ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆ.ಎನ್​.ರಾಜಣ್ಣ 
ರಾಜ್ಯ

ಸರ್ಕಾರಿ ಕಾರ್ಯಕ್ರಮಕ್ಕೆ ಶಿಷ್ಟಾಚಾರವಿರುತ್ತೆ: ಸಿದ್ದರಾಮಯ್ಯ ಮಾಸ್ ಲೀಡರ್, ಅವರನ್ನು ಸೈಡ್​ಲೈನ್ ಮಾಡಲಾಗಲ್ಲ : ಕೆ.ಎನ್​.ರಾಜಣ್ಣ | K N Rajanna

ಬೆಂಗಳೂರು: ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎನ್​.ರಾಜಣ್ಣ(K N Rajanna) ಪ್ರತಿಕ್ರಿಯಿಸಿದ್ದು, ಸರ್ಕಾರಿ ಕಾರ್ಯಕ್ರಮಕ್ಕೆ ಶಿಷ್ಟಾಚಾರವಿರುತ್ತೆ, ಅದನ್ನು ಫಾಲೋ ಮಾಡಬೇಕು. ಸಿದ್ದರಾಮಯ್ಯ ಮಾಸ್ ಲೀಡರ್, ಅವರನ್ನು ಸೈಡ್​ಲೈನ್ ಮಾಡಲಾಗಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸರ್ಕಾರಿ ಕಾರ್ಯಕ್ರಮಕ್ಕೆ ಪ್ರೋಟೋಕಾಲ್ ಇರುತ್ತೆ, ಆ ಪ್ರೋಟೋಕಾಲ್ ಅನ್ವಯ ಮಾಡಿದ್ದಾರೆ. ಪ್ರೋಟೋಕಾಲ್ ಫಾಲೋ ಆಗದಿದ್ರೆ ಲೋಪವಾಗಲಿದೆ. ಸಂಬಂಧಪಟ್ಟವರ ಮೇಲೆ‌ಕ್ರಮ ಆಗುತ್ತದೆ. ಬೇರೆಯವರ ವಿಚಾರ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇದೇ ವೇಳೆ ನನ್ನ ಪ್ರಶ್ನೆ ನಾನೇ ಹೇಳ್ತೀನಿ ಕೇಳಿ, ನಾನು ಯಾರ ನೆರಳಿನಲ್ಲೂ ಇಲ್ಲ. ನಾವು ಎಲ್ಲಿರ್ತೇವೆ ಅಲ್ಲಿಯೇ ಇರ್ತೇವೆ. ಸಿದ್ದರಾಮಯ್ಯ ಈಸ್ ಎ ಮಾಸ್ ಲೀಡರ್. ಅವರನ್ನ ಸೈಡ್ ಲೈನ್‌ಮಾಡೋಕೆ ಆಗಲ್ಲ. ಅವರನ್ನ ದೂರ ಇಟ್ಟು ಪಕ್ಷ ಸಂಘಟನೆ ಕಷ್ಟ. ಆ ರೀತಿ ಮಾಡ್ತಾರೆ ಅಂದ್ರೆ ಅದೊಂದು ದೊಡ್ಡ ಬ್ಲಂಡರ್. ಏನೇ ಮಾಡಿದ್ರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಈಗ ಕಾರ್ಪೋರೇಷನ್ ಎಲೆಕ್ಷನ್‌ ಬರ್ತಿದೆ. ಸಿದ್ದರಾಮಯ್ಯನವರನ್ನು ಸೈಡ್​ಲೈನ್ ಮಾಡೋಕೆ ಆಗಲ್ಲ. ಮಾಸ್​ ಲೀಡರ್ ಆದವರನ್ನು ಏನೂ ಮಾಡೋಕೆ ಆಗಲ್ಲ. ಅವರನ್ನೂ ತುಳಿಯೋಕೆ ಆಗಲ್ಲ. ಹಿಂದೆ ಇಂದಿರಾ ಗಾಂಧಿ ಕೀಸಾ ಪ್ರಕರಣದಲ್ಲಿ ಜೈಲಿಗೆ ಹೋದರು. ಬಳಿಕ 1979ರಲ್ಲಿ ಚುನಾವಣೆ ಬಂತು. ಅವರು ಮರಳಿ ಗೆದ್ದು ಅಧಿಕಾರಕ್ಕೆ ಬಂದರು. ಮಾಸ್ ಲೀಡರ್​ಗಳ ಶಕ್ತಿ ಅಳಿಯೋಕೆ ಆಗಲ್ಲ ಎಂದು ಪ್ರತಿಪಾದಿಸಿದ್ದಾರೆ.