ಸಿರಿಗೇರಿ ಗ್ರಾಮದ ಜೆ.ಎಚ್.ವಿ ಶಾಲೆ ಬಯಲು ರಂಗ ಮಂದಿರದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪಕ್ಕೆ ಧಾತ್ರಿ ರಂಗ ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ ಚಾಲನೆ ನೀಡಿದರು. ಬಯಲಾಟ ಕಲಾವಿದರಾದ ಚನ್ನನ ಗೌಡ, ಚಿನ್ನಪ್ಪ, ಶಿಕ್ಷಕ ಉದಯ ಕುಮಾರ್, ನಟ ಮತ್ತು ನಿರ್ದೇಶಕ ವೈಭವ ಶರಣ್ ಇತರರಿದ್ದರು.
- ಧಾತ್ರಿ ರಂಗ ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ ಹೇಳಿಕೆ
- ಕಲೆ ಉಳಿಸಿ ಬೆಳೆಸಿ
ಸಿರಿಗೇರಿ: ಗ್ರಾಮದ ಜೆ.ಎಚ್.ವಿ ಶಾಲೆ ಬಯಲು ರಂಗ ಮಂದಿರದಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪಕ್ಕೆ ಧಾತ್ರಿ ರಂಗ ಸಂಸ್ಥೆ ಅಧ್ಯಕ್ಷ ಎಂ.ಪಂಪನಗೌಡ ಚಾಲನೆ ನೀಡಿದರು.
ರಂಗ ತರಬೇತಿ ಶಿಬಿರದಲ್ಲಿ ಪಡೆದ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳು ಕಲೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು. ಶಿಬಿರದಲ್ಲಿ ತರಬೇತಿ ಹೊಂದಿದ ಮಕ್ಕಳು ಮೂಕಾಭಿನಯ, ಹಾಸ್ಯ, ನಾಟಕ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ರಂಗಗೀತೆಗಳು, ಜಾನಪದ ನೃತ್ಯ ಪ್ರದರ್ಶನ ಮಾಡಿದರು.
ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಯಲಾಟ ಕಲಾವಿದರಾದ ಚನ್ನನ ಗೌಡ, ಚಿನ್ನಪ್ಪ, ಶಿಕ್ಷಕ ಉದಯ ಕುಮಾರ್, ನಟ ಮತ್ತು ನಿರ್ದೇಶಕ ವೈಭವ ಶರಣ್, ಸಂಸ್ಥೆಯ ಸದಸ್ಯರಾದ ವಿ. ಷಣ್ಮುಖ, ರೇಣುಕಮ್ಮ ಜಿ.ಎಂ., ವೀರೇಶಯ್ಯ ಸ್ವಾಮಿ ಇತರರಿದ್ದರು.