ಕ್ರೀಡಾಕೂಟದಲ್ಲಿ ಭಾಗವಹಿಸಲು ವಯೋಮಿತಿಯಿಲ್ಲ sports 
ರಾಜ್ಯ

ಕ್ರೀಡಾಕೂಟದಲ್ಲಿ ಭಾಗವಹಿಸಲು ವಯೋಮಿತಿಯಿಲ್ಲ sports

ಪ್ರಮುಖ ಮುಖ್ಯಾಂಶಗಳು

  • ಎಲ್​.ಎಚ್​. ಇಂಟರ್​ನ್ಯಾಷನಲ್​ ಶಾಲೆಯ ಅಧ್ಯಕ್ಷ ರಾಜಣ್ಣ ಹೇಳಿಕೆ
ಮುಳಬಾಗಿಲು: ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳಲು ವಯಸ್ಸಿನ ಮಿತಿ ತೊಡಕಾಗುವುದಿಲ್ಲ. ಪಾಲಕರು ಸಹ ಮಕ್ಕಳ ಕ್ರೀಡಾಕೂಟಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮವಾದ ಬೆಳವಣಿಗೆ ಎಂದು ಎಲ್​.ಎಚ್​. ಇಂಟರ್​ನ್ಯಾಷನಲ್​ ಶಾಲೆಯ ಅಧ್ಯಕ್ಷ ರಾಜಣ್ಣ ಹೇಳಿದರು.
ತಾಲೂಕಿನ ಕಾಶಿಪುರ ವೃತ್ತದ ಬಳಿಯಿರುವ ಎಲ್​ಎಚ್​ ಇಂಟರ್​ನ್ಯಾಷನಲ್​ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಪಾಲಕರ ಕ್ರೀಡಾಕೂಟದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳೊಂದಿಗೆ ಪಾಲಕರೂ ಸಹ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರೆ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ಒದಗಿಸುವುದು ಸುಲಭವಾಗುತ್ತದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ನಿಟ್ಟಿನಲ್ಲಿ ಶಾಲೆಯಲ್ಲಿ ಶಿಕ್ಷಕರು ಹಾಗೂ ಮನೆಯಲ್ಲಿ ಪಾಲಕರು ಹೆಚ್ಚಿನ ಸಮಯ ಓದಬೇಕೆಂಬ ಒತ್ತಡವನ್ನು ಮಕ್ಕಳ ಮೇಲೆ ಏರುತ್ತಾರೆ. ಇದರಿಂದ ಮಕ್ಕಳು ಮಾನಸಿಕ ಒತ್ತಡಕ್ಕೆ ಗುರಿಯಾಗುತ್ತಾರೆ. ಇವುಗಳಿಂದ ಹೊರ ಬರಬೇಕಾದಲ್ಲಿ ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಕೆ.ಆರ್​. ಶಿವರಾಜು ಮಾತನಾಡಿ, ಮಕ್ಕಳಿಗೆ ಅವಶ್ಯ ವಸ್ತುಗಳನ್ನು ಕೊಡಿಸುವುದಷ್ಟೇ ಪಾಲಕರ ಜವಾಬ್ದಾರಿ ಎಂದುಕೊಳ್ಳಬಾರದು. ಮಕ್ಕಳೊಂದಿಗೆ ಸ್ನೇಹಿತರಂತೆ ವರ್ತಿಸಿ ಅವರ ಮಾನಸಿಕ, ದೈಹಿಕ ಹಾಗೂ ಶೈಕ್ಷಣಿಕ ಸಮಸ್ಯೆ ಮತ್ತು ಕುಂದುಕೊರತೆ ಪತ್ತೆ ಹಚ್ಚಿ, ಕಾಲಕಾಲಕ್ಕೆ ಆ ಸಮಸ್ಯೆಗಳ ನಿವಾರಣೆ ಮಾಡಿದಾಗ ಪ್ರತಿಯೊಂದು ಮಗವೂ ತನ್ನಷ್ಟಕ್ಕೆ ತಾನೇ ಮುಂದುವರೆಯುತ್ತದೆ ಎಂದರು.
ಪಾಲಕರಿಗಾಗಿ ಹಗ್ಗಾಜಗ್ಗಾಟ, ಥ್ರೋಬಾಲ್​, ವಾಲಿಬಾಲ್​, ಮ್ಯೂಸಿಕಲ್​ ಚೇರ್​, ಕಬ್ಬಡ್ಡಿ, ಕೋಲು ಆಯುವುದು, ನೀರು ತುಂಬಿಸುವ ಆಟ, ಚೆಂಡು ಆಯುವುದು ಮತ್ತಿತರೆ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಮುಖ್ಯಶಿಕ್ಷಕ ನಯಾಜ್​, ಶಿಕ್ಷಕರಾದ ಕವಿತಾ, ವಿಜಯಲಕ್ಷಿ$್ಮ, ನೀಲಮ್ಮ, ರಮ್ಯಾ, ಸಾನೀಯಾ ಫಾತೀಮಾ, ಸುಹೇಲ್​ಖಾನ್​, ಗೀತಾ, ಮಂಗಳಾ, ಪವಿತ್ರಾ, ರೇಷ್ಮಾ, ರಾಶಿ, ಜೋಹರಾಭಾನು, ಮುಸ್ಕಾನ್​ ಫಾತೀಮಾ, ಸಾರ್ತಿಕಾ, ಎಸ್​. ಸ್ವಾತಿ, ಆರ್​.ಎ. ಸ್ವಾತಿ, ಎಸ್​. ಸುಬ್ರಮಣಿ ಇದ್ದರು.