ಯಾದಗಿರಿ ತಾಲೂಕಿನ ಹೊನಗೇರಾದಲ್ಲಿ ಭಾನುವಾರ ನಡೆದ ಉಚಿತ ಆರೋಗ್ಯ ಶಿಬಿರದಲ್ಲಿ ಡಾ.ರವಿಕುಮಾರ ರಾಖಾ ಮಾತನಾಡಿದರು. ಡಾ.ಉದಯಕುಮಾರ ಖಸ್ಗೆ ಇತರರಿದ್ದರು.
- ಡಾ.ಉದಯಕುಮಾರ ಖಸ್ಗೆ ಹೇಳಿಕೆ
- ಹೊನಗೇರಾದಲ್ಲಿ ಉಚಿತ ಆರೋಗ್ಯ ಶಿಬಿರ
ಯಾದಗಿರಿ: ಉತ್ತಮ ಆರೋಗ್ಯಕ್ಕಿಂತ ಮಿಗಿಲಾದ ಸಂಪತ್ತು ಮತ್ತೋಂದಿಲ್ಲ ಎಂದು ಐಸಿಯು ವಿಶೇಷ ತ ಡಾ.ಉದಯಕುಮಾರ ಖಸ್ಗೆ ಹೇಳಿದರು.
ಹೊನಗೇರಾ ಗ್ರಾಮದಲ್ಲಿ ದಿ.ವೀರಣ್ಣ ರಾಖಾ ಸಾಹುಕಾರ ಇವರ ಸ್ಮರಣಾರ್ಥವಾಗಿ ಕಲಬುರಗಿಯ ಆರ್ಕೆ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ವತಿಯಿಂದ ಭಾನುವಾರ ನಡೆದ ಉಚಿತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಿತ್ಯ ಪೋಷಕಾಂಶಗಳ ಪದಾರ್ಥವನ್ನು ಸರಿಯಾದ ಸಮಯಕ್ಕೆ ಸೇವಿಸಬೇಕು. ದುಶ್ಚಟಗಳಿಂದ ದೂರವಿರಬೇಕು ಹಾಗೂ ನಿಯಮಿತವಾಗಿ ಯೋಗ, ವ್ಯಾಯಾಮ ಮಾಡುವುದರಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಜೀವನದಲ್ಲಿ ಏನೆಲ್ಲ ಗಳಿಸಿದರೂ ಆರೋಗ್ಯ ಸರಿ ಇರಲಿಲ್ಲ ಎಂದರೆ ಅದೆಲ್ಲವೂ ವ್ಯರ್ಥ ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಆರ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥ ಡಾ.ರವಿಕುಮಾರ ರಾಖಾ ಮಾತನಾಡಿ, ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಆಸ್ಪತ್ರೆ ಸ್ಥಾಪಿಸಿ, ನಮ್ಮ ಸ್ವಂತ ಊರಾದ ಹೊನಗೇರಿ ಗ್ರಾಮದ ಜನರ ಆರೋಗ್ಯ ಕಾಪಾಡಲು ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿದೆ ಎಂದರು.
ಶಿಬಿರದಲ್ಲಿ ಸುಮಾರು 250 ರಿಂದ 300 ಜನರಿಗೆ ತಪಾಸಣೆ ಮಾಡಲಾಯಿತು. ಇದಕ್ಕೆ ಸಂಬಂಧಿಸಿದ ಪರೀೆಯನ್ನು ಉಚಿತವಾಗಿ ಮಾಡಿ ಮಾತ್ರೆ ಕೂಡ ನೀಡಲಾಯಿತು. ಶಿಬಿರದಲ್ಲಿ ಡಾ.ಪೂಜಾ ರಾಖಾ, ಡಾ.ಉದಯಕುಮಾರ, ಡಾ.ಶ್ವೇತಾ ಖಾಸ್ಗೆ, ಡಾ.ಈಶ್ವರ ತಪಾಸಣೆ ಮಾಡಿದರು. ದೇವೇಂದ್ರಯ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪ್ರಾಸ್ತಾವಿಕವಾಗಿ ಈಶಪ್ಪ ರಾಖಾ ಮಾತನಾಡಿದರು. ಕಲ್ಲಪ್ಪ ರಾಖಾ, ಬಸವರಾಜ ರಾಖಾ, ಕಲಾವತಿ ಬೊಮ್ಮ, ಕವಿತಾ ತೆಂಗಿನಕಾಯಿ, ಶರಣು ಖಸ್ಗೆ, ಶರಣಗೌಡ ಬಿರಾದಾರ, ಸಂತೋಷಕುಮಾರ ಇತರರಿದ್ದರು. ಶೇಖರ ರಾಖಾ ವಂದಿಸಿದರು. ಉಪನ್ಯಾಸಕ ಬಸವಂತರಾಯ ಪಾಟೀಲ್ ನಿರೂಪಿಸಿದರು.