ಇಬ್ಬರು ಬ್ಯಾಟರಿ ಕಳ್ಳರ ಬಂಧನ 
ರಾಜ್ಯ

ಇಬ್ಬರು ಬ್ಯಾಟರಿ ಕಳ್ಳರ ಬಂಧನ

ಆನಂದಕುಮಾರ ಭಮ್ಮನ್ನವರ

ಪ್ರಮುಖ ಮುಖ್ಯಾಂಶಗಳು

  • ಇಬ್ಬರು ಬ್ಯಾಟರಿ ಕಳ್ಳರ ಬಂಧನ
  • ನಿಪ್ಪಾಣಿ ನಗರದಲ್ಲಿ ಘಟನೆ
  • ಬಂಧಿತರಿಂದ ೨೨ ಬ್ಯಾಟರಿ ವಶಕ್ಕೆ ಪಡೆದ ಪೊಲೀಸರು
  • ಬಸವೇಶ್ವರ ಚೌಕ ಠಾಣೆಯಲ್ಲಿ ಪ್ರಕರಣ ದಾಖಲು

ಆಂದೋಲನ ನಗರದ ನಿವಾಸಿ ಅಮಿತ ಅಶೋಕ ರಾವಳ(೧೯), ಸಚಿನ ಶಂಕರ ಸಾಲುಂಕೆ(೨೧)ರನ್ನು ಬಸವೇಶ್ವರ ಚೌಕ ಠಾಣೆಯ ಪೊಲೀಸರು ಸೋಮವಾರ ಬಂದಿಸಿ,ಆರೋಪಿತರಿಂದ ಕಳ್ಳತನ ಮಾಡಿದ್ದ ಬ್ಯಾಟರಿ ಹಾಗೂ ಕಳ್ಳತನಕ್ಕೆ ಬಳಸಿದ್ದ ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಕಳೆದ ಮೂರು ತಿಂಗಳ ವಿವಿಧ ಕಂಪನಿಗಳಲ್ಲಿ ಒಟ್ಟು 22 ಬ್ಯಾಟರಿಗಳನ್ನು ಕಳ್ಳತನ ಮಾಡಿ, ಮಾರಾಟ ಮಾಡಲು ಸಂಗ್ರಹಿಸಿದ್ದರು, ಪೊಲೀಸರು ರಾತ್ರಿ ಗಸ್ತು ತಿರುಗಿದಾಗ ಸಂಶಯಾಸ್ಪದವಾಗಿ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಎಂದು ಪೊಲೀಸ್‌ರು ತಿಳಿಸಿದ್ದಾರೆ.