ಗೋಕಾಕ: ತಾಲೂಕಿನ ಕೊಣ್ಣೂರು ಗ್ರಾಮದ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ- ಮಗಳು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟು, ಓರ್ವ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಕೊಣ್ಣೂರ ಗ್ರಾಮದ ಬಶೀರ್ ಮುಲ್ಲಾ (28), ಇವರ ಮಗಳು ಸೀಜಾ ಮುಲ್ಲಾ (5) ಹಾಗೂ ಇಮ್ತಿಯಾಜ್ ಬಡಗಾಂವ (34) ಮೃತರು. ಗಂಭೀರ ಗಾಯಗೊಂಡಿರುವ ಜಿಹಾನ್ ಕುಡಚಿಕರ (5) ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಿಡಕಲ್ಲ ಡ್ಯಾಮ್‌ನಿಂದ ಗೋಕಾಕದತ್ತ ಸಂಚರಿಸುತ್ತಿದ್ದ ಸರ್ಕಾರಿ ಬಸ್ ಕೊಣ್ಣೂರ ಖಾಸಗಿ
ಶಾಲೆಯಿಂದ ತೆರಳುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ನಡೆದಿದೆ.
ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.