ಮಧುಗಿರಿ Rajanna ರೈತರಿಗೆ ಹಾಲು ಕೆರೆಯುವ ಯಂತ್ರ, ರಾಸುಗಳಿಗೆ ನೆಲ ಹಾಸು, ವಲಸೆ ಕುರಿಗಾರರಿಗೆ ಗುರುತಿನ ಚೀಟಿಯನ್ನು ಶಾಸಕ ಕೆ.ಎನ್​.ರಾಜಣ್ಣ ವಿತರಿಸಿದರು. ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಟಿಎಪಿಸಿಎಂಎಸ್​ ಅಧ್ಯಕ್ಷ ಎಂ.ಎಸ್​.ಮಲ್ಲಿಕಾರ್ಜುನಯ್ಯ, ಪಶು ಇಲಾಖೆಯ ಉಪನಿರ್ದೇಶಕ ಎಚ್​.ಎಂ.ಶಿವಪ್ರಸಾದ್​, ಸಹಾಯ ನಿರ್ದೇಶಕ ಡಾ.ಜಗದೀಶ್​, ತಹಸೀಲ್ದಾರ್​ ನಂದಿನಿ ಇತರರಿದ್ದರು.  
ರಾಜ್ಯ

ಸರ್ಕಾರದಲ್ಲಿ ಹಣದ ಕೊರತೆ ಇಲ್ಲ Rajanna

ಮಧುಗಿರಿ:

ರೈತರು, ಕೂಲಿ ಕಾರ್ಮಿಕರು ಬರಗಾಲ ಬರಬಹುದು ಎಂದು ಭಯಪಡುವ ಅಗತ್ಯವಿಲ್ಲ. ಕಾಂಗ್ರೆಸ್​

Rajanna

ಸರ್ಕಾರ ನಿಮ್ಮ ಜತೆ ಇರಲಿದೆ ಎಂದು ಶಾಸಕ ಕೆ.ಎನ್​.ರಾಜಣ್ಣ ಭರವಸೆ ನೀಡಿದರು.

ತಾಲೂಕಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಸಮೀಪದ ಪಶು ಇಲಾಖೆಯಿಂದ ಬುಧವಾರ ರೈತರಿಗೆ 6 ಹಾಲು ಕೆರೆಯುವ ಯಂತ್ರ, ರಾಸುಗಳಿಗೆ 94 ನೆಲ ಹಾಸು, 26 ವಲಸೆ ಕುರಿಗಾರರಿಗೆ ಗುರುತಿನ ಚೀಟಿ ವಿತರಣೆ ಹಾಗೂ ಮೇವು ಬೀಜಗಳ ಕಿಟ್​ಗಳನ್ನು ವಿತರಿಸಿ ಮಾತನಾಡಿದ ಅವರು, ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಅವತ್ಯ ಇರುವೆಡೆ ಕುಡಿಯುವ ನೀರಿಗಾಗಿ ಪೈಪ್​ ಲೈನ್​ ಹಾಗೂ ಬೋರ್​ವೆಲ್​ ವ್ಯವಸ್ಥೆ ಕಲಿಸಲಾಗುವುದು ಎಂದರು.
ರಾಸುಗಳಿಗೆ ಮೇವು ಕೊರತೆಯಾಗದಂತೆ ಮೇವು ಬೀಜಗಳನ್ನು ವಿತರಿಸಲಾಗುತ್ತಿದೆ. ತಾಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು, ಗ್ರಾಪಂ ಮಟ್ಟದಲ್ಲಿ ಬಿವಿ ಜಿ ರಾಮ್​ ಜಿ ಯೋಜನೆಯಡಿ ಮತ್ತಷ್ಟು ಚೆಕ್​ ಡ್ಯಾಂಗಳನ್ನು ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇವುಗಳ ನಿಮಾರ್ಣದಿಂದ ಶುದ್ಧ ಕುಡಿಯುವ ನೀರು ದೊರೆಯಲಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರು ಬರಗಾಲವನ್ನು ಎದುರಿಸಲು ಅವಶ್ಯವಿರುವ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.
ದೊಡ್ಡೇರಿ ಹಾಗೂ ಕೊಡಿಗೇನಹಳ್ಳಿ ಹೋಬಳಿಗಳಲ್ಲಿ ಮೇವಿನ ಕೊರತೆ ಇದ್ದು, ಮೇವು ಬೆಳೆಯಲು ಆಸಕ್ತಿ ಇರುವ ರೈತರಿಗೆ ಮಾತ್ರ ಕಿಟ್​ಗಳನ್ನು ವಿತರಿಸಲಾಗುವುದು. ರೈತರು ಬೆಳೆದಂತಹ ಮೇವುನ್ನು ತಮ್ಮ ರಾಸುಗಳಿಗೆ ಅಗತ್ಯವಿರುವಷ್ಟು ಉಳಿಸಿಕೊಂಡು ಹೆಚ್ಚುವರಿ ಮೇವನ್ನು ಸರ್ಕಾರಕ್ಕೆ ಮಾರಾಟ ಮಾಡುವಂತೆ ಮನವಿ ಮಾಡಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, 10 ಸಾವಿರ ಮೇವು ಬೀಜಗಳನ್ನು ವಿತರಿಸಲು ಕ್ರಮ ಕೈಗೊಂಡಿದ್ದು, ಇನ್ನೂ 14 ವಾರಗಳಿಗೆ ಆಗುವಷ್ಟು ಮೇವಿನ ಸಂಗ್ರಹವಿದೆ. ನೀರಿನ ಸೌಲಭ್ಯ ಇರುವವರು ಮೇವು ಬೀಜಗಳನ್ನು ಬೆಳೆದು ರಾಸುಗಳ ಮೇವಿನ ಕೊರತೆ ನೀಗಿಸಬಹುದಾಗಿದೆ ಎಂದರು.
ಇಒ ಉತ್ತಮ್​, ಡಿಸಿಸಿ ಬ್ಯಾಂಕ್​ ನಿರ್ದೇಶಕ ಬಿ.ನಾಗೇಶ್​ ಬಾಬು, ಮುಖಂಡರಾದ ತುಂಗೊಟಿ ರಾಮಣ್ಣ, ಎಂ.ಕೆ.ನಂಜುಂಡಯ್ಯ, ಪಿ.ಟಿ.ಗೋವಿಂದಯ್ಯ, ಶ್ರೀಧರ್​, ಸಾಧಿಕ್​, ಆಲೀಂ ಇತರರಿದ್ದರು.
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ಸಮೀಪದ ಇಂದಿರಾ ಗ್ರಾಮದ ತೋಟಗಾರಿಕೆ ಇಲಾಖೆಯ ನರ್ಸರಿ ಾಮ್​ರ್ಗೆ ಭೇಟಿ ನೀಟಿದ ಶಾಸಕ ರಾಜಣ್ಣ, ತೋಟಗಾರಿಕೆ ಾಮ್​ರ್ನಲ್ಲಿ ಮೇವು ಬೆಳೆಯುವುದರಿಂದ ರೈತರಿಗೆ ಅನುಕೂಲವಾಗಲಿದೆ. ನೀರಿನ ಕೊರತೆ ನೀಗಿಸಲು ಶಾಸಕರ ಅನುದಾನದಲ್ಲಿ ಬೋರ್​ವೆಲ್​ ಕೊರೆಸಿ ಗ್ರಾಪಂನಿಂದ ಮೋಟಾರ್​ ಪಂಪ್​ ನೀಡಲಾಗುವುದು ಎಂದು ತಿಳಿಸಿದರು. ಜಂಟಿ ನಿರ್ದೇಶಕಿ ಶಾರದಮ್ಮ, ಉಪನಿರ್ದೇಶಕ ರಮೇಶ್​, ಸಹಾಯಕ ನಿರ್ದೇಶಕ ಶಶಿಧರ್​ ಇದ್ದರು.