ತಿಪಟೂರು : ವಿವಿಧ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ತಿಪಟೂರಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಬಿ. ಶಶಿಧರ್ ಮಾತನಾಡಿ, ಕೇಂದ್ರ ಮಂಡಿಸಿರುವ ಕೆಲ ಮಾರ್ಪಾಟಿತ ಮಸೂದೆಗಳು ಮಾರಣಾಂತಿಕ ಶಾಸನಗಳಾಗಿವೆ ಎಂದು ಆರೋಪಿಸಿದರು.
ನರೇಗಾ ಯೋಜನೆಯನ್ನು ಬದಲಾಯಿಸಲಾಗಿದೆ. ಇದು ನಿರುದ್ಯೋಗ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಹಕ್ಕು ಆಧಾರಿತ ಗ್ರಾಮೀಣ ಉದ್ಯೋಗ ಖಾತ್ರಿ ಬದಲಾಯಿಸುತ್ತೆ ಮತ್ತು ಹಣಕಾಸಿನ ಹೊರೆಯನ್ನು ರಾಜ್ಯಗಳ ಮೇಲೆ ವರ್ಗಾಯಿಸುತ್ತೆ. ಹೊಸ ಕಾಯ್ದೆ ಕಠಾವಿನ ಸಮಯದಲ್ಲಿ ನಿಷೇದಿಸಲ್ಪಡುತ್ತೆ. ಇದರಿಂದ ಅತ್ಯಂತ ತಳಹಂತದ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಕೂಲಿಕಾರರ ಮೇಲಿನ ಗಧಾ ಪ್ರಹಾರ ಮತ್ತು ಶ್ರಮಜೀವಿಗಳನ್ನು ಅಣಕಿಸುವ ನೀತಿಯಾಗಲಿದೆ ಎಂದರು.
ಸಿಐಟಿಯು ಮುಖಂಡ ಎನ್.ಕೆ.ಸುಬ್ರಮಣಿ ಮಾತನಾಡಿ, ಕೇಂದ್ರದ ಹೊಸ ಕಾಯ್ದೆಗಳು ದೈನಂದಿನ ಜೀವನದ ಮೇಲೆ ಅಗಾಧ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ನಗರದ ಶ್ರೀ ಕೆಂಪಮ್ಮ ದೇವಾಲಯದಿಂದ ದೊಡ್ಡಪೇಟೆ ರಸ್ತೆಮಾರ್ಗವಾಗಿ ಬಂದ ಪ್ರತಿಭಟನಾಕಾರರು ಸಿಂಗ್ರಿ ನಂಜಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮುಖಂಡರಾದ ಪ್ರೊ.ಜಯಾನಂದಯ್ಯ, ರಾಜಣ್ಣ, ಅಲ್ಲಾಬಕಾಶ್, ಆರ್.ಎಸ್. ಚನ್ನಬಸವಣ್ಣ, ರಾಜಮ್ಮ, ಬಾಬು. ಶಂಕರ್. ಮಲ್ಲಿಕಾರ್ಜುನ್. ತಿಮ್ಮೇಗೌಡ, ತಾಸಿಮ್ ಇತರರು ಇದ್ದರು.