There should be no disruption in the distribution of cooking gas.
ಗೌರಿಬಿದನೂರು: ತಾಲೂಕಿನಲ್ಲಿ ಸಾರ್ವಜನಿಕರಿಗೆ ಅಡುಗೆ ಅನಿಲ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಲು ತಹಸೀಲ್ದಾರ್ ಕೆ.ಎಂ.ಅರವಿಂದ್ ನಗರ, ಗ್ರಾಮಾಂತರ ಪ್ರದೇಶಗಳ ವಿವಿಧ ಗ್ಯಾಸ್ ಏಜೆನ್ಸಿಗಳಿಗೆ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಮತ್ತು ದಾಸ್ತಾನು ಕುರಿತು ಕೇಳಿಬಂದ ದೂರುಗಳ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವುದು ನಮ್ಮ ಜವಾಬ್ದಾರಿ ಆದ್ದರಿಂದ ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ರೀತಿಯ ಕೃತಕ ಅಭಾವ ಸೃಷ್ಟಿಸಬಾರದು. ವಿತರಣೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಅಥವಾ ನಿಯಮ ಉಲ್ಲಂಸಿದಲ್ಲಿ ಅಂತಹ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
> ಕೆ.ಎಂ.ಅರವಿಂದ್ ತಹಸೀಲ್ದಾರ್ ಗೌರಿಬಿದನೂರು
ನಗರದ ರಮಾನಂದ ಎಜೆನ್ಸಿ, ಶ್ರೀದುರ್ಗಾ, ಶ್ರೇಣಿಕ್, ಲ್ಮ, ಯುಕ್ತ ಏಜೆನ್ಸಿ ಮತ್ತು ತಾಲೂಕಿನ ನಗರಗೆರೆ ಹೋಬಳಿಯ ತೋಕಲಹಳ್ಳಿ, ತೊಂಡೇಬಾವಿ ಹೋಬಳಿ ಬೆಳ್ತೂರು ಹಾಗೂ ಡಿ.ಪಾಳ್ಯ ಹೋಬಳಿಯ ಕೆಲವು ಏಜೆನ್ಸಿಗಳ ಗೋದಾಮುಗಳಿಗೆ ಭೇಟಿ ನೀಡಿ ಸಿಲಿಂಡರ್ಗಳ ದಾಸ್ತಾನು ಪುಸ್ತಕ, ಪ್ರಸ್ತುತ ಲಭ್ಯವಿರುವ ಸಿಲಿಂಡರ್ಗಳ ಸಂಖ್ಯೆಯನ್ನು ತಾಳೆ ನೋಡಿದರು. ಗೋದಾಮುಗಳಲ್ಲಿರುವ ಭರ್ತಿ ಮಾಡಿದ ಸಿಲಿಂಡರ್ಗಳು ಮತ್ತು ಖಾಲಿ ಸಿಲಿಂಡರ್ಗಳ ನಿಖರ ಮಾಹಿತಿ ಪಡೆದರು. ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಗ್ಯಾಸ್ ತಲುಪುತ್ತಿದ್ದೆಯೇ? ಬುಕಿಂಗ್ ಆದ ಎಷ್ಟು ದಿನಗಳಲ್ಲಿ ವಿತರಣೆ ಮಾಡಲಾಗುತ್ತಿದೆ? ಎಂಬ ಬಗ್ಗೆ ಮಾಹಿತಿ ಪಡೆದರು.
ಅನಿಲ ಗೋದಾಮುಗಳಲ್ಲಿ ಅಳವಡಿಸಲಾಗಿರುವ ಅಗ್ನಿಶಾಮಕ ಉಪಕರಣಗಳು ಮತ್ತು ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲಿಸಿದರು. ಸಾರ್ವಜನಿಕರಿಂದ ಬರುವ ದೂರುಗಳನ್ನು ತಕ್ಷಣವೇ ಬಗೆಹರಿಸಬೇಕು ಮತ್ತು ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಗ್ಯಾಸ್ ಪೂರೈಕೆ ಮಾಡಬೇಕು, ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಬಾರದು ಎಂದು ಏಜೆನ್ಸಿ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆಹಾರ ಇಲಾಖೆಯ ಶಿರಸ್ತೆದಾರ್ ಪುಷ್ಪಲತಾ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರಾದ ಶಿವಪ್ರಸಾದ್, ಚೌಡಪ್ಪ, ಸಿಬ್ಬಂದಿ ಗಿರೀಶ್ ಇದ್ದರು.