Thieves running around with deadly weapons 
ರಾಜ್ಯ

ಮಾರಕಾಯುಧಗಳೊಂದಿಗೆ ಕಳ್ಳರ ಓಡಾಟ

ಚಿಕ್ಕಬಳ್ಳಾಪುರ ಡೆಸ್ಕ್
ಚಿಂತಾಮಣಿ: ನಗರದ ರಾಜೀವ್​ ಬಡಾವಣೆಯಲ್ಲಿ ಸೋಮವಾರ ಮಧ್ಯರಾತ್ರಿ ಕಳ್ಳರು ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಮಾರಕಾಯುಧಗಳೊಂದಿಗೆ ಓಡಾಡಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಪ್ಪಲಿ ಸದ್ದು ಕೇಳಬಾರದು ಎಂದು ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜನರು ಭಯಗೊಂಡಿದ್ದಾರೆ. ಜತಗೆ ಈ ವೇಳೆ ಕಳ್ಳರು ಬಡಾವಣೆಯ ಕೆಲ ಮನೆಗಳ ಸಿಸಿ ಕ್ಯಾಮರಾ ವಯರ್​ ಕತ್ತರಿಸಿದ್ದಾರೆ ಎನ್ನಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಇದೇ ಮಾದರಿಯಲ್ಲಿ ಓಡಾಡಿದ ಕಳ್ಳರು ಬಡಾವಣೆಯ ಎಚ್​ಡಿಎಫ್​ಸಿ ಬ್ಯಾಂಕ್​ ನೌಕರ ಬಾಬುರೆಡ್ಡಿ ಅವರ ಬೈಕ್​ ಕಳವು ಮಾಡಿದ್ದರು.