ಹೆಚ್ಚು ಅಂಕ ಪಡೆದವರಿಗೆ ವಿಮಾನಯಾನ ಭಾಗ್ಯ fly
- ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಹೇಳಿಕೆ
ಲಕ್ಕೂರು: ಹತ್ತನೇ ತರಗತಿಯಲ್ಲಿರುವ ಪ್ರತಿಯೊಬ್ಬರೂ ಉತ್ತಮ ಫಲಿತಾಂಶ ಪಡೆದು ಉತ್ತೀರ್ಣರಾಗುವ ಮೂಲಕ ಉನ್ನತ ವಿದ್ಯಾಭ್ಯಾಸ ಮಾಡಬೇಕು. ತಾಲೂಕಿನಲ್ಲಿ ಹೆಚ್ಚು ಅಂಕ ಗಳಿಸುವವರಿಗೆ ವಿಮಾನಯಾನ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಹೇಳಿದರು.fly
ಮಾಲೂರು ತಾಲೂಕು ಜಯಮಂಗಲ ಗ್ರಾಮದ ಹತ್ತನೇ ತರಗತಿ ವಿದ್ಯಾರ್ಥಿಗಳ ಮನೆಗೆ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳ ಓದುವ ಹಾಗೂ ಅಭ್ಯಾಸ ಮಾಡುವ ಶೈಲಿ ಪರಿಶೀಲಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಬೇಕು. ಪ್ರತಿದಿನ ಸಂಜೆ ವೇಳೆ ತಾಲೂಕಿನ ಒಂದೊಂದು ಗ್ರಾಮಕ್ಕೆ ಸಿಆರ್ಪಿ ಹಾಗೂ ಶಿಕ್ಷಕರೊಂದಿಗೆ ಭೇಟಿ ನೀಡಲಾಗುತ್ತಿದೆ ಎಂದರು.
ಪಾಲಕರು ಎಸ್ಎಸ್ಎಲ್ಸಿ ಪರೀಕ್ಷೆ ಮುಗಿಯುವವರೆಗೂ ಮಕ್ಕಳಿಗೆ ಹೆಚ್ಚಿನ ಮನೆ ಕೆಲಸ ನೀಡದೆ ಪ್ರೋತ್ಸಾಹ ನೀಡಿಬೇಕು. ತರಗತಿ ವಿಷಯಗಳನ್ನು ಕುರಿತು ಗುಂಪು ಸಂವಾದ ನಡೆಸುವ ಮೂಲಕ ಹೆಚ್ಚಿನ ಅಂಕ ಗಳಿಕೆ ಕಡೆ ಗಮನ ನೀಡಬೇಕು ಎಂದರು.