ಮಾ.9ರಿಂದ ಮೂರು ದಿನ ಕೆಪಿಆರ್​ಎಸ್​ ರಾಜ್ಯ ಸಮ್ಮೇಳನ kprs 
ರಾಜ್ಯ

ಮಾ.9ರಿಂದ ಮೂರು ದಿನ ಕೆಪಿಆರ್​ಎಸ್​ ರಾಜ್ಯ ಸಮ್ಮೇಳನ kprs

ಕೋಲಾರ ಡೆಸ್ಕ್
ಮುಳಬಾಗಿಲು: ಕೆಪಿಆರ್​ಎಸ್​ 18ನೇ ರಾಜ್ಯ ಸಮ್ಮೇಳನದ ಪ್ರಚಾರ ಆಂದೋಲನವನ್ನು -ಮುಳಬಾಗಿಲು ನಗರ ಸೇರಿ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದು, ಜನರು ಸ್ವಪ್ರೇರಣೆಯಿಂದ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗುವುದು ಎಂದು ಸಿಪಿಐ(ಎಂ) ಮುಖಂಡ ಸಿದ್ದನಹಳ್ಳಿ ಶೇಖರ್​ ಹೇಳಿದರು. kprs
ತಾಲೂಕಿನ ದುಗ್ಗಸಂದ್ರ ಹೋಬಳಿ ವ್ಯಾಪ್ತಿಯ ನಾಚಗುಂಡ್ಲಹಳ್ಳಿ, ನಾಚನಹಳ್ಳಿ, ಗುಕುಂಟೆ, ಮೇಲಿನ ಗೂಕುಂಟೆ, ಕೊಂಡೇನಹಳ್ಳಿ, ಮುರುಕನಕುಂಟೆ,ಬಿಸನಹಳ್ಳಿ , ದಿನ್ನಹಳ್ಳಿ ಮತ್ತಿತರ ಗ್ರಾಮಗಳಿಗೆ ಶನಿವಾರ ಎಡಪಕ್ಷಗಳ ನಿಯೋಗದೊಂದಿಗೆ ಭೇಟಿ ನೀಡಿ ಗ್ರಾಮಗಳ ರೈತರಲ್ಲಿ ಸರ್ಕಾರಗಳ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿ ಮಾತನಾಡಿದರು.
ರೈತ ವಿರೋಧಿ, ಮುಕ್ತವಾಣಿಜ್ಯ ಒಪ್ಪಂದ ವಿರೋಧಿಸಿ, ಶಾಶ್ವತ ನೀರಾವರಿಗಾಗಿ ಬೆಂಬಲ ಬೆಲೆ, ಸಾಲ ಮನ್ನಕ್ಕಾಗಿ ಆಗ್ರಹಿಸಿ, ವಿದ್ಯುತ್​ ಖಾಸಗಿಕರಣ ವಿರೋಧಿಸಿ, ಅರಣ್ಯ ಇಲಾಖೆ ದೌರ್ಜನ್ಯ ವಿರೋಧಿಸಿ, ಬಗರ್​ ಹುಕ್ಕುಂ ಸಾಗುವಳಿ ಸಕ್ರಮಕ್ಕಾಗಿ, ಜನ ವಿರೋಧಿ ನೀತಿಗಳು, ಕಾರ್ಮಿಕ ವಿರೋಧಿ ಸಂಹಿತೆಗಳ ರದ್ದತಿಗಾಗಿ ಆಗ್ರಹಿಸಿ ಮಾ.9,10,11, ಮೂರು ದಿನ ಕೋಲಾರದ ಕೆ. ಇ. ಬಿ. ಸಮುದಾಯ ಭವನದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಕರ್ನಾಟಕ ಪ್ರಾಂತ ರೈತ ಸಂಘಟನೆ ತಾಲ್ಲೂಕು ಸಮಿತಿ ವತಿಯಿಂದ ಮುಳಬಾಗಿಲು ತಾಲ್ಲೂಕಿನ ಹಳ್ಳಿಗಳಲ್ಲಿ ರೈತರ ಮನೆ ಮನೆಗಳಿಗೆ ಭೇಟಿ ನೀಡಿ ಪ್ರಚಾರ ಕೈಗೊಂಡರು.
ಕೆ.ಪಿ.ಆರ್​.ಎಸ್​ ತಾಲೂಕು ಗೌರವ ಅಧ್ಯಕ್ಷ ಪುಣ್ಯಹಳ್ಳಿ ಶಂಕರ್​, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ನಾಯಕಿ ವಿ.ಗೀತಾ, ತಾಲೂಕು ಅಧ್ಯಕ್ಷ ವಕೀಲ ವೆಂಕಟೇಶ್​, ಕಾರ್ಯದರ್ಶಿ ಕೇರಳ ಶ್ರೀನಿವಾಸ್​, ರೈತ ಮುಖಂಡರಾದ ಸಂಗಸಂದ್ರ ರಾಮಚಂದ್ರಪ್ಪ ಗುಕುಂಟೆ ಗಂಗುಳಪ್ಪ, ಎಸ್​. ಎಫ್​. ಐ. ವಿದ್ಯಾರ್ಥಿ ನಾಯಕರಾದ ಸುರೇಶ್​ ಬಾಬು, ಬೀರಾಜ್​ ಇದ್ದರು