ಎರಡೆರಡು ಬಾರಿ ಜಯಂತಿಗೆ ಆಸ್ಪದ ಇಲ್ಲ Jayanti
ಬಂಗಾರಪೇಟೆ: ತಾಲೂಕಿನಲ್ಲಿ ನಾಡಪ್ರಭು ಕೆಂಪೇಗೌಡರ ಎರಡೆರಡು ಬಾರಿ ಜಯಂತಿಗೆ ಆಸ್ಪದ ಕಲ್ಪಿಸುವುದಿಲ್ಲ ಎಂದು ತಾಲೂಕು ಕೆಂಪೇಗೌಡರ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಮುನಿರಾಜು ತಿಳಿಸಿದರು.Jayanti
ನಗರಸಭೆ ಸಭಾಂಗಣದಲ್ಲಿ ಮಂಳವಾರ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಕೆಂಪೇಗೌಡ ಜಯಂತಿಯನ್ನು ಎರಡೆರಡು ಸಲ ಆಚರಣೆ ಮಾಡುವುದಿಲ್ಲ. ಸರ್ಕಾರ ನಿಗದಿಪಡಿಸಿರುವಂತಹ ದಿನಾಂಕದಂದೇ ಕೆಂಪೇಗೌಡರ ಜಯಂತಿ ಆಚರಿಸಲು ಎಲ್ಲ ಸಮುದಾಯದ ಮುಖಂಡರು ತೀಮಾರ್ನಿಸಿದ್ದೇವೆ ಎಂದರು.
ಮುಖಂಡ ಚಂದ್ರಪ್ಪ ಮಾತನಾಡಿ, ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರು ಕೆಂಪೇಗೌಡ ತಾಲೂಕು ಒಕ್ಕಲಿಗರ ಸಂಘಕ್ಕೆ 15 ಗುಂಟೆ ಜಮೀನು ಮಂಜೂರು ಮಾಡಲಾಗುವುದು ಎಂದು ತಿಳಿಸಿರುವುದಾಗೊ ಮಾಹಿತಿ ನೀಡಿದರು.