ಗುರುಮಠಕಲ್ ಮತೇತ್ರದ ಯಲಸತ್ತಿ ತಾಂಡಾದಲ್ಲಿ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ 1 ಕೋಟಿ ರೂ.ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಶರಣಗೌಡ ಕಂದಕೂರ ಭೂಮಿ ಪೂಜೆ ನೆರವೇರಿಸಿದರು. ಬನ್ನಪ್ಪ ಕೋಮಾರ, ಭೀಮನಗೌಡ, ಶಂಕರಗೌಡ, ಭೀಮಸೇನರಾವ್, ಶ್ರೀಧರ ಘಂಟಿ, ಶಂಕರರಡ್ಡಿ ಯಲಸತ್ತಿ, ಮಲ್ಲನಗೌಡ ಹಳಿಮನಿ, ವೀರೇಂದ್ರ ಪಾಟೀಲ್, ಬಸವರಾಜ ಕಣೇಕಲ್, ಅಜಯರಡ್ಡಿ ಯಲ್ಹೇರಿ, ಚಂದ್ರುಗೌಡ ಸೈದಾಪುರ ಇತರರಿದ್ದರು.
- ಶಾಸಕ ಶರಣಗೌಡ ಕಂದಕೂರ ಆರೋಪ
- ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ
ಗುರುಮಠಕಲ್: ಕ್ಷೇತ್ರದ ಗ್ರಾಮೀಣ ಭಾಗದಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ರಾಜ್ಯ ಸರ್ಕಾರ ಪ್ರಗತಿ ಪಥ ಯೋಜನೆಯಡಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳುತ್ತಿದ್ದು, ಅದು ಪ್ರಗತಿ ಪಥವಲ್ಲ, ನಿಧಾನಪಥ ಯೋಜನೆಯಾಗಿದೆ ಎಂದು ಶಾಸಕ ಶರಣಗೌಡ ಕಂದಕೂರ ವ್ಯಂಗ್ಯವಾಡಿದರು.
ಮತಕ್ಷೇತ್ರದ ಯಲಸತ್ತಿ ತಾಂಡಾದಲ್ಲಿ 2025-26ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಯೋಜನೆಯಡಿ 1 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಯಲಸತ್ತಿ ಗ್ರಾಮದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ಡಾ.ಬಾಬೂ ಜಗಜೀವನರಾಮ್ ಭವನ ನಿರ್ಮಾಣ, ಕಾಳೆಬೆಳಗುಂದಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಮಹರ್ಷಿ ವಾಲ್ಮೀಕಿ ಭವನ ಹಾಗೂ ಬಾಡಿಯಾಳ ಗ್ರಾಮದಲ್ಲಿ 25 ಲಕ್ಷ ರೂ.ವೆಚ್ಚದಲ್ಲಿ ಮಾರೆಮ್ಮ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನತೆ ಶುದ್ಧ ನೀರು, ರಸ್ತೆ, ಮನೆಗಳನ್ನು ಕೇಳುತ್ತಿದ್ದಾರೆ. ಆದರೆ ಈ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಒಂದೇ ಒಂದು ಕೊಳವೆಬಾವಿ ಕೊರೆಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನಯಾ ಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ನೇರವಾಗಿ ಹರಿ ಹಾಯ್ದರು.
ತಾವು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಪ್ರವಾಸಕ್ಕೆ ಹೋದಾಗ ಜನತೆ ಶುದ್ಧ ಕುಡಿವ ನೀರು, ಜಮೀನುಗಳಿಗೆ ತೆರಳಲು ರಸ್ತೆ ಕೇಳುತ್ತಾರೆ. ಗುರುಮಠಕಲ್ ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿ ಇಂದು ದೆಹಲಿಯಲ್ಲಿ ರಾಜಕಾರಣ ಮಾಡುತ್ತಿರುವರು ಮಾತನಾಡುತ್ತಿಲ್ಲ ಹಾಗೂ ಕ್ಷೇತ್ರದ ಬಗ್ಗೆ ಚಕಾರ ಸಹ ಎತ್ತುತ್ತಿಲ್ಲ ಎಂದು ಕಂದಕೂರ ಕಿಡಿ ಕಾರಿದರು.
ಕಾಳೆಬೆಳಗುಂದಿ ಗ್ರಾಮದಲ್ಲಿ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆ ಬಿಚ್ಚಿಟ್ಟಾಗ ಜಿಪಂ ಸಿಇಒ ಅವರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು, ಕೊಳವೆಬಾವಿ ವ್ಯವಸ್ಥೆ ಮಾಡುವಂತೆ ಸೂಚಿಸಿದರಲ್ಲದೆ, ಪಿಡಿಒ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಬಾಡಿಯಾಳ ದೊಡ್ಡ ಗ್ರಾಮದ ಮಾರೆಮ್ಮ ದೇವಸ್ಥಾನಕ್ಕೆ ಸಧ್ಯ 25 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಹೆಚ್ಚುವರಿ ಅನುದಾನದ ಬಗ್ಗೆ ಗ್ರಾಮದ ಜನತೆ ಮನವಿ ಮಾಡಿದ ತಕ್ಷಣ ಶಾಸಕರು, ಈ ಕೆಲಸ ಆರಂಭಿಸಿ ಹೆಚ್ಚುವರಿಯಾಗಿ 25 ಲಕ್ಷ ರೂ.ಬಿಡುಗಡೆ ಮಾಡಿಸುವೆ ಎಂದು ಭರವಸೆ ನೀಡಿದರು.
ಅಲ್ಲದೆ, ಒಂದು ಕೋಟಿ ವೆಚ್ಚದಲ್ಲಿ ಅಂಬಿಗರ ಚೌಡಯ್ಯ ಭವನ ನಿರ್ಮಾಣಕ್ಕೆ ಅನುದಾನ ನೀಡಿ ವರ್ಷವಾಗಿದೆ. ದಾನಿಗಳ ಸಹ ಭೂಮಿ ನೀಡಲು ಮುಂದಾಗಿದ್ದಾರೆ. ಆದರೆ ಅಧಿಕಾರಿಗಳು ಈ ವಿಷಯದಲ್ಲಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಒಂದು ತಿಂಗಳ ಒಳಗಾಗಿ ಚೌಡಯ್ಯ ಭವನದ ಅಡಿಗಲ್ಲು ನೆರವೇರಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ಈ ವೇಳೆ ಭೂಸೇನಾ ನಿಗಮದ ಎಇಇ ಬನ್ನಪ್ಪ ಕೋಮಾರ, ಉಪ ತಹಸೀಲ್ದಾರ್ ಭೀಮನಗೌಡ, ಶಂಕರಗೌಡ, ಕಂದಾಯ ನಿರೀಕ್ಷಕ ಭೀಮಸೇನರಾವ್, ಮುಖಂಡರಾದ ಶ್ರೀಧರ ಘಂಟಿ, ಶಂಕರರಡ್ಡಿ ಯಲಸತ್ತಿ, ಮಲ್ಲನಗೌಡ ಹಳಿಮನಿ, ವೀರೇಂದ್ರ ಪಾಟೀಲ್, ಬಸವರಾಜ ಕಣೇಕಲ್, ಅಜಯರಡ್ಡಿ ಯಲ್ಹೇರಿ, ಚಂದ್ರುಗೌಡ ಸೈದಾಪುರ, ಈಶ್ವರ ನಾಯಕ, ತಾಯಪ್ಪ ಡಿ.ಬದ್ದೆಪಲ್ಲಿ, ಪರ್ವತರಡ್ಡಿ ಕಾಳೆಬೆಳಗುಂದಿ, ರಾಜಶೇಖರ ಲಕ್ಷ$್ಮಣ ಕಾಳೆಬೆಳಗುಂದಿ, ವೆಂಕಟೇಶ ಗಡದ್, ಲಕ್ಷ$್ಮಣ ಕೂಡಲೂರ, ಸಾಬು ನಾಯಕ ನೀಲಹಳ್ಳಿ, ಬನ್ನಪ್ಪ ಹಿರೆನೂರ ಬಾಡಿಯಾಳ, ಬಸವರಾಜ ಹಿರೆನೂರ, ದೇವು ಂಟಿ, ಜಯೇಂದ್ರ ನಾಯಕ, ಬೆಂಜುಮಿನ್ ಬಳಿಚಕ್ರ, ಹಣಮಂತ ಇಸ್ಲಾಕಾರ, ಮಲ್ಲೇಶ ನಾಯಕ, ಬನ್ನಪ್ಪ ಕಣೇಕಲ್ ಇತರರಿದ್ದರು.
ಮನೆಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ
ಮಳೆಯಿಂದ ಮನೆ ಬಿದ್ದಿದ್ದರೆ ಸರ್ಕಾರದಿಂದ ಪರಿಹಾರ ಕೊಡಿಸಲಾಗುವುದು. ಕಳೆದ ಮೂರು ವರ್ಷಗಳಿಂದ ಸರ್ಕಾರದಿಂದ ಮನೆಗಳು ಬಂದಿಲ್ಲ. ಸದ್ಯ ಸರ್ಕಾರ ಬದಲಾಗುತ್ತಿದೆ. ಜಿಪಿಎಸ್ ಮಾಡಿಸಿ. ಹೊಸ ಸರ್ಕಾರದಲ್ಲಿ ಮನೆ ಮಂಜೂರು ಮಾಡಿದರೆ ಮತೇತ್ರದ ಎಲ್ಲ ಗ್ರಾಮ ಮತ್ತು ತಾಂಡಾಗಳಲ್ಲಿನ ಬಡವರಿಗೆ ಮನೆ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಹಿಂದೆ, ಮನಬಂದಂತೆ ಮನೆ ಮಂಜೂರು ಮಾಡಲಾಗುತ್ತಿತ್ತು. ಈಗ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಮನೆಗಳ ನೋಂದಣಿ ಮಾಡಬೇಕು. ಗ್ರಾಮಸಭೆಯಲ್ಲಿ ಆಯ್ಕೆ ಮಾಡಬೇಕು. ಹೀಗಾಗಿ ಪಿಡಿಒಗಳು ಮನೆ ಇಲ್ಲದವರಿಗೆ ಅರ್ಜಿ ಸಲ್ಲಿಸಲು ತಿಳಿವಳಿಕೆ ಮೂಡಿಸಿ, ಮನೆ ಮಂಜೂರಾದಾಗ ಅರ್ಹರಿಗೆ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಕಂದಕೂರ ತಿಳಿಸಿದರು.
ಕೋಟ್ಗುರಮಠಕಲ್ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಮೊದಲ ಆದ್ಯತೆಯಾಗಿದ್ದು, ಸರ್ಕಾರದ ಹಂತದಲ್ಲಿ ಸಾಕಷ್ಟು ಶ್ರಮಪಟ್ಟು ಅನುದಾನ ಬಿಡುಗಡೆಗೊಳಿಸಿ ಗ್ರಾಮೀಣ ಭಾಗದಲ್ಲಿ ಮೂಲಸೌಲಭ್ಯ ಕಲ್ಪಿಸಲು ಪ್ರಯತ್ನಿಸುವೆ.
— > ಶರಣಗೌಡ ಕಂದಕೂರ ಶಾಸಕ ಗುರುಮಠಕಲ್