ ಪತ್ತೆ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆಹಿಡಿದಿದೆ. ಅಲ್ಲದೆ, ಕಳವು ಮಾಡಿದ ಮಾಲನ್ನು ರಾರ್ಬಟ್​ಸನ್​ ಪೇಟೆಯ ಕುಮರೇಶ್​ (21) ಎಂಬಾತನಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಕಳವು ಮಾಡಿದ ವಸ್ತು ಎಂದು ತಿಳಿದಿದ್ದರೂ ಕುಮರೇಶ್​ ಅವುಗಳನ್ನು ಖರೀದಿಸಿದ್ದ ಎನ್ನಲಾಗಿದೆ.