They dumped the gravel and completely forgot about it! 
ರಾಜ್ಯ

ಜಲ್ಲಿ ಹಾಕಿ ಮರೆತೇ ಬಿಟ್ಟರು!

ಶ್ರೀನಿವಾಸಪುರ : ತಾಲೂಕಿನ ರೋಣೂರು&ಲೋಚರವಪಲ್ಲಿ ಮಾರ್ಗದಲ್ಲಿ ರಸ್ತೆ ನಿರ್ಮಿಸಿಲು ಜಲ್ಲಿ ಹಾಕಿ ಸುಮಾರು 2 ರಿಂದ 3 ತಿಂಗಳು ಕಳೆದರೂ ಡಾಂಬರ್​ ಹಾಕದಿದ್ದರಿಂದ ಈ ಭಾಗದಲ್ಲಿ ವಾಹನಗಳ ಓಡಾಟಕ್ಕೆ ತೀವ್ರ ಸಮಸ್ಯೆ ಉಂಟಾಗಿದ್ದು, ಆಂಬುಲೆನ್ಸ್​, ರೈತರ ವಾಹನಗಳು ಸೇರಿ ದ್ವಿಚಕ್ರವಾಹನ ಓಡಾಟಕ್ಕೆ ತೊಂದರೆಯಾಗಿದೆ.
ಸುಮಾರು 80 ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಎಲ್ಲ ಕಡೆ ಡಾಂಬರ್​ ಹಾಕಿ ಈ ಎರಡೂ ಗ್ರಾಮಗಳ ಮಧ್ಯೆ 1 ಕಿ.ಮೀ.ಉದ್ದದ ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು 3.40 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗುತ್ತಿಗೆದಾರರು ಇತ್ತ ಸುಳಿದೇ ಇಲ್ಲ.

ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧ ಶುರುವಾದಾಗಿನಿಂದ ಡಾಂಬರ್​ ಸರಬರಾಜು ಆಗುವುದು ವಿಳಂಬವಾಗಿದೆ. ಜತೆಗೆ ಬೆಲೆಯೂ ಗಗನಕ್ಕೇರಿದೆ. ವಾಹನಗಳ ಸಂಚಾರದಿಂದ ಧೂಳು ಹಬ್ಬುವುದನ್ನು ಕಡಿಮೆ ಮಾಡಲು ನಿತ್ಯ ಟ್ಯಾಂಕರ್​ ಮೂಲಕ ನೀರು ಹರಿಸುತ್ತಿದ್ದೇವೆ. ಮುಂದಿನ 15 ದಿನದ ಒಳಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು.

— ಮಂಜುನಾಥ್​, ಎಇಇ, ಲೋಕೋಪಯೋಗಿ ಇಲಾಖೆ
ಈ ಮಾರ್ಗವು ರೋಣೂರು ಹೋಬಳಿಯ ಪಂಚಾಯಿತಿ ಕೇಂದ್ರ ಸ್ಥಾನದಿಂದ ಲಕ್ಷಿ$್ಮಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ದ್ವಿಚಕ್ರವಾಹನದಲ್ಲಿ ಹೋಗುವವರು ಜಲ್ಲಿಕಲ್ಲುಗಳನ್ನು ದಾಟಿ ಹೋಗಲು ಹರಸಾಹಸ ಪಡಬೇಕಿದೆ. ಹೋಗುವಾಗ ಎದುರಿನಿಂದ ಯಾವುದಾರರೂ ಬೃಹತ್​ ವಾಹನ ಬಂದಾಗ ಜಲ್ಲಿಕಲ್ಲು ತಾಗುತ್ತಿವೆ. ರೋಗಿಗಳು ಆಸ್ಪತ್ರೆಗೆ ಹೋಗಲು ಹೆಣಗಾಡಬೇಕಿದೆ. ಇನ್ನೂ ಮಕ್ಕಳು ಸೈಕಲ್​ನಲ್ಲಿ ಹೋಗಲು ಆಗುವುದೇ ಇಲ್ಲ.
ಮತ್ತೊಂದೆಡೆ ಆಗಾಗ ಎದುರಾಗು ಧೂಳಿನ ಸಮಸ್ಯೆಯಿಂದ ಅನೇಕರು ಮುಖಕ್ಕೆ ಬಟ್ಟೆ ಕಟ್ಟಿಕೊಂಡೇ ಓಡಾಡಬೇಕಿದೆ. ಪ್ರತಿನಿತ್ಯ ಕೆಎಸ್​ಆರ್​ಟಿಸಿ ಬಸ್​ಗಳು, ಟ್ರಾ$್ಯಕ್ಟರ್​ಗಳು, ಇತರೆ ವಾಹನಗಳು ಹೆಚ್ಚಾಗಿ ಓಡಾಡುತ್ತವೆ.
ಕೂಡಲೇ ಸಂಬಂಧಪಟ್ಟ ಮೇಲಧಿಕಾರಿಗಳು ಗಮನಿಸಿ ರಸ್ತೆಗೆ ಡಾಂಬರ್​ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.