ಸಾಗರ್ ಸೋನಾವಾನೆ ಮತ್ತು ಬೆಂಗಳೂರು
- ಬೆಂಗಳೂರನ್ನು ನ್ಯೂಯಾರ್ಕ್‌ಗೆ ಹೋಲಿಸಿದ ಮರಾಠಿ ಯುವಕ
- ಐಟಿ ಪಾರ್ಕ ನೋಡಿ ಮರುಳಾದ ಪುಣೆಯ ಹುಡುಗ
- ಇಲ್ಲಿರುವ ಮೂಲಸೌಕರ್ಯ ಪುಣೆಗೆ ಎಂದು ಬರಲಿದೆ ಎಂದು ಪ್ರಶ್ನೆ
ಬೆಂಗಳೂರು: ಮಹಾರಾಷ್ಟ್ರದ ವ್ಯಕ್ತಿಯೊಬ್ಬ ಬೆಂಗಳೂರಿನ ಐಟಿ ಪಾರ್ಕ್ನ್ನು ನ್ಯೂಯಾರ್ಕ್‌ಗೆ ಹೋಲಿಸಿ ಪೋಸ್ಟ್ ಮಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ (Viral) ಆಗುತ್ತಿದೆ.
ಎಸ್ಕಲೇಟರ್, ಫುಟ್‌ಪಾತ್ ಮತ್ತು ಹಸಿರಿನಿಂದ ಕೂಡಿದ ಪರಿಸರ
ಸಾಗರ್ ಸೋನಾವಾನೆ ಎಂಬ ವ್ಯಕ್ತಿಯು ಈ ವಿಡಿಯೋದ ಸೃಷ್ಟಿಕರ್ತನಾಗಿದ್ದು, ಮರಾಠಿಯಲ್ಲಿ ಮಾತನಾಡುತ್ತಾ, ಸೋನಾವಾನೆ ವೀಕ್ಷಕರನ್ನು ಸ್ವಾಗತಿಸುವ ಮೂಲಕ ನಾನೀಗ ನ್ಯೂಯಾರ್ಕ್‌ನ ಐಟಿ ಪಾರ್ಕ್‌ನಲ್ಲಿದ್ದೇನೆ ಎಂದು ಹೇಳುತ್ತಾನೆ.
ಕ್ಯಾಮೆರಾವನ್ನು ಸುತ್ತಲೂ ತಿರುಗಿಸುತ್ತಾ ಇಲ್ಲಿಯ ಜನರಿಗೆ ರಸ್ತೆದಾಟಲು ಸಮಸ್ಯೆಯಾಗದಿರಲಿ ಎಂದು ಸ್ಕೈವಾಕ್ ಮತ್ತು ಎಸ್ಕಲೇಟರ್ ವ್ಯವಸ್ಥೆಯನ್ನು ಮಾಡಿದ್ದಾರೆ. ಇಲ್ಲಿನ ಫುಟ್ಪಾತ್ಗಳು ಸಹ ತುಂಬಾ ಚೆನ್ನಾಗಿವೆ ಮತ್ತು ಇಲ್ಲಿ ಸುತ್ತಲೂ ಹಸಿರು ಪರಿಸರ ಇರುವುದನ್ನು ನೀವು ಗಮನಿಸಬಹುದು ಎಂದು ಹೇಳಿದ್ದಾನೆ.
https://www.instagram.com/reel/DTPBQSJDImg/?utm_source=ig_web_copy_link&igsh=MzRlODBiNWFlZA==
ಇದು ನ್ಯೂಯಾರ್ಕ್ ಅಲ್ಲ; ಬೆಂಗಳೂರು
ವೀಡಿಯೊದ ಮಧ್ಯದಲ್ಲಿ, ಸೋನಾವಾನೆ ನಾನು ನಿಮ್ಮಲ್ಲಿ ತಮಾಷೆ ಮಾಡಿದೆ ಇದು ನ್ಯೂಯಾರ್ಕ್ ಅಲ್ಲ, ಬೆಂಗಳೂರಿನಲ್ಲಿರುವ ಐಟಿ ಪಾರ್ಕ್ ಎಂದು ಸ್ಪಷ್ಟಪಡಿಸುತ್ತಾನೆ. ಈ ಪ್ರದೇಶವು ಹೆಚ್ಚು ಅಭಿವೃದ್ಧಿ ಹೊಂದಿದ ಪ್ರದೇಶ ಎಂದು ವಿವರಿಸುತ್ತಾ, ಪುಣೆಯಲ್ಲಿ ಸಹ ರೀತಿಯ ಮೂಲಸೌಕರ್ಯ ಯಾವಾಗ ಲಭ್ಯವಾಗುತ್ತದೆ? ಎಂದು ಪ್ರಶ್ನಿಸಿದ್ದಾನೆ.
ಆನ್‌ಲೈನ್ ಪ್ರತಿಕ್ರಿಯೆಗಳು
ಸಾಗರ್ ಸೋನಾವಾನೆ ಹಂಚಿಕೊಂಡಿರುವ ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಆನ್‌ಲೈನ್‌ನಲ್ಲಿ ಹಲವಾರು ಪ್ರತಿಕ್ರಿಯೆಗಳನ್ನು ಸೆಳೆದಿದೆ.
ಒಬ್ಬ ಬಳಕೆದಾರರು, ಯೋಜಿತ ಮೂಲಸೌಕರ್ಯ ಹೇಗೆ ಕಾಣುತ್ತದೆ ಮತ್ತು ಬೆಂಗಳೂರು ಏಕೆ ಅನೇಕ ವೃತ್ತಿಪರರನ್ನು ಆಕರ್ಷಿಸುತ್ತದೆ ಎಂದು ತಿಳಿಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಪುಣೆಗೆ ಈ ರೀತಿಯ ಪಾದಚಾರಿ ಮಾರ್ಗ ಮತ್ತು ಸುರಕ್ಷಿತ ಕ್ರಾಸಿಂಗ್‌ಗಳು ತುರ್ತಾಗಿ ಅಗತ್ಯವಿದೆ ಎಂದು ಬರೆದಿದ್ದಾರೆ,(ಏಜನ್ಸೀಸ್).