Three arrested for misbehaving after consuming marijuana
ಚಿಂತಾಮಣಿ: ನಗರದ ಬಾಗೇಪಲ್ಲಿ ಕ್ರಾಸ್ ಬಳಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಯುವಕನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ನಗರದ ವೆಂಕಟಗಿರಿಕೋಟೆ ಬಡಾವಣೆ ನಿವಾಸಿ ಸಲ್ಮಾನ್ ಪಾಷ (26) ಬಂಧಿತ.
ಬುಧವಾರ ಮಧ್ಯಾಹ್ನ ನಗರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಗಂಗರಾಜು ಹಾಗೂ ಅಂಜನಾರೆಡ್ಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಗಾಂಜಾ ಬಗ್ಗೆ ಸಲ್ಮಾನ್ ಬಾಯ್ಬಿಟ್ಟಿದ್ದಾನೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. "
ಗಸ್ತಿನಲ್ಲಿದ್ದಾಗ ವಶಕ್ಕೆ
ಗಾಂಜಾ ಸೇವಿಸಿ ಅಸಭ್ಯ ವರ್ತನೆ ತೋರುತ್ತಿದ್ದ ಚಿಂತಾಮಣಿ ವೆಂಕಟಗಿರಿಕೋಟೆ ಬಡಾವಣೆ ನಿವಾಸಿ ಎನ್. ಜಿಶಾನ್ (23)ನನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಪಿಸಿಗಳಾದ ಶ್ರೀನಿವಾಸ ಮೂರ್ತಿ ಹಾಗೂ ಗಿರೀಶ್ ಬಾಗೇಪಲ್ಲಿ ಕ್ರಾಸ್ ಕಡೆ ಗಸ್ತಿನಲ್ಲಿದ್ದಾಗ ಈತ ಮಾದಕ ವಸ್ತು ಸೇವಿಸುತ್ತಿದ್ದ. ಚಿಂತಾಮಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಲಿನಲ್ಲಿದ್ದ: ಗಾಂಜಾ ಸೇವಿಸಿ ದುರ್ವರ್ತನೆ ತೋರುತ್ತಿದ್ದ ನಗರದ ಶಾಂತಿನಗರ ಬಡಾವಣೆ ನಿವಾಸಿ ಮೊಹಮದ್ ಅಲಿ ಅರ್ಬಾಜ್ (22) ಎಂಬಾತನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಚಿಂತಾಮಣಿ ರೈಲ್ವೆ ಸ್ಟೇಷನ್ ಬಳಿ ಮೊಹಮದ್ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ. ಬುಧವಾರ ಹೆಡ್ ಕಾನ್ಸ್ಟೇಬಲ್ ವೆಂಕಟರವಣ ಹಾಗೂ ಪಿಸಿ ಲೋಕೇಶ್ ಬಂಧಿಸಿದರು. ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.