ಚನ್ನಪಟ್ಟಣ ತಾಲೂಕಿನ Kempe Gowda's achievements!ಬೇವೂರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಪೀಠಾಧ್ಯಕ್ಷ ಅನ್ನದಾನೇಶ್ವರನಾಥ ಸ್ವಾಮೀಜಿ, ರಮೇಶ್‌ಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಬಿ.ಪಿ.ಮುದ್ದುಕೃಷ್ಣೇಗೌಡ, ಸಂಸ್ಥೆಯ ಅಧ್ಯಕ್ಷ ದೊಡ್ಡಮಾದೇಗೌಡ. ಉಪಾಧ್ಯಕ್ಷ ಜಿತೇಂದ್ರಕುಮಾರ್, ಖಜಾಂಚಿ ಬಿ.ಕೆ. ಮನು ಇದ್ದರು.
ಚನ್ನಪಟ್ಟಣ :ಬೆಂಗಳೂರಿಗೆ ಯಾರೇ ಹೋದರೂ ಅವರಿಗೆ ಅನ್ನ ಹಾಕುತ್ತಿರುವುದು ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ಶ್ರಮ. ಆದರೆ, ಅವರ ಸಾಧನೆಯನ್ನು ಅಂದಿನ ಕೆಲ ವಿದ್ಯಾವಂತರು ಮರೆಮಾಚಿದ್ದರು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪೀಠಾಧ್ಯಕ್ಷ ಅನ್ನದಾನೇಶ್ವರನಾಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ಬೇವೂರು ಸಿದ್ದರಾಮೇಶ್ವರ ವಿದ್ಯಾಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಯಾವುದೇ ಸಮುದಾಯ, ಜಾತಿ, ಧರ್ಮ, ಯಾವ ರಾಜ್ಯದವರೆ ಇರಲಿ ಬೆಂಗಳೂರಿನಲ್ಲಿ ಕೆಲಸ ಮತ್ತು ಆಶ್ರಯ ಪಡೆದು ಜೀವನ ಕಟ್ಟಿಕೊಳ್ಳುತ್ತಾರೆ. Kempe Gowda's achievements!
ಅದಕ್ಕೆ ಕೆಂಪೇಗೌಡರು ತಮ್ಮ ದೂರದೃಷ್ಟಿಯಿಂದ ಬೆಂಗಳೂರನ್ನು ನಿರ್ಮಾಣ ಮಾಡಿದ್ದೆ ಕಾರಣವಾಗಿದೆ. ಆದರೆ, ಅಂದು ವಿದ್ಯೆ ಕಲಿತಿದ್ದ ಕೆಲವು ಮಂದಿ ಕೆಂಪೇಗೌಡರ ಸಾಧನೆಯನ್ನು ಸಮಾಜಕ್ಕೆ ತಿಳಿಯದಂತೆ ಮರೆಮಾಚಿದ್ದರು ಎಂದು ಆರೋಪಿಸಿದರು.
ಸರ್ಕಾರ ಕೆಂಪೇಗೌಡರ ಜಯಂತಿ ಆಚರಣೆ ಮಾಡಲು ಕ್ರಮಕೈಗೊಂಡ ಬಳಿಕ ಎಲ್ಲರಿಗೂ ಬೆಂಗಳೂರು ನಿರ್ಮಾಣದ ಹಿಂದೆ ಕೆಂಪೇಗೌಡರ ಸಾಧನೆ ಮತ್ತು ತ್ಯಾಗ, ಶ್ರಮದ ಬಗ್ಗೆ ಜ್ಞಾನೋದಯವಾಗುತ್ತಿದೆ. ಇಡೀ ಜೀವರಾಶಿಗೆ ಅನ್ನ ಹಾಕುವ ಒಕ್ಕಲಿಗ ಸಮುದಾಯಕ್ಕೆ ಸೇರಿದ ಕೆಂಪೇಗೌಡರು ನಮ್ಮ ಸಮುದಾಯ ಎಂದು ಹೇಳಿಕೊಳ್ಳುವುದು ನಮ್ಮ ಹೆಮ್ಮೆಯಾಗಿದೆ.
ದೇಶಕ್ಕೆ ಒಕ್ಕಲಿಗ ಸಮುದಾಯದ ಕೊಡುಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕವಾಗಿ ಅಪಾರವಾಗಿದೆ. ಸಮುದಾಯದ ಮಕ್ಕಳಿಗೆ ಶಿಕ್ಷಣದ ಆಸಕ್ತಿ ಇದ್ದು, ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆ ಇದ್ದರೆ ನಮ್ಮ ಮಠಗಳಿವೆ. ಮಠಾಧಿಪತಿಗಳನ್ನು ಸಂಪರ್ಕಿಸಿದರೆ ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಶ್ರೀಗಳು ಹೇಳಿದರು.
ಕಕಜ ವೇದಿಕೆ ಅಧ್ಯಕ್ಷ ರಮೇಶ್‌ಗೌಡ ಮಾತನಾಡಿ, ಕೆಂಪೇಗೌಡರು ಬೆಂಗಳೂರು ನಿರ್ಮಾಣ ಮಾಡಲು ಅವರು ಪಟ್ಟ ಕಷ್ಟ, ಸೆರೆವಾಸ, ಅವರ ಸೊಸೆಯ ಪ್ರಾಣತ್ಯಾಗ ಯಾರೂ ಮರೆಯುವಂತಿಲ್ಲ. ಆದರೆ, ಇಂದು ರಾಜಕಾರಣಿಗಳು ಕೆಂಪೇಗೌಡರು ಕಟ್ಟಿದ್ದ ಕೆರೆ-ಕಟ್ಟೆಗಳನ್ನು ಮುಚ್ಚಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜ ಸೇವಕ ಪ್ರಸನ್ನ ಪಿ.ಗೌಡ ಮಾತನಾಡಿ, ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಖಾಸಗಿ ಸಂಸ್ಥೆಯಿಂದ 10 ಲಕ್ಷ ರೂ. ಸಿಎಸ್‌ಆರ್ ನಿಧಿಗೆ ಅನುಮೋದನೆ ಆಗಿದ್ದು, ಶೀಘ್ರ ಸಿಗಲಿದೆ. ಸಂಸ್ಥೆಯ ಪದಾಧಿಕಾರಿಗಳು ಈ ಅನುದಾನವನ್ನು ಸಂಸ್ಥೆಯ ಮೂಲ ಸೌಲಭ್ಯ ಪೂರೈಸಲು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ಎಲ್. ದಿನೇಶ್, ಸಂಸ್ಥೆಯ ಕಾರ್ಯದರ್ಶಿ ಬಿ.ಸಿ. ಯೋಗೇಶ್‌ಗೌಡ ಮಾತನಾಡಿದರು.
ಸಮಾಜ ಸೇವಕ ನರ್ಸರಿ ಲೋಕೇಶ್ ವಿದ್ಯಾರ್ಥಿಗಳಿಗೆ ಟ್ರ್ಯಾಕ್‌ಸೂಟ್ ವಿತರಿಸಿದರು.
ನಿರ್ದೇಶಕರಾದ ಬಿ.ಸಿ.ಚೇತನ್, ಬಿ.ಎಲ್.ನವೀನ್‌ಕುಮಾರ್, ರೈತ ಸಂಘದ ಕೆ.ಎನ್.ರಾಜಣ್ಣ, ಜಗದಾಪುರ ಕೃಷ್ಣೇಗೌಡ, ಶಿವಲಿಂಗೇಗೌಡ ನಾಗವಾರ, ನಗರಸಭೆ ಸದಸ್ಯ ನಾರಾಯಣ್ (ಕಂಠಿ), ಮೆಣಸಿಗನಹಳ್ಳಿ ಮಹೇಶ್, ಪ್ರಾಂಶುಪಾಲ ಡಿ.ಸಿ. ಸುರೇಶ್, ಉಪಪ್ರಾಂಶಪಾಲರಾದ ಗೌರಮ್ಮ ಉಪನ್ಯಾಸಕರು, ಶಿಕ್ಷಕವೃಂದ, ಮಕ್ಕಳು, ಸಿಬ್ಬಂದಿ ಸೇರಿ ಪಾಲಕರು ಇದ್ದರು.