Theft of temple hundi collections and deity's ornaments from four temples.
ಟೇಕಲ್: ಮಾಲೂರು ತಾಲೂಕು ಹುಳದೇನಹಳ್ಳಿ ಗ್ರಾಪಂ ವ್ಯಾಪ್ತಿಯ ವೆಂಕರಟರಾಜನಹಳ್ಳಿ ಹಾಗೂ ತಿಮ್ಮನಾಯಕನಹಳ್ಳಿಗಳ 4 ದೇವಾಲಯಗಳಲ್ಲಿ ಶುಕ್ರವಾರ ರಾತ್ರಿ ಅಪರಿಚಿತರು ದೇಗುಲದ ಹುಂಡಿ, ಚಿನ್ನಾಭರಣ ಕಳವು ಮಾಡಿದ್ದಾರೆ.
ವೆಂಕಟರಾಜನಹಳ್ಳಿಯ ರೇಣುಕಾವ ಯಲ್ಲಮ್ಮ ದೇವಸ್ಥಾನದ ಬೆಳ್ಳಿ ಕಿರೀಟ, ಖಡ್ಗ, ಸರ ಮತ್ತು ಹುಂಡಿಯಲ್ಲಿನ ನಗದು, ಅಂಕಣಮ್ಮ ದೇಗುಲದ ದೇವಿಯ ಆಭರಣ ಮತ್ತು ಹುಂಡಿ, ತಿಮ್ಮನಾಯಕನಹಳ್ಳಿಯ ಸಫಲಮ್ಮ ದೇವಿ ಕಿರೀಟ, ಮಾಂಗಲ್ಯ ಸರ, ದಾನದ ಹಣ, ಯಲ್ಲಮ್ಮ ದೇವಸ್ಥಾನದಲ್ಲಿ ಬೆಳ್ಳಿ ಆಭರಣ ಕಳತನವಾಗಿದ್ದು ಈ ಎಲ್ಲ ಆಭರಣ ಮತ್ತು ಹುಂಡಿ ಸೇರಿ <6 ಲಕ್ಷಕ್ಕೂ ಹೆಚ್ಚು ಕಳವಾಗಿದೆ. ಗ್ರಾಮಸ್ಥರು ಮಾಸ್ತಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದರು.