ತಿಮ್ಮಕ್ಕರ ಸೇವಾ ಮನೋಭಾವ ಸ್ಫೂರ್ತಿThimmakka
ಮುಳಬಾಗಿಲು: ಒಬ್ಬರ ಸಂಕಲ್ಪ ಎಷ್ಟೊಂದು ದೊಡ್ಡ ಬದಲಾವಣೆ ತರಬಹುದು ಎನ್ನುವುದಕ್ಕೆ ಸಾಲುಮರದ ತಿಮ್ಮಕ್ಕ ಅವರು ಶಾಶ್ವತ ಉದಾಹರಣೆ ಎಂದು ಸಸ್ಯ ವಿಜ್ಞಾನಿ ಹಾಗೂ ಅನುದಾನಿತ ಶ್ರೀ ಕೋದಂಡರಾಮಸ್ವಾಮಿ ಪ್ರೌಢಶಾಲೆ ಅಧ್ಯಕ್ಷ ಡಾ.ಎಂ.ಎನ್. ಜಗದೀಶ್ ಹೇಳಿದರು. Thimmakka
ತಾಲೂಕಿನ ಊರುಕುಂಟೆ ಮಿಟ್ಟೂರು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ಅನುದಾನಿತ ಪ್ರೌಢಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ನಮನ ಸಲ್ಲಿಸಿ ಮಾತನಾಡಿ, ಪರಿಸರ ಪ್ರೇಮದ ಪ್ರತ್ಯಕ್ಷ ರೂಪವಾದ ಸಾಲುಮರದ ತಿಮ್ಮಕ್ಕ ಅವರ ಸೇವಾ ಮನೋಭಾವ ನಮ್ಮೆಲ್ಲರಿಗೂ ಅನನ್ಯ ಸ್ಫೂರ್ತಿ ಆಗಬೇಕು ಎಂದರು.
ತಿಮ್ಮಕ್ಕ ಅವರ ಪರೋಪಕಾರಿ ಸೇವಾ ಮೌಲ್ಯಗಳು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸದಾ ಬೆಳಗಲಿ. ಇಂತಹ ವ್ಯಕ್ತಿಗಳ ಸ್ಫೂರ್ತಿ, ಆದರ್ಶ ಮತ್ತು ಮಾರ್ಗದರ್ಶನದಲ್ಲಿ ಮುನ್ನಡೆದರೆ ಅಂತಹವರು ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನಮಾನ ಪಡೆಯುವುದರ ಜತೆಗೆ ನಮ್ಮನ್ನು ಅನುಸರಿಸುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಸಮಾಜದೊಂದಿಗೆ ಸಹಬಾಳ್ವೆ ಜೀವನ ನಡೆಸಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.