Thieves stole the Mangalya chain.
ಮುಳಬಾಗಿಲು: ನಂಗಲಿ ಪೊಲೀಸ್ ಠಾಣೆ ಹಿಂಭಾಗ ಬುಧವಾರ ಮಹಿಳೆಯೊಬ್ಬರು ವಾಯುವಿಹಾರ ಮಾಡುತ್ತಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ಕಳ್ಳರು ಮಹಿಳೆ ಕತ್ತಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾರೆ.
ಗ್ರಾಮದ ನಿವೃತ್ತ ಶಿಕ್ಷಕ ಮಧುಸೂದನ್ ಪತ್ನಿ ನೀರಜಾ(60) ಅವರು ಮಲ್ಲೇಕುಪ್ಪ ರಸ್ತೆಯ ಸಿನಿಮಾ ಟೆಂಟ್ ಬಳಿ ಬರುತ್ತಿದ್ದಾಗ ಹೆಲ್ಮೆಟ್ ಹಾಕಿಕೊಂಡು ಬಂದ ಕಳ್ಳರು ಕೊರಳಲಿದ್ದ 100 ಗ್ರಾಂ ತಾಳಿ ಮತ್ತು ಮಾಂಗಲ್ಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ನಂಗಲಿ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಮಧುಸೂದನ್ ದೂರು ದಾಖಲಿಸಿದ್ದಾರೆ.