ಚಿಂಚೋಳಿ ಮತೇತ್ರದ ಗಡಿಕೇಶ್ವಾರದಲ್ಲಿ ಹಮ್ಮಿಕೊಂಡ ಜಿಪಿಎಲ್ ಕ್ರಿಕೆಟ್ ಟೂರ್ನಿಗೆ ಸಿಪಿಐ ಭೀಮಾಶಂಕರ ಯಲ್ಮಡಗಿ ಬುಧವಾರ ಚಾಲನೆ ನೀಡಿದರು. ಪಿಎಸ್ಐ ಅಮರ ಕುಲಕರ್ಣಿ, ವಿಜಯಕುಮಾರ ಕೊರವಾರ, ಸಿದ್ದು ಮುಕರಂಬಿ, ವೀರೇಶ ರೆಮ್ಮಣ್ಣಿ, ಅಜಯ, ಆರೀಫ್, ರಬ್ಬಾನಿ ಇತರರಿದ್ದರು.
ಚಿಂಚೋಳಿ : ಇಂದಿನ ಆಧುನಿಕ ಯುಗದಲ್ಲಿ ಯುವ ಪೀಳಿಗೆ ಮಾನಸಿಕ, ದೈಹಿಕವಾಗಿ ಸದೃಢರಾಗಲು ಗ್ರಾಮೀಣ ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಸಿಪಿಐ ಭೀಮಾಶಂಕರ ಯಲ್ಮಡಗಿ ಸಲಹೆ ನೀಡಿದರು.
ಗಡಿಕೇಶ್ವಾರ ಗ್ರಾಮದಲ್ಲಿ ಪ್ರೀಮಿಯರ್ ಲೀಗ್-2025 ಟೀಮ್ ಹಮ್ಮಿಕೊಂಡ ಜಿಪಿಎಲ್ ಕ್ರಿಕೆಟ್ ಟೂರ್ನಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಯುವ ಪೀಳಿಗೆ ಹೆತ್ತವರು, ಗುರು ಹಿರಿಯರಿಗೆ ಗೌರವ ನೀಡಬೇಕು. ಮೊಬೈಲ್ ಬಳಕೆ ಕಡಿಮೆ ಮಾಡಿ ಕೃಷಿ, ಶಿಣ, ಆಧ್ಯಾತ್ಮಿಕ ಚಿಂತನೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು.
ಗಡಿಕೇಶ್ವಾರ ಎಂಬ ಗ್ರಾಮೀಣ ಪ್ರದೇಶದ ಪುಣ್ಯ ಭೂಮಿಯಲ್ಲಿ ವಿಶೇಷ ಶಕ್ತಿ ಅಡಗಿದೆ. ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೆ ಸನ್ಮಾರ್ಗದಲ್ಲಿ ನಡೆದು ಉತ್ತಮ ಶಿಣದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸುಲೇಪೇಟ ಪಿಎಸ್ಐ ಅಮರ ಕುಲಕರ್ಣಿ, ವಿಜಯಕುಮಾರ ಕೋರವಾರ, ಸಿದ್ದು ಮುಕರಂಬಿ, ವೀರೇಶ ರೆಮ್ಮಣ್ಣಿ, ಅಜಯ, ಆರೀಫ್, ರಬ್ಬಾನಿ, ಸುಧಾಕರ, ಪಿಂಟು ಗುತ್ತೇದಾರ್, ಗೋಪಾಲ, ರೇವಣಸಿದ್ದಪ್ಪ ಅಣಕಲ್, ಅಯಾಜ್ ಪಟೇಲ್, ಶರಣು ಕೋರವಾರ, ಮಹಾದೇವ ಮುಕರಂಬಿ, ಶಿವ ಬಟಗೇರಾ, ನಾಗರಾಜ, ಗೋಸ್ವಾಮಿ ದಿಗಂಬರ್, ಇಸ್ರಪ್ಪ, ಮಲ್ಲು ದೇಸಾಯಿ ಇತರರಿದ್ದರು.