ಚಿಂಚೋಳಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಪ್ರೊ.ಶಿವರಾಜ ಪಾಟೀಲ್, ಮಲ್ಲಿಕಾರ್ಜುನ ಪಾಲಾಮೂರ, ಬಸವರಾಜ ಐನೊಳ್ಳಿ, ಡಾ.ಗವಿಸಿದ್ದಪ್ಪ ಪಾಟೀಲ್, ಕಾಶಿನಾಥ ಹುಣಜೆ, ನಾಗೇಂದ್ರ ಶೀಲವಂತ ಇತರರಿದ್ದರು.
- ಪ್ರೊ.ಶಿವರಾಜ ಪಾಟೀಲ್ ಅನಿಸಿಕೆ
- ಚಿಂಚೋಳಿಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ
ಚಿಂಚೋಳಿ: ಒಂದು ಕಾಲದಲ್ಲಿ ಜಗತ್ತು ಬಲದ ಮೇಲೆ ನಡೆಯುತ್ತಿತ್ತು. ಆದರೆ ಇಂದು ಾನದ ಮೇಲೆ ನಿಂತಿದೆ. ಾನಕ್ಕಿಂತ ಶ್ರೇಷ್ಠವಾದ ಸಂಪತ್ತು ಮತ್ತೊಂದಿಲ್ಲ ಎಂದು ಸಾಹಿತಿ ಪ್ರೊ.ಶಿವರಾಜ ಪಾಟೀಲ್ ಕಲಬುರಗಿ ಹೇಳಿದರು.
ಸಿ.ಬಿ.ಪಾಟೀಲ್ ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಟಕದಿಂದ ಬಸವ ಜಯಂತಿ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಸಾಂಸತಿಕ ನಾಯಕ ಬಸವಣ್ಣ ಕುರಿತು ವಿಶೇಷ ಉಪನ್ಯಾಸ, ದ್ವೀತಿಯ ಪಿಯುಸಿಯಲ್ಲಿ ಅತ್ಯಧುಜ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಎಲ್ಲೆಡೆ ಾನವನ್ನು ಪಸರಿಸಿದರು. ಬಸವಣ್ಣ ಾನದ ಬಲದಿಂದ ಅಾನವನ್ನು ಹೊಡೆದೊಡಿಸಿದರು. ವಚನ ಸಾಹಿತ್ಯವು ಅಲಿಖಿತ ಸಂವಿಧಾನವಾಗಿದೆ ಎಂದು ಬಣ್ಣಿಸಿದರು.
ಶರಣ ಸಾಹಿತ್ಯ ಪರಿಷತ್ ಗೌರವಾಧ್ಯ ಮಲ್ಲಿಕಾರ್ಜುನ ಪಾಲಾಮೂರ, ತಾಲೂಕು ಅಧ್ಯಕ್ಷ ಬಸವರಾಜ ಐನೋಳ್ಳಿ, ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ್, ಪ್ರೊ.ಕಾಶಿನಾಥ ಹುಣಜೆ, ನಾಗೇಂದ್ರ ಶೀಲವಂತ ಮಾತನಾಡಿದರು. ಪ್ರಮುಖರಾದ ಡಾ.ಮಾಣಿಕಮ್ಮ ಸುಲ್ತಾನಪೂರ, ರೇವಣಸಿದ್ದಯ್ಯ ಹಿರೇಮಠ, ದಯಾನಂದ ಹಿರೇಮಠ ಇತರರಿದ್ದರು. ದ್ವೀತಿಯ ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ತಾಲೂಕಿನ 70ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸತ್ಕರಿಸಿ ಪ್ರೋತ್ಸಾಹಿಸಲಾಯಿತು.