ಚಿನ್ನಾಭರಣ ದೋಚಿ ಕಳ್ಳರು ಪರಾರಿ 
ರಾಜ್ಯ

ಚಿನ್ನಾಭರಣ ದೋಚಿ ಕಳ್ಳರು ಪರಾರಿ

ಪ್ರಮುಖ ಮುಖ್ಯಾಂಶಗಳು

  • ವಡ್ಡರದೊಡ್ಡಿ ಗ್ರಾಮ
  • ಚಿನ್ನಾಭರಣ ದೋಚಿ ಪರಾರಿ
ಹನೂರು: ತಾಲೂಕಿನ ವಡ್ಡರದೊಡ್ಡಿ ಗ್ರಾಮದ ಮನೆಯೊಂದಕ್ಕೆ ಒಳನುಗ್ಗಿರುವ ಕಳ್ಳರು ಚಿನ್ನಾಭರಣವನ್ನು ದೋಚಿರುವುದು ಸೋಮವಾರ ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿರುವ ಮಕ್ಕಳಾದ ಜಾನ್ ಜೋಸೆಫ್ ಹಾಗೂ ಸಗಾಯರಾಜ್ ಅವರು ಆಗಾಗ್ಗೆ ಗ್ರಾಮದ ಸೆಲ್ವರಾಜ್ ಅವರಿಗೆ ಸೇರಿದ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಸೆಲ್ವರಾಜ್ ಅವರು ಜಮೀನಿನ ಮನೆಯಲ್ಲಿ ವಾಸವಿದ್ದರು. ಜೂ.14 ರಂದು ಇಬ್ಬರು ಮಕ್ಕಳು ಬೆಂಗಳೂರಿಗೆ ತೆರಳಿದ್ದ ಹಿನ್ನೆಲೆಯಲ್ಲಿ ಮನೆಗೆ ಬೀಗ ಹಾಕಲಾಗಿತ್ತು.
ಸೋಮವಾರ ಸಂಜೆ ಸೆಲ್ವರಾಜ್ ಅವರು ಮನೆಗೆ ತೆರಳಿ ನೋಡಿದಾಗ ಬೀರುವಿನ ಬೀಗವನ್ನು ಮುರಿದು ಚಿನ್ನರ ಸರ, ಉಂಗುರ, ಕಿವಿಯೋಲೆ ಸೇರಿದಂತೆ 28 ಗ್ರಾಂ ಚಿನ್ನ ಹಾಗೂ 15 ಗ್ರಾಂ ಬೆಳ್ಳಿ ಆಭರಣವನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಸೆಲ್ವರಾಜ್ ರಾಮಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ.