ಚಿಕ್ಕೋಡಿ ಪಟ್ಟಣದ ಬಸಪ್ರಭು ಕೋರೆ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕ್ಯೂರಿಯಾಸಿಟಿ ಕಾರ್ನಿವಲ್ ವಿಜ್ಞಾನ ವಸ್ತುಪ್ರದರ್ಶನವನ್ನು ಬಸವರಾಜ ಪಾಟೀಲ ಉದ್ಘಾಟಿಸಿದರು. ಮಹೇಶ ಭಾತೆ, ಎಸ್.ಎಸ್.ಕವಲಾಪುರೆ, ಎನ್.ಎಸ್.ವಂಟಮುತ್ತೆ ಇತರರಿದ್ದರು.
ಚಿಕ್ಕೋಡಿ: ಸಂಶೋಧನಾ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಸರ್ಕಾರ ಈ ಕ್ಷೇತ್ರಕ್ಕೆ ಹೆಚ್ಚು ಅನುದಾನ ವಿನಿಯೋಗಿಸುತ್ತಿದೆ ಹಾಗಾಗಿ, ಯುವಜನರು ಅವಕಾಶದ ಲಾಭ ಪಡೆದು ಸಾಧನೆ ಮಾಡಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಬಸವರಾಜ ಪದ್ಮಶಾಲಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಬಸಪ್ರಭು ಕೋರೆ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಕ್ಯೂರಿಯಾಸಿಟಿ ಕಾರ್ನಿವಲ್-2025 ವಿಜ್ಞಾನ ವಸ್ತು ಪ್ರದರ್ಶನ, ರಸಪ್ರಶ್ನೆ, ಕಲಾಸಂಗಮ, ಆಹಾರಮೇಳ, ಕಾಮ್ ಎಕ್ಸ್ಪೋ ಕಾರ್ಯಮದಲ್ಲಿ ಮಾತನಾಡಿ, ಇಂದು ಎಐ, ಡೇಟಾ ಸೈನ್ಸ್ ಕ್ರಾಂತಿ ಮಾಡುತ್ತಿದೆ. ಈ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ ಮತ್ತು ಆವಿಷ್ಕಾರಗಳು ಮುಂದಿನ ಪೀಳಿಗೆಗೆ ಉದ್ಯೋಗಾವಕಾಶ ಒದಗಿಸಲಿವೆ. ಸೃಜನಶೀಲತೆ ಮತ್ತು ನವೀನ ಕೌಶಲ ವೃದ್ಧಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.
ಕ್ಯೂರಿಯಾಸಿಟಿ ಕಾರ್ನಿವಲ್-2025 ವಿಜ್ಞಾನ ವಸ್ತುಪ್ರದರ್ಶನವನ್ನು ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಬಸವರಾಜ ಪಾಟೀಲ ಉದ್ಘಾಟಿಸಿದರು. ಕ್ಯೂರಿಯಾಸಿಟಿ ಕಾರ್ನಿವಲ್‌ದಲ್ಲಿ 430 ತಂಡಗಳು ಭಾಗವಹಿಸಿದ್ದವು. ಪದವಿಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ 1,300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದ ವಿಜ್ಞಾನ ವಸ್ತುಪ್ರದರ್ಶನ, ರಸಪ್ರಶ್ನೆ, ಆಹಾರಮೇಳ, ಕಲಾಸಂಗಮ, ಕಾಮ್ ಎಕ್ಸ್ಪೋ ಹಾಗೂ ನೃತ್ಯಪ್ರದರ್ಶನ ಎಲ್ಲರ ಗಮನಸೆಳೆದವು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಎಸ್.ಎಸ್.ಕವಲಾಪುರೆ, ಎನ್.ಎಸ್.ವಂಟಮುತ್ತೆ, ನಿವೃತ್ತ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ, ಐಕ್ಯೂಎಸಿ ಸಂಯೋಜಕ ಡಾ.ವಿನಾಯಕ ಮಂಜಲಾಪುರ, ಸಂಘಟನಾ ಕಾರ್ಯದರ್ಶಿ ಮಹೇಶ ಮದಬಾವಿ, ಡಾ.ಸಿದ್ಧಲಿಂಗ ಮಟ್ಟೆಪ್ಪನವರ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ, ಡಾ.ಎಸ್.ಎಂ.ಪಾಟೀಲ, ಡಾ.ಲಕ್ಷ್ಮೀಕಾಂತ ನಾಯಕ, ಡಾ.ರಾಮಣ್ಣ, ಡಾ.ಬಾಪೂಗೌಡ ಪಾಟೀಲ, ಮಲ್ಲಿಕಾರ್ಜುನ ಜರಳಿ, ಎಸ್.ಇ.ಅವರಾದಿ, ಸುಷ್ಮಾ ಜಮದಾಡೆ ಇತರರು ಇದ್ದರು. ಪದವಿ ಮಹಾವಿದ್ಯಾಲಯದ ಉಪಪ್ರಾಚಾರ್ಯ ಸುಧೀರ ಕೋಟಿವಾಲೆ ಸ್ವಾಗತಿಸಿದರು. ಡಾ.ಗೀತಾಂಜಲಿ ದೊಡ್ಡಮನಿ ಹಾಗೂ ಪದ್ಮಶ್ರೀ ಚೌಗಲಾ ನಿರೂಪಿಸಿದರು. ಪದವಿಪೂರ್ವ ಪ್ರಾಚಾರ್ಯ ಪ್ರಕಾಶ ಕೋಳಿ ವಂದಿಸಿದರು.