ಯಾದಗಿರಿಯ ಯಿಮ್ಸ್ನಲ್ಲಿ ಸೋಮವಾರ ನರ್ಸಿಂಗ್ ಕಾಲೇಜು ಕಟ್ಟಡಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಗುದ್ದಲಿಪೂಜೆ ನೆರೆವೇರಿಸಿದರು. ಶಾಸಕ ಚನ್ನಾರಡ್ಡಿ ಪಾಟೀಲ್, ಡಿನ್ ಡಾ.ಸಂದೀಪ್ ಇತರರಿದ್ದರು.
- ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿಕೆ
- ಯಿಮ್ಸ್ನಲ್ಲಿ ಕಟ್ಟಡಕ್ಕೆ ಗುದ್ದಲಿಪೂಜೆ
ಯಾದಗಿರಿ: ಭಾರತ ಸೇರಿ ವಿದೇಶದಲ್ಲೂ ನರ್ಸಿಂಗ್ ಸೇವೆಗೆ ಹೆಚ್ಚಿನ ಬೇಡಿಕೆ ಇದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ವೈದ್ಯಕಿಯ ವಿಾನಗಳ ಸಂಸ್ಥೆ ವ್ಯಾಪ್ತಿಯಲ್ಲಿ 2025&26ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಡಿ ಒಟ್ಟು 9.86 ಕೋ.ರೂ ವೆಚ್ಚದ ನೂತನ ನರ್ಸಿಂಗ್ ಕಾಲೇಜು ಕಟ್ಟಡ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಸರ್ಕಾರಿ ವೈದ್ಯಕಿಯ ಕಾಲೇಜುಗಳ ವ್ಯಾಪ್ತಿಯಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ. ಭಾರತ ಸೇರಿ ವಿದೇಶದಲ್ಲಿ ನರ್ಸಿಂಗ್ ಸೇವೆಗೆ ಹೆಚ್ಚಿನ ಬೇಡಿಕೆ ಇರುವುದನ್ನು ಮನಗಂಡು ಎಲ್ಲೆಲ್ಲಿ ವೈದ್ಯಕಿಯ ಕಾಲೇಜುಗಳವೆಯೋ ಅಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆಗೆ ನಮ್ಮ ಸರ್ಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಕ್ಕಳಿಗೆ ಇದೊಂದು ಅತ್ಯುತ್ತಮ ತರಬೇತಿ, ಮೂಲಸೌಕರ್ಯ ಹಾಗೂ ಆಸ್ಪತ್ರೆಗಳಿಗೂ ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಜೇವರ್ಗಿ, ಸೇಡಂಗಳಲ್ಲೂ ಸಹ ಆರಂಭಿಸಿದ್ದು, ಇಂದು ಯಾದಗಿರಿಯಲ್ಲೂ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರ ಆರೋಗ್ಯ ೇತ್ರದಲ್ಲಿ ದೊಡ್ಡ ಬದಲಾವಣೆ ತರುತ್ತಿದೆ. ಕಳೆದ 2013ರಲ್ಲಿ ತಾವು ವೈದ್ಯಕಿಯ ಶಿಣ ಸಚಿವರಾಗಿದ್ದ ಜಿಲ್ಲೆಗೊಂದು ಸರ್ಕಾರಿ ವೈದ್ಯಕಿಯ ಕಾಲೇಜು ಸ್ಥಾಪನೆಗೆ ರ್ನಿಣಯ ಕೈಗೊಳ್ಳಲಾಯಿತು. ಇದರಿಂದ ಬಡ, ಸಾಮಾನ್ಯ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ವೈದ್ಯಕಿಯ ೇತ್ರದಲ್ಲಿ ಅಪಾರ ಅವಕಾಶ ಕಲ್ಪಿಸಲಾಯಿತು.
ರಾಜ್ಯದಲ್ಲಿ 22 ವೈದ್ಯಕಿಯ ಕಾಲೇಜು ಸ್ಥಾಪಿಸಲಾಗಿದೆ. ಕಳೆದ ವರ್ಷ ಬಾಗಲಕೋಟೆ ಹಾಗೂ ರಾಮನಗರದಲ್ಲಿ ಸ್ಥಾಪನೆಗೆ ಕ್ರಮಕೈಗೊಂಡು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂತಹ ಕಾಲೇಜುಗಳ ಸ್ಥಾಪನೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಧ್ಯತೆ ವಹಿಸಿ ಮಾತನಾಡಿದರು. ಡೀನ್ ಡಾ.ಸಂದೀಪ್ ಎಚ್.ವಿ.ಪ್ರಾಸ್ತಾವಿಕ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯ ಬಾಬುರಾವ ಕಾಡ್ಲೂರ, ಡಾ. ನಿರಂಜನ್, ಉಪ ಪ್ರಾಚಾರ್ಯ ಬಸವರಾಜ ಬಿರಾದಾರ್, ಯಿಮ್ಸ್ನ ವೈದ್ಯರು, ಸಿಬ್ಬಂದಿ ಭಾಗವಹಿಸಿದ್ದರು.
ಉಪನ್ಯಾಸಕಿ ದೀರಾ ಮೀಸ್ಮಾ ನಿರೂಪಿಸಿದರು. ಪ್ರಭಾರಿ ಪ್ರಾಚಾರ್ಯ ಸಿದ್ದರಾಮಪ್ಪ ಸಜ್ಜನ್ ವಂದಿಸಿದರು.
ವಿದೇಶಿ ಭಾಷೆಗಳ ಕಲಿಕೆಗೆ ಅವಕಾಶ
ಭಾರತ ಸೇರಿ ವಿದೇಶಗಳಲ್ಲಿ ನರ್ಸಿಂಗ್ ಸೇವೆಗೆ ಅಪಾರ ಬೇಡಿಕೆ ಇದೆ. ವಿಶೇಷವಾಗಿ ಜರ್ಮನಿ,ಜಪಾನ್,ಇಟಲಿ ಹಾಗೂ ಆಸ್ಟ್ರೆಲಿಯಾಗಳಲ್ಲಿ ಅಪಾರ ಬೇಡಿಕೆಯಿದ್ದು, ಆದರೆ ಆಯಾ ದೇಶಗಳ ಭಾಷೆಗಳ ಾನ ಹಾಗೂ ಇಂಗ್ಲೀಷ್ ಾನ ಹೊಂದುವುದು ಬಹಳ ಮುಖ್ಯವಾಗಿದೆ. ಕೆಲವು ವೈದ್ಯಕಿಯ ಕಾಲೇಜುಗಳಲ್ಲಿ ಲಾಂಗ್ವೇಜ್ ಲ್ಯಾಬ್ ಸ್ಥಾಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳು ಈಗಿನಿಂದಲೇ ಭಾಷಾಾನ, ಕೌಶಲ ಮತ್ತು ಉತ್ತಮ ಸಂವಹನ ಹಾಗೂ ರೋಗಿಗಳೊಂದಿಗೆ ಉತ್ತಮ ವರ್ತನೆ, ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಚಿವ ಡಾ.ಪಾಟೀಲ್ ಕಿವಿಮಾತು ಹೇಳಿದರು.
ಐದು ವರ್ಷಗಳಲ್ಲಿ ವಿವಿಧ ಆಸ್ಪತ್ರೆಗಳ ಸ್ಥಾಪನೆ
ಮುಂದಿನ ಐದು ವರ್ಷಗಳ ಯೋಜನೆ ರೂಪಿಸಿ ಪ್ರತಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ, ಟ್ರಾಮಾ ಸೆಂಟರ್ ಹಾಗೂ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವೈದ್ಯಕಿಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು. ಕಲಬುರಗಿ, ಮೈಸೂರು, ಬೆಳಗಾವಿ, ಕೊಪ್ಪಳ, ಬಳ್ಳಾರಿ, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರುಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗಿದೆ. ಇನ್ನೂ ಕೆಲವು ಉದ್ಘಾಟನೆ ಹಂತದಲ್ಲಿವೆ ಎಂದರು. ಯಾದಗಿರಿ, ಕಾರವಾರ, ಗದಗಗಳಲ್ಲಿ ಹಣಕಾಸು ಲಭ್ಯತೆ ಮೇಲೆ ರ್ನಿಣಯ ಕೈಗೊಳ್ಳಲಾಗುತ್ತದೆ. ಕಲಬುರಗಿ, ಮೈಸೂರು, ತುಮಕೂರು, ಮಂಡ್ಯ ಹಾಗೂ ಬೀದರ್, ರಾಯಚೂರು ಹಾಗೂ ಕಾರವಾರಗಳಲ್ಲಿ ಕ್ಯಾನ್ಸರ್ ಆಸ್ಪತ್ರೆಗಳ ಸ್ಥಾಪನೆಗೂ ಕ್ರಮ ಕೈಗೊಂಡಿದೆ. ಕಲಬುರಗಿ, ಹಾವೇರಿ ಮತ್ತು ಹುಬ್ಬಳ್ಳಿಗಳಲ್ಲಿ ಟ್ರಾಮಾ ಸೆಂಟರ್ ಸಹ ಸ್ಥಾಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.