Theft during the counting of Hundi money at Bangaru Tirupati 
ರಾಜ್ಯ

ಬಂಗಾರು ತಿರುಪತಿ ಹುಂಡಿ ಹಣ ಎಣಿಕೆ ಮಾಡುವಾಗ ಕಳವು

ಬೇತಮಂಗಲ: ಬಂಗಾರು ತಿರುಪತಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಗುರುವಾರ ಹುಂಡಿ ಹಣ ಎಣಿಕೆ ಮಾಡಲು ಚೀಲದಲ್ಲಿ ಹಣ ತರುವಾಗ 3,100 ರೂ. ಎಗರಿಸಿದ್ದ ಡಿ ಗ್ರೂಪ್​ ನೌಕರ ಎಚ್​.ಆರ್​.ಮಂಜುನಾಥ್​ ಎಂಬಾತನನ್ನು ಅಮಾನತು ಮಾಡಲಾಗಿದೆ.
ಡಿ ಗ್ರೂಪ್​ ನೌಕರ ಎಚ್​.ಆರ್​.ಮಂಜುನಾಥ್​

ಹುಂಡಿಗಳಲ್ಲಿದ್ದ ಹಣವನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಎಣಿಕೆ ಸ್ಥಳಕ್ಕೆ ಹಾಕುವ ಸಮಯದಲ್ಲಿ ಚೀಲದಿಂದ ಹಣ ಎಗರಿಸಿದ್ದು, ಸಿಸಿ ಟಿವಿಯಲ್ಲಿ ದೃಶ್ಯ ಗಮನಿಸಿದ ದೇಗುಲ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ತಣ ಸಿಬ್ಬಂದಿ ನೆರವಿನೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು ಪರಿಶೀಲಿಸಿದರು. ಆತ 3,100 ರೂ. ಕಳವು ಮಾಡಿರುವುದು ಗೊತ್ತಾಯಿತು. ನಂತರ ಆರೋಪಿಯನ್ನು ಬೇತಮಂಗಲ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
"

14,43,915 ಸಂಗ್ರಹ

ಪ್ರತಿ ಶ್ರಾವಣ ಶನಿವಾರ, ಜಾತ್ರೆಗೂ ಮುನ್ನ ನಡೆಯುವಂತೆ ಗುರುವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ 13,88,605 ರೂ. ಮತ್ತು ಅನ್ನದಾಸೋಹಕ್ಕಾಗಿ ಭಕ್ತರು ನೀಡಿದ್ದ 55,310 ಸೇರಿ ಒಟ್ಟು 14,43,915 ರೂ. ಸಂಗ್ರಹವಾಗಿದೆ. ಕ್ಯಾಸಂಬಳ್ಳಿ ಗ್ರಾಮೀಣ ಬ್ಯಾಂಕ್​ನಲ್ಲಿ ಹಣ ಸಂಗ್ರಹಿಸಿಡಲಾಗಿದೆ ಎಂದು ದೇಗುಲ ಇಒ ತಿಳಿಸಿದ್ದಾರೆ.

ದೇವಾಲಯ ಆಡಳಿತಾಧಿಕಾರಿ, ಕೋಲಾರ ಉಪವಿಭಾಗಾಧಿಕಾರಿ ಎಸ್​.ಎಂ.ಮಂಗಳಾ ದೇವಾಲಯಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
"

ಣಿಕೆ ಸ್ಥಳಕ್ಕೆ ಹುಂಡಿಗಳಿಂದ ಹಣ ಸಾಗಿಸುತ್ತಿದ್ದ ವೇಳೆ ನೌಕರ ಮಂಜುನಾಥ್​ ಹಣ ಕಳವು ಮಾಡಿದ್ದಾನೆ. ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಕಾರಣ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿಲಾಗಿದೆ. ತಣ ಜಾರಿಗೆ ಬರುವಂತೆ ನೌಕರನನ್ನು ಅಮಾನತು ಮಾಡಲಾಗಿದೆ.

— ಮಂಜುನಾಥ್​ ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ
ಖಾಸಗಿ ವ್ಯಕ್ತಿಗಳಿಂದ ಹಣ ಎಣಿಕೆ?: ಅಯೋಧ್ಯೆ ರಾಮ ಮಂದಿರದ ಹುಂಡಿ ಹಣ ಕಳವು ಪ್ರಕರಣದ ನಂತರ ಎಚ್ಚೆತ್ತ ರಾಜ್ಯ ಸರ್ಕಾರವು ಜು.14 ರಿಂದ ಹುಂಡಿ ಎಣಿಕೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಅದರಂತೆ ಪ್ರಮುಖವಾಗಿ ಹುಂಡಿ ಎಣಿಕೆಗೆ ಖಾಸಗಿ ವ್ಯಕ್ತಿಗಳು ಅಥವಾ ಸ್ಥಳಿಯರು ಎಣಿಕೆ ಕಾರ್ಯದಲ್ಲಿ ಭಾಗವಹಿಸಬಾರದು ಎಂದು ಸ್ಪಷ್ಟವಾಗಿ ಉಲ್ಲೆಖ ಮಾಡಿದೆ. ಆದರೆ ದೇವಾಲಯ ಅಧಿಕಾರಿಗಳು, ಸಿಬ್ಬಂದಿ ಜತೆಗೆ 20ಕ್ಕೂ ಹೆಚ್ಚು ಮುಳಬಾಗಿಲಿನ ಖಾಸಗಿ ಸ್ವಯಂ ಸೇವಾ ಮಹಿಳೆಯರ ಮೂಲಕ ಎಣಿಕೆ ಮಾಡಿಸಿದ್ದಾರೆ. ಅಲ್ಲದೆ ಸ್ಥಳಿಯ ಮುಖಂಡರನ್ನೂ ಉಸ್ತುವಾರಿಗೆ ನೇಮಿಸಿದ್ದರು ಎನ್ನಲಾಗಿದ್ದು, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿವೆ.
ಪೊಲೀಸರು ಅಥವಾ ಗೃಹ ರಕ ದಳ ಸಿಬ್ಬಂದಿ ನೇಮಕ ಮಾಡಿಕೊಳ್ಳುವಲ್ಲಿ ಸಹ ರ್ನಿಲ್ಯ ವಹಿಸಲಾಗಿದೆ ಎಂಬ ಆೇಪ ಕೇಳಿ ಬಂದಿದೆ.